ಹಾವೇರಿ

ಹಾವೇರಿ

ಹಾವೇರಿಯ ಮೊದಲ ಕೊರೋನಾ ಪೇಶೆಂಟ್ ಗುಣಮುಖ

ಹಾವೇರಿ : ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ P-639 ವ್ಯಕ್ತಿಯು ಗುಣಮುಖನಾದ ಕಾರಣ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮೂಲತಃ ಸವಣೂರ ತಾಲೂಕಿನ ಎಸ್.ಎಮ್. ಕೃಷ್ಣ ನಗರದ ನಿವಾಸಿಯಾದ P-639 ವ್ಯಕ್ತಿಯು ಮುಂಬೈನಿಂದ ಮೇ 4 ರಂದು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಪರೀಕ್ಷೆಗೆ ಒಳಪಡಿಸಿದ್ದಾಗ ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ ಆಗಮಿಸಿದ್ದ 40 ವರ್ಷ ಸಹೋದರನಿಗೂ (P-672) ಸೋಂಕು ದೃಢಪಟ್ಟಿತ್ತು. ಆದರೆ, ಆತ ಇವರಿಗಿಂತ ಮೊದಲೇ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಈ ಪೈಕಿ ಎರಡು ಜನರು ಬಿಡುಗಡೆಗೊಂಡಿದ್ದಾರೆ. ನಾಲ್ಕು ಜನ ಸೋಂಕಿತರಿಗೆ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಬಿಡುಗಡೆಗೊಂಡ ಇಬ್ಬರನ್ನು ಗೃಹಪ್ರತ್ಯೇಕತೆಯಲ್ಲಿರಿಸಲಾಗುತ್ತಿದೆ. ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ...
error: Content is protected !!