ಪ್ರಮುಖ ಸುದ್ದಿಗಳು

ವಿಜ್ಞಾನ-ತಂತ್ರಜ್ಞಾನದಿಂದಲೇ ಕೊರೋನಾ ಓಡಿಸಲು ಆಗಿಲ್ಲ ; ಇನ್ನೂ ಅಜ್ಜಿ ಹಬ್ಬದಿಂದ ಕೊರೋನಾ ಮಹಾಮಾರಿ ಓಡಿ ಹೋಗುತ್ತಾ…??? ರಾಜ್ಯದ ಹಲವು ಕಡೆ ಕೊರೋನಾ ಮಹಾಮಾರಿಗೆ ಅಜ್ಜಿ ಹಬ್ಬವೆಂಬ ಮೌಢ್ಯತೆಯ ಮದ್ದು

ಇಂದು ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ಕರ್ನಾಟಕವನ್ನೂ ಬಿಟ್ಟಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಮಾತ್ರ ಮಹಾಮಾರಿ ನಮ್ಮೂರಿಗೆ ಬರಬಾರದು ಅಂತ ಗ್ರಾಮಸ್ಥರೆಲ್ಲ ಸೇರಿ ಬೇವಿನ ಮರದ ಕೆಳಗೆ ಹೋಳಿಗೆ ಅರ್ಪಿಸುವ ಮೂಲಕ ವಿಶೇಷವಾಗಿ “ಅಜ್ಜಿ ಹಬ್ಬ” ಆಚರಣೆ ಮಾಡಿರುವ ಒಂದೊಂದೇ ಘಟನೆಗಳು ಬೆಳಕಿಗೆ ಬರುತ್ತಿವೆ.

ಹಿಂದಿನ ಪೂರ್ವಜರು ಗ್ರಾಮಗಳಲ್ಲಿ ಪ್ಲೇಗ್ ಹಾಗೂ ಕಾಲರದಂತಹ ಮಹಾಮಾರಿ ಕಾಯಿಲೆಗಳು ಬಂದಾಗ ಊರುಗಳಲ್ಲಿ ಅಜ್ಜಿ ಹಬ್ಬವನ್ನು ಆಚರಿಸುತ್ತಿದ್ದರು ಇದರಿಂದ ಕಾಯಿಲೆ ಆ ಗ್ರಾಮದಿಂದ ಸಂಪೂರ್ಣವಾಗಿ ವಾಸಿಯಾಗುತ್ತಿತ್ತು ಎಂಬ ನಂಬಿಕೆ ಇದೆ. ಅದೇ ರೀತಿ ಕೊರೋನಾ ಕಾಯಿಲೆ ನಮ್ಮ ಗ್ರಾಮಕ್ಕೆ ಬರದಂತೆ ಇರಲಿ ಎಂಬ ಹಿರಿಯರ ನಂಬಿಕೆಯಿಂದ ಈ ಹಬ್ಬವನ್ನು ನಮ್ಮ ರಾಜ್ಯದ ಕೆಲವು ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಆಚರಿಸುತ್ತಿದ್ದಾರೆ . ಉದಾಹರಣೆಗೆ ನಮ್ಮ ದಾವಣಗೆರೆ ಜಿಲ್ಲೆಯ ಕೆಲವು ಭಾಗಗಳಲ್ಲಿ, ಬಳ್ಳಾರಿ, ಚಿತ್ರದುರ್ಗ, ಹಾವೇರಿ, ಬೆಂಗಳೂರು ಗ್ರಾಮಾಂತರ ಹಾಗೂ ಇತ್ತೀಚಿನ ತುಮಕೂರು ಜಿಲ್ಲೆಗಳಲ್ಲಿ ಮೌಢ್ಯತೆಯ ಆಚರಣೆಗೆ ಒಳಪಟ್ಟಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜವರೇಗೌಡನಪಾಳ್ಯ ಗ್ರಾಮದಲ್ಲಿ ಅಜ್ಜಿ ಹಬ್ಬ ಮಾಡಿ ಗ್ರಾಮದ ಹೊರವಲಯದ ಪೂರ್ವ ದಿಕ್ಕಿನ ಬೇವಿನ ಮರದ ಸುತ್ತಲೂ ಪ್ರತಿ ಮನೆಯಿಂದ ಒಂದು ಮಣ್ಣಿನ ಕುಡಿಕೆ, ದ್ವೀಪ, ಬಳೆ, ಬಂಗಾರ, ಅರಿಶಿನ, ಕುಂಕುಮ, ಊದುಬತ್ತಿ, ಕರ್ಪೂರ ಎಲ್ಲವನ್ನೂ ಬಳಸಿ ಪೂಜೆ ಮಾಡುವ ಮೂಲಕ ಹೋಳಿಗೆ ಮೊಸರು ಅನ್ನವನ್ನು ಎಡೆ ಹಾಕಿ ನಂತರ ಬೇವಿನ ಮರಕ್ಕೆ ವಿವಿಧ ಬಗೆಯ ಹೂವುಗಳಿಂದ ಪೂಜೆ ಸಲ್ಲಿಸಿ ಅಲ್ಲೇ ಬಿಟ್ಟು ಬರುವ ವಿಶೇಷ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಣೆ ಮಾಡಲಾಯಿತು.

web designing

ಅಜ್ಜಿ ಹಬ್ಬದ ಹಿನ್ನೆಲೆ : ಸುಮಾರು ಮೂವತ್ತು ವರ್ಷದ ಹಿಂದೆ ಈ ಅಜ್ಜಿ ಹಬ್ಬ ಆಚರಿಸಿದ್ದರಂತೆ ಏಕೆಂದರೆ ನಮ್ಮ ಅಕ್ಕಪಕ್ಕದ ಊರುಗಳಲ್ಲಿ ಈ ಗ್ರಾಮದ ಮಕ್ಕಳಲ್ಲಿ ರಾಗಿ ಗಾತ್ರದ ಉಣ್ಣುಗಳು (ಅಮ್ಮ) ಕಾಣಿಸಿಕೊಂಡವು, ಧನ ಕರುಗಳು ಅನೇಕ ಕಾಯಿಲೆಗಳಿಂದ ಸಾಯುತ್ತಿದ್ದವು. ಈಗೋಮ್ಮೆ ಹಣ್ಣಣ್ಣು ಅಜ್ಜಿಯೊಂದು ಕುರಿ ಕಾಯುತ್ತಿದ್ದ ಒಬ್ಬ ಮಹಿಳೆಗೆ ನನ್ನ ತಲೆ ಬಹಳ ಕಡಿಯುತ್ತಿದೇ ಏನು ಇರಬಹುದು ನೋಡು ತಾಯಿ ಅಂತ ಹೇಳಿದ್ದರಂತೆ. ಅದಕ್ಕೆ ಅ ಮಹಿಳೆ ಅಜ್ಜಿಯ ತಲೆ ಕೂದಲು ಸರಿಸಿ ನೋಡಲು ಪ್ರಾರಂಭಿಸಿದ್ದಾರೆ. ಆ ಅಜ್ಜಿಯ ತಲೆಯ ತುಂಬೆಲ್ಲ ಕಣ್ಣುಗಳು ಇದ್ದವಂತೆ.

ಅದಿಕ್ಕೆ ಆ ಕುರಿ ಕಾಯುವ ಮಹಿಳೆ ಏನಜ್ಜಿ ನಿನ್ನ ತಲೆ ತುಂಬಾ ಕಣ್ಣುಗಳಿವೆ ಏನಿದು? ಎಂದು ಕೇಳಿದಾಗ, ಆ ಅಜ್ಜಿ ನೋಡವ್ವ ಮುಂಚೆ ಅಜ್ಜಿ ಹಬ್ಬ ಅಂತ ಮಾಡ್ತಿದ್ರು ಇವಾಗ ಮಾಡೋದು ಬಿಟ್ಟಿರೋದಕ್ಕೆ ಹೀಗೆ ಹಾಗಿದೆ ಎಂದು ಹೇಳಿ ತಕ್ಷಣ ಮಾಯವಾಗಿದ್ದರಂತೆ. ಇದನ್ನು ಕಂಡ ಕುರಿಗಾಹಿ ಮಹಿಳೆ ಅಕ್ಕಪಕ್ಕದ ಊರಿನವರಿಗೆಲ್ಲ ನಡೆದ ಘಟನೆ ತಿಳಿಸಿದ್ದಾಳೆ. ಆದ್ದರಿಂದ ಆ ನಂಬಿಕೆಯಿಂದಲೇ ಹಳ್ಳಿಯವರೆಲ್ಲಾ ಸೇರಿ ಊರಿನ ಹೊರಗೆ ಇರುವ ಬೇವಿನ ಮರದ ಕೆಳಗೆ ಒಬ್ಬಟ್ಟು ಇಟ್ಟು ಪೂಜೆ ಮಾಡಿ ಹಿಂದಿರುಗಿ ನೋಡದಂತೆ ಮನೆಗೆ ಬರುವ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಿಸುತ್ತಿದ್ದಾರಂತೆ.

ನಮ್ಮ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರು ನಮ್ಮ ಹಿರಿಯರ ಆಚಾರ- ವಿಚಾರ, ರೂಢಿ- ಸಂಪ್ರದಾಯಗಳು ಗ್ರಾಮೀಣ ಜನರಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದೇ ವಿಶೇಷ.

rocksalt
Contact us for classifieds and ads : +91 9066666481

16 Comments

  1. If you can compose extra short articles like this, I
    would certainly be truly thankful. Anyway, thank you so much!

Leave a Response

error: Content is protected !!