ಸಂಪಾದಕೀಯ

ಸಂಪಾದಕೀಯ

ಸಹೋದರಿ ಮೇಘನಾರಾಜ್ ತನ್ನವನ ಹಣೆಗೆ ನೀಡಿದ ಕೊನೆಯ ಮುತ್ತು ನನಗೆ ನೂರು ಮಾತುಗಳನ್ನು ತಿಳಿಸಿತ್ತು ….!!

ಆತ್ಮೀಯ ಓದುಗ ಪ್ರಭುಗಳೇ ನಿಮಗೆಲ್ಲಾ ನಿಮ್ಮ ಮನೆಮನದ ಹುಡುಗನಾದ ಪುಟ್ಟ ಬರಹಗಾರನ ಆನಂತ ನಮಸ್ಕಾರಗಳು.. ಈ ಬಾರಿ ನಿಮ್ಮ ಮುಂದೆ ಇಟ್ಟಿರುವ ವಿಷಯವೇನೆಂದರೆ ಎರಡಕ್ಷರದ ಬಾಂಧವ್ಯವ ಬೆಸೆಯುವ ಪ್ರೀತಿಯೆಂಬ ಮಾಯೆಯ ಬಗ್ಗೆ. ಏಕೆ ದಿಢೀರನೆ ಈ ವಿಷಯ ನಿಮ್ಮ ಮನಸ್ಸಿಗೆ ಬಂದಿದೆ, ಈಗೇನು ಪ್ರೇಮಿಗಳ ದಿನಾಚರಣೆಯಲ್ಲವಲ್ಲವೆಂದು ಹುಬ್ಬೇರಿಸಿ, ನಿಮ್ಮ ಮನಸ್ಸಲ್ಲಿ ನನಗೆ ಪ್ರಶ್ನೆ ಹಾಕಿಕೊಳ್ಳಬಹುದು. ಅದಕ್ಕೆ ನನ್ನ ಉತ್ತರನೂ ಇದೆ, ಮೊನ್ನೆ ಚೆಂದನವನದ ಹುಡುಗ ಕಲಾದೇವಿಯ ಒಡಲೊಳಗೆ ಸೇರಿ ತನ್ನ ಬಣ್ಣದ ಮುಖವಾಡಕ್ಕೆ ಅಂತ್ಯವಾಡಿದ ಎಂದು ಕೆಲವರೂ ಮಾತಾಡಿ ಬೇಸರ ವ್ಯಕ್ತಪಡಿಸಿದರೆ, ಇನ್ನೂ ಕೆಲವರೂ ಆ ಕಲಾವಿದ ಹಾಗೂ ಆತನ ತಮ್ಮನ ಸ್ನೇಹ ಬಾಂಧವ್ಯದ ದೃಶ್ಯಾವಳಿಗಳನ್ನು ಕಂಡು ನಿಜವಾದ ರಾಮ-ಲಕ್ಷ್ಮಣರಂತೆ ಇದ್ದರು, ದುರಾದೃಷ್ಠವಶಾತ್ ಯಾರ ಕಣ್ಣು ಬಿತ್ತೋ ರಾಮ ತನ್ನ ತಮ್ಮನ ಕೈ ತುತ್ತ ತಿನ್ನದೆ ದೂರಾದ ಅಂದುಕೊಂಡು ಕಣ್ಣಾಲೆಗಳನ್ನು ಒದ್ದೆ ಮಾಡಿಕೊಂಡವರು ಒಂದುಕಡೆ. ಆದರೆ ನಾನು...
ಸಂಪಾದಕೀಯ

ಸಂಪಾದಕೀಯ

ಪ್ರಿಯ ಓದುಗ ಸ್ನೇಹಿತರೇ… ಬರೆಯಲು ಪದಗಳಿಗಾಗಿ ತಡಕಾಡುತ್ತಿದ್ದೇನೆ, ಮನದಲ್ಲಿ ಅವ್ಯಕ್ತವಾದ ಭಯ ಕಾಡುತ್ತಿದೆ, ವಿವಿಧ ಸಂಘಟನೆಗಳಲ್ಲಿ ಸಾಕಷ್ಟು ಜವಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ, ಆದರೆ ಪತ್ರಿಕೆ ಈ ಜವಬ್ದಾರಿ ಎಲ್ಲಕ್ಕಿಂತಲೂ ಬೇರೆಯಾದುದು.  ಪರಿವರ್ತನೆ ಜಗದ ನಿಯಮ ಎಂದು ಶ್ರೀ ಕೃಷ್ಣ ಪರಮಾತ್ಮ ಗೀತಾ ಸಾರದಲ್ಲಿ ಉಲ್ಲೇಖಿಸಿದ್ದಾನೆ. ಅದರಂತೆ ನಾನು ಸಹ ಬದಲಾವಣೆಯ ಬಯಸಿದೆ. ಪ್ರಿಯ ಓದುಗ ಬಂಧುಗಳೇ…. 2013 ರಲ್ಲಿ ನಾನು ಒಬ್ಬ ಪಿಯು + ಡಿಇಡಿ ಆದ ನಿರುದ್ಯೋಗಿ ಯುವಕನಾಗಿದ್ದೆ, ಅಪ್ಪನ ಸಾವಿನಿಂದ ಕಂಗಾಲಾಗಿದ್ದ ನಾನು, ಸಮಾಜದ ನೈಜ ಘಟನೆಗಳನ್ನು ಕಣ್ಣಾರೆ ಕಂಡು, ಸಮಾಜಕ್ಕೆ ನಾನೇನು ಎಂಬುದನ್ನು ತೋರಿಸಲಿಕ್ಕೆ ಹಗಲು-ರಾತ್ರಿ ಯೋಚಿಸುತ್ತಾ ಕುಳಿತಿದ್ದ ಸಮಯ. ಆ ಸಮಯದಲ್ಲಿ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿಂದ ದಾವಣಗೆರೆ ಜಿಲ್ಲೆಯ ಹೆಸರಾಂತ ದಿನಪತ್ರಿಕೆ (ಪತ್ರಿಕೆ ಹೆಸರು ಬೇಡ) ಯಲ್ಲಿ ರಾತ್ರಿ ಪಾಳೆಯದಲ್ಲಿ ಗಣಕಯಂತ್ರ ನಿರ್ವಾಹಕನಾಗಿ ಸೇರಿದೆ. ಅಲ್ಲಿ ಮುಂಚೆ ಇದ್ದ...
error: Content is protected !!