ಹಾಸನ

ಜಿಲ್ಲೆಯಲ್ಲಿ ಹೊಸ 18 ಕೊವೀಡ್ ಪ್ರಕರಣ: ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ

ಹಾಸನ,ಮೇ.22(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಹೊಸದಾಗಿ 18 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೊಸದಾಗಿ ಪತ್ತೆಯಾಗಿರುವ ಸೋಂಕಿತರೆಲ್ಲರೂ ಮುಂಬೈ ಮೂಲದಿಂದ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಬಂದವರಾಗಿದ್ದು, ಅವರೆಲ್ಲರನ್ನೂ ಹಾಸನದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಇಂದು ವರದಿಯಾದ ಸೋಂಕಿತರಲ್ಲಿ 10 ಮಂದಿ ಪುರುಷರು ಮತ್ತು 7 ಮಂದಿ ಮಹಿಳೆಯರು ಸೇರಿದಂತೆ 7 ವರ್ಷದ ಬಾಲಕನಲ್ಲಿಯೂ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯಕ್ಕೆ ಸೋಂಕಿತರಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿರುವುದಿಲ್ಲ, ಎಲ್ಲರೂ ಆರೋಗ್ಯವಂತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

web designing

ಒಟ್ಟಾರೆ ಈವರೆಗೆ ಆಲೂರು ತಾಲ್ಲೂಕಿನಲ್ಲಿ 3, ಅರಕಲಗೂಡು 2, ಚನ್ನರಾಯಪಟ್ಟಣ 60, ಹಾಸನ 3 ಹಾಗೂ ಹೊಳೆನರಸೀಪುರ 16 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಈ ಹಿಂದೆ ಹಾಸನದಲ್ಲಿ ದಾಖಲಾದ ಪ್ರಕರಣದಲ್ಲಿ ತಮಿಳುನಾಡಿನಿಂದ ಬಂದ ವ್ಯಕ್ತಿಯು ಯಾವುದೇ ದಾಖಲಾತಿಗಳಿಲ್ಲದೆ ಲಾರಿಯಲ್ಲಿ ಜಿಲ್ಲೆಗೆ ಬಂದು ನೇರವಾಗಿ ತನ್ನ ಮನೆಗೆ ತೆರಳಿದ್ದಾನೆ. ಸ್ಥಳೀಯದವರಿಗೆ ಈ ವಿಷಯ ತಿಳಿದು ವಾಪಸಗುವಂತೆ ಒತ್ತಾಯಿಸಿದ ಕಾರಣ ಆ ವ್ಯಕ್ತಿಯು ಆಸ್ಪತ್ರೆಗೆ ಬಂದಿದ್ದು, ಆ ವ್ಯಕ್ತಿಯ ಹೆಂಡತಿ ಮಾತ್ರ ಆತನೊಡನೆ ಸಂಪರ್ಕದಲ್ಲಿದ್ದದ್ದರಿಂದ ಆಕೆಗೂ ಸೋಂಕು ತಗುಲಿದೆ ಎಂದರು.

ಒಟ್ಟಾರೆ ಜಿಲ್ಲೆಗೆ 1654 ಜನರು ಹೊರ ರಾಜ್ಯಗಳಿಂದ ಬಂದಿದ್ದು, ಸೋಂಕು ಖಾತರಿಯಾಗಿಲ್ಲದವರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೊರೋನಾ ಸೋಂಕಿತರನ್ನು ಪರೀಕ್ಷಿಸುತ್ತಿರುವ ವೈದ್ಯರು ತಮ್ಮ ಮನೆಗಳಿಗೆ ಹೋಗಲು ಸಾಧ್ಯವಿಲ್ಲ, ಹಾಗಾಗಿ ಅವರನ್ನು ಹೋಟೆಲ್ ಕ್ವಾರಂಟೈನ್‍ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಿಂದ ಬಿಹಾರ್‍ಗೆ ಹೋಗಲು ಸಿದ್ಧವಾಗಿರುವ ಕಾರ್ಮಿಕರಿಗೆ ರೈಲು ವ್ಯವಸ್ಥೆ ಮಂಜೂರಾಗಿದ್ದು, ನಾಳೆ ಹಾಸನ ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು 1,600 ಜನ ಕಾರ್ಮಿಕರು ಬಿಹಾರ್‍ಗೆ ತೆರಳಲಿದ್ದಾರೆ ಎಂದು ಹೇಳಿದರು.

ಬಾಡಿಗೆದಾರರು ನಿಗದಿತಕ್ಕಿಂತ ಹೆಚ್ಚಿನ ಬಾಡಿಗೆಯನ್ನು ವಸೂಲಿ ಮಾಡುತ್ತಿರುವುದರಿಂದ ಬಾಡಿಗೆದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ನೀಡಿದ ಮಾಹಿತಿಗೆ ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಿ, ಆ ರೀತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

rocksalt
Contact us for classifieds and ads : +91 9066666481

3 Comments

  1. Thank you for your entire labor on this web site. My mom really loves managing investigations and it is obvious why. My partner and i learn all regarding the lively tactic you present sensible things through your web site and in addition invigorate response from some others on the situation then our favorite princess is truly starting to learn a whole lot. Take advantage of the rest of the year. You have been doing a stunning job.

Leave a Response

error: Content is protected !!