ಬಳ್ಳಾರಿ

ಹರಪನಹಳ್ಳಿಯ ಅರಸೀಕೆರೆ ಗ್ರಾಮದಲ್ಲಿ ಕೋರೋನಾ ವಾರಿಯರ್ಸ್ ಗೆ ಹೂಮಳೆಯೊಂದಿಗೆ ಮೆರವಣಿಗೆ ಮಾಡಿದ ಗ್ರಾಮಸ್ಥರು

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಗ್ರಾಮದಲ್ಲಿ ಶುಕ್ರವಾರ ಕೊರೋನ ವಾರಿಯರ್ಸ್ಗಳಿಗೆ ಕೋಲ ಶಾಂತೇಶ್ವರ ಮಠದ ಸಿಬ್ಬಂಧಿಗಳಿಂದ ಹಾಗೂ ಗ್ರಾಮದ ಸಮಸ್ಥ ಜನರಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆಯ ಸಿಬ್ಬಂಧಿಗಳು, ಮಾಧ್ಯಮ ಮಿತ್ರು, ಗ್ರಾಮ ಪಂಚಾಯಿತಿ ಸಿಬ್ಬಂಧಿಗಳು, ಬೆಸ್ಕಾಂ ಸಿಬ್ಬಂಧಿಗಳನ್ನು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಿಂದ ಶ್ರೀ ಕೋಲ ಶಾಂತೇಶ್ವರ ಮಠದವರೆಗೆ ಮೆರವಣಿಗೆಯ ಮೂಲಕ ಕರೆತಂದು, ರಸ್ತೆಯ ಎರಡೂ ಬದಿ ಹೂವಿನ ಮಳೆ ಸುರಿಸಿ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಶಾಂತಲಿಂಗ ದೇಶೀಕೇಂದ್ರದ ಸ್ವಾಮೀಜಿ ಮಾತನಾಡಿ ಕೋರೋನಾದಿಂದ ಎಲ್ಲಾ ಕ್ಷೇತ್ರಗಳಿಗೂ ಪೆಟ್ಟು ಬಿದ್ದಿದೆ, ಇಂತಹ ಒಂದು ಭಯಾನಕ ಮಹಾಮಾರಿ ಕರೋನ ದಾಳಿ ಮಾಡಿದರೂ ಲೆಕ್ಕಿಸದೆ, ಗ್ರಾಮದ ಸಮಸ್ಥ ಇಲಾಖಾ ಸಿಬ್ಬಂಧಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು, ನಿಸ್ಕಲ್ಮಶ ಸೇವೆಯನ್ನು ಮಾಡುತ್ತಿದ್ದಾರೆ.ಎಂದು ಶ್ರೀ ಗಳು ತಿಳಿಸಿದರೆ, ಇಂತಹ ದೇಶ ಕಾಯುವ ಸೈನಿಕರ ಹಾಗೆ ಸರ್ಕಾರಿ ನೌಕರರು, ವೈದ್ಯರು, ಪೊಲೀಸ್ ಇಲಾಖೆಯವರು ಜವಾಬ್ದಾರಿಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಸಂಸದ ವೈ ದೇವೆಂದ್ರಪ್ಪ ತಿಳಿಸಿದ್ದಾರೆ.

ಕಾರ್ಯಕ್ರಮದ ಸಮಯದಲ್ಲಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ, ಜಗಳೂರು ತಾಹಸೀಲ್ದಾರ್ ಹುಲ್ಮನೆ ತಿಮ್ಮಣ್ಣ, ಉಪ ತಹಸೀಲ್ದಾರ್ ಫಾತಿಮಾ, ಪಿಎಸ್ಐ ಕಿರಣ್ ಕುಮಾರ್, ರಾಜಪ್ಪ, ಮಹೇಶಪ್ಪ, ವೈ.ಡಿ.ಅಣ್ಣಪ್ಪ, ಗುರು ಶಾಂತನಗೌಡ್ರು, ಶಾಂತ ಪಾಟೀಲ್, ವೈದ್ಯಾಧಿಕಾರಿ ಇದಾಯತ್ ಭುವನೇಶ್ವರ್ ಮತ್ತಿತರರು ಇದ್ದರು.

web designing

ವರದಿ : ಸೂರ್ಯಪ್ರಕಾಶ್ ಆರ್, ಸಂಪಾದಕರು.

rocksalt
Contact us for classifieds and ads : +91 9066666481

2 Comments

  1. I am also commenting to let you know of the helpful encounter my friend’s daughter found reading through your web page. She figured out numerous issues, not to mention what it’s like to have an amazing giving mood to have men and women really easily have an understanding of selected impossible subject areas. You really exceeded our own expectations. Many thanks for imparting the interesting, safe, explanatory and even easy thoughts on the topic to Janet.

  2. I blog frequently and I genuinely appreciate your content.
    This great article has truly peaked my interest.
    I will take a note of your blog and keep checking for new
    information about once per week. I subscribed to your Feed too.

Leave a Response

error: Content is protected !!