ಶಿವಮೊಗ್ಗ

ಪ್ರಮುಖ ಸುದ್ದಿಗಳುಶಿವಮೊಗ್ಗ

ಕ್ಯಾನ್ಸರ್​ ಮಾಂತ್ರಿಕ ಶಿವಮೊಗ್ಗ ಜಿಲ್ಲೆಯ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ

ಕ್ಯಾನ್ಸರ್​ ಸೇರಿದಂತೆ ಅನೇಕ ಮಾರಣಾಂತಿಕ ರೋಗಗಳಿಗೆ ನಾಟಿ ಔಷಧಿಯ ಮೂಲಕ ಚಿಕಿತ್ಸೆ ನೀಡಿ ಜಗತ್ತಿನಾದ್ಯಂತ ಹೆಸರು ಮಾಡಿದ್ದ ಶಿವಮೊಗ್ಗದ ಸಾಗರ ತಾಲೂಕಿನ ನರಸೀಪುರದ 80 ವರ್ಷದ ನಾಟಿ ವೈದ್ಯ ನಾರಾಯಣಮೂರ್ತಿ ಬುಧವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವೈದ್ಯ ನಾರಾಯಣ ಮೂರ್ತಿ ಮತ್ತು ಅವರ ಕುಟುಂಬ ಸದಸ್ಯರು ದಶಕಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ, ಕಡಿಮೆ ದರದಲ್ಲಿ ಕ್ಯಾನ್ಸರ್​ಗೆ ನಾಟಿ ಔಷಧಿ ನೀಡುತ್ತಿದ್ದ ನಾರಾಯಣ ಮೂರ್ತಿ ಅವರ ಬಳಿ ವಿದೇಶಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು. ಸುಮಾರು ೪ ದಶಕಗಳಿಂದ ನರಸೀಪುರದಲ್ಲಿ ನಾಟಿ ಔಷಧಿ ನೀಡುತ್ತಿದ್ದ ಇವರು ಆರಂಭದಲ್ಲಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ನಂತರ ಕೇವಲ 100 ರೂ. ಪಡೆದು ಚಿಕಿತ್ಸೆ ನೀಡಲಾರಂಭಿಸಿದರು. ಕಿಡ್ನಿಯಲ್ಲಿ ಕಲ್ಲು, ಮಧುಮೇಹ, ಹೃದಯಸಂಬಂಧಿ ಸಮಸ್ಯೆ, ಗ್ಯಾಂಗ್ರಿನ್, ಗರ್ಭಕೋಶದ ಕ್ಯಾನ್ಸರ್​, ಅನ್ನನಾಳದ ಕ್ಯಾನ್ಸರ್ ಮುಂತಾದ ರೋಗಗಳಿಗೆ ಇವರು ನೀಡುತ್ತಿದ್ದ ಔಷಧಿ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಶಿವಮೊಗ್ಗ ಜಿಲ್ಲೆಯ ನರಸೀಪುರಕ್ಕೆ...
error: Content is protected !!