ಹಾಸನ

ಹಾಸನ

ಹಾಸನದಲ್ಲಿ ನೂರರ ಗಡಿ ದಾಟಿದ ಕೊರೋನಾ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮೀಟರ್ನ ವೇಗ ಹೆಚ್ಚಳವಾಗಿದೆ. ಮಂಗಳವಾರ ಹೊಸದಾಗಿ 13 ಪ್ರಕರಣ ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ. ಒಟ್ಟು 13 ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಹಿಂದಿರುಗಿದ ಟ್ರಾವೆಲ್ ಹಿಸ್ಟ್ರಿ ಹೊಂದಿದವರೇ ಆಗಿದ್ದು, ಎಲ್ಲರೂ ಚನ್ನರಾಯಪಟ್ಟಣ ಮೂಲದವರು ಎಂದು ಜಿಲ್ಲಾಧಿಕಾರಿ ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೋಂಕಿತ ಹದಿಮೂರು ಜನರನ್ನು ನಗರದ ಕೋವಿಡ್ ಆಸ್ಪತ್ರೆಯಲ್ಲಿಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗಿನ ಪ್ರಕರಣದಲ್ಲಿ ಸಕಲೇಶಪುರ ಹಾಗೂ ಬೇಲೂರಿನಲ್ಲಿ ಸೋಂಕಿತ ಪ್ರಕರಣ ವರದಿಯಾಗದ ಹಿನ್ನೆಲೆಯಲ್ಲಿ ಆ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಿದರು....
ಹಾಸನ

ಜಿಲ್ಲೆಯಲ್ಲಿ ಹೊಸ 18 ಕೊವೀಡ್ ಪ್ರಕರಣ: ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ

ಹಾಸನ,ಮೇ.22(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಹೊಸದಾಗಿ 18 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೊಸದಾಗಿ ಪತ್ತೆಯಾಗಿರುವ ಸೋಂಕಿತರೆಲ್ಲರೂ ಮುಂಬೈ ಮೂಲದಿಂದ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಬಂದವರಾಗಿದ್ದು, ಅವರೆಲ್ಲರನ್ನೂ ಹಾಸನದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಇಂದು ವರದಿಯಾದ ಸೋಂಕಿತರಲ್ಲಿ 10 ಮಂದಿ ಪುರುಷರು ಮತ್ತು 7 ಮಂದಿ ಮಹಿಳೆಯರು ಸೇರಿದಂತೆ 7 ವರ್ಷದ ಬಾಲಕನಲ್ಲಿಯೂ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯಕ್ಕೆ ಸೋಂಕಿತರಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿರುವುದಿಲ್ಲ, ಎಲ್ಲರೂ ಆರೋಗ್ಯವಂತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಒಟ್ಟಾರೆ ಈವರೆಗೆ ಆಲೂರು ತಾಲ್ಲೂಕಿನಲ್ಲಿ 3, ಅರಕಲಗೂಡು 2, ಚನ್ನರಾಯಪಟ್ಟಣ 60, ಹಾಸನ 3 ಹಾಗೂ ಹೊಳೆನರಸೀಪುರ 16 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಈ ಹಿಂದೆ ಹಾಸನದಲ್ಲಿ...
ಹಾಸನ

ಅಂಗವಿಕಲರು, ನಿರ್ಗತಿಕರು, ಬಡವರಿಗೆ 5 ಸಾವಿರ ಫುಡ್ ಕಿಟ್ ವಿತರಿಸಿದ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ

ಹಾಸನ; ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೇ ಅತಿ ಹೆಚ್ಚು ನೊಂದಿರುವ ಅಂಗವಿಕರು, ನಿರ್ಗತಿಕರು, ಬಡವರಿಗೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರಿಗೆ ಆಹಾರದ ಕಿಟ್ ನೀಡುವ ಮೂಲಕ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಸಹಾಯ ಹಸ್ತ ಚಾಚಿದ್ದಾರೆ. 5 ಸಾವಿರ ಫುಡ್ ಕಿಟ್ ವಿತರಿಸುವ ಮೂಲಕ ಬಡವರ ನೆರವಿಗೆ ಧಾವಿಸಿದ್ದಾರೆ. ಹಳ್ಳಿಮೈಸೂರು ಸುತ್ತಮುತ್ತಲ ಗ್ರಾಮಗಳಿಗೆ ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಪುಟ್ಟಸ್ವಾಮಿ ಅವರು ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ. ಲಾಕ್ಡೌನ್ ಆದಾಗಿನಿಂದಲೂ ಬಡವರಿಗೆ ಮತ್ತು ನೊಂದವರಿಗೆ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಪ್ರತಿನಿತ್ಯ ಫುಡ್ ಕಿಟ್ ವಿತರಿಸುತ್ತಿದ್ದು, ಪುಟ್ಟಸ್ವಾಮಿಯವರ ಈ ಕಾರ್ಯಕ್ಕೆ ಹಾಸನ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಬಡವರು, ನಿರ್ಗತಿಕರು, ಶೋಷಿತರ ಪರವಾಗಿ ದುಡಿಯುತ್ತಿರುವ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಈಗ ಲಾಕ್...
error: Content is protected !!