ಮೈಸೂರು

ಮೈಸೂರು

ಕೊರೋನಾದಿಂದ ಮತ್ತೇ ಗೂಡು ಸೇರಿಕೊಳ್ಳುತ್ತಿರುವ ಉತ್ತರಪ್ರದೇಶದ 70ರ ವಯೋವೃದ್ಧ

ಮೈಸೂರು: ಕಳೆದ ಒಂದೂವರೆ ತಿಂಗಳಿನಿಂದ ಲಾಕ್ಡೌನ್ನಿಂದ ಲೆಕ್ಕವಿಲ್ಲದಷ್ಟು ಮಂದಿ ಒಂದೊತ್ತಿನ ಊಟ ಸಿಗದೆ ಸಂತ್ರಸ್ತರಾಗಿದ್ದಾರೆ. ಆದರೆ 70 ವರ್ಷದ ಈ ವೃದ್ದನ ಪಾಲಿಗೆ ಲಾಕ್ಡೌನ್ ಶುಭವಾಗಿ ಪರಿಣಮಿಸಿದೆ. ಮೂರು ವರ್ಷದಿಂದ ಕುಟುಂಬವನ್ನು ತೊರೆದು ಮಾನಸಿಕ ಕ್ಷೋಭೆಯಿಂದ ನರಳುತ್ತಿದ್ದ ಅವರೀಗ ಕುಟುಂಬವನ್ನು ಸೇರುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ 70 ವರ್ಷದ ಕರಮ್ ಸಿಂಗ್ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಇದೀಗ ತವರಿಗೆ ತೆರಳಲು ಸಜ್ಜಾಗಿದ್ದಾರೆ. ತಂದೆ ಶಾಶ್ವತವಾಗಿ ದೂರವಾದರು ಎಂದು ಕಂಗಾಲಾಗಿದ್ದ ಕುಟುಂಬಕ್ಕೆ ಈಗ ಹೊಸ ಚೈತನ್ಯ ಮೂಡಿದ್ದು, ತಂದೆಯನ್ನು ಕಾಣುವ ತವಕದಲ್ಲಿ ಮಕ್ಕಳು ಕಾಯುತ್ತಿದ್ದಾರೆ. ಒಂದೂವರೆ ತಿಂಗಳಿನಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕರಮ್ ಸಿಂಗ್ನ ವಿಳಾಸ ವನ್ನು ಪತ್ತೆ ಹಚ್ಚಿದ ಕೇಂದ್ರದ ಮೇಲ್ವಿಚಾರಕರು, ಕುಟುಂಬದೊಂದಿಗೆ ಸೇರಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಮೈಸೂರಿಗೆ ಬಂದಿದ್ದು ಹೇಗೆ?: ಉತ್ತರ ಪ್ರದೇಶದ ಸಾರಂಗ್ಪುರ್...
ಮೈಸೂರು

ಆಟೋ ಚಾಲಕರಿಗೆ ಸಿಹಿ

ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ಲಾಕ್ ಡೌನ್ ಸಡಿಲಿಕೆಯಿಂದಿ ಆಟೋಗಳು ಓಡಲು ಪ್ರಾರಂಭಿಸಿದ ದಿನವಾದ ಇಂದು ಆಟೋ ಚಾಲಕರಿಗೆ ಸಿಹಿಯನ್ನು ತಿನಿಸಿ, ದಿನಸಿ ಕಿಟ್ ಗಳನ್ನು ನೀಡುವ ಮೂಲಕ ವಿದ್ಯಾರಣ್ಯಪುರಂನಲ್ಲಿ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಮ ವಿ ರಾಮಪ್ರಸಾದ್ ರವರು ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್ ಗಳು, ಅವತ್ತು ದುಡಿದು ತಿನ್ನುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರು ಸಂಕಷ್ಟದಲ್ಲಿದ್ದಾರೆ, ಇವರಿಗೆ ಕಳೆದ ಎರಡು ತಿಂಗಳಿಂದ ಜೀವನ ಸಾಗಿಸುವುದು ಕಷ್ಟಕರವಾಗಿತ್ತು, ಇವತ್ತಿನಿಂದ ಓಡಿಸಿದರು ಸಹ ಮೊದಲಿನಂತೆ ವ್ಯವಹಾರ ನಡೆಯುವುದಿಲ್ಲ, ಚೇತರಿಕೆ ಕಾಣಲು ಇನ್ನು ಕೆಲವು ದಿನಗಳು ಬೇಕಾಗುತ್ತದೆ, ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರ ನೀಡಿರುವ ಯೋಜನೆ ಗಳನ್ನು ಎಲ್ಲರೂ ಉಪಯೋಗಿಸಿ ಕುಳ್ಳಬೇಕು, ರಾಜ್ಯ ಸರ್ಕಾರ ಆದಷ್ಟು ಬೇಗ ಜಾರಿಗೆ ತರುವಂತೆ ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಿ ಸಂದೀಪ್,...
ಮೈಸೂರು

ಕರೋನ ಮುಕ್ತ ನಗರ ವಾದುದರಿಂದ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಗಿಡಗಳನ್ನು ನೆಡಲಾಯಿತು

ಮೈಸೂರು ನಗರ ಕರೋನ ಮುಕ್ತ ನಗರ ವಾಗಿರುವುದು ಸಂತೋಷದ ವಿಷಯ ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಏಕದಂತ ಯುವಕರ ಸಂಘದ ಆಶ್ರಯದಲ್ಲಿ ಬಿಲ್ಪತ್ರೆ ಗಿಡ, ಬೇವಿನ ಗಿಡಗಳನ್ನು ನೆಡಲಾಯಿತು. ಸಸಿ ನೆಟ್ಟು ಮಾತನಾಡಿದ ಮ ವಿ ರಾಮಪ್ರಸಾದ್ ಪರಿಸರ ಚನ್ನಾಗಿ ಇಟ್ಟುಕೊಳಬೇಕು ಸ್ವಚ್ಛತೆ ಯನ್ನು ಇನ್ನು ಹೆಚ್ಚಾಗಿ ಕಾಪಡಿಕೊಳ್ಳಬೇಕು ಮೈಸೂರಿನಲ್ಲಿ ಕರೋನ ಮುಕ್ತವಾಗಿರುವುದು ಬಹಳ ಸಮಾಧಾನ ಕರವಾಗಿದೆ ಆದರೂ ಸಹ ಉದಾಸೀನ ಮಾಡದೆ ಜಾಗೃಕರಾಗಿದ್ದು ಮಾಸ್ಕ್ ಧರಿಸಿ ಅಂತರವನ್ನು ಕಾಪಾಡಿಕೊಳ್ಳಬೇಕು, ನಾಳೆಯಿಂದ ಬಸ್, ಆಟೋ, ಟ್ಯಾಕ್ಸಿ ಎಲ್ಲಾ ವಾಹನಗಳು ಓಡಾಡುತಿರುವುದರಿಂದ ಬೇರೆ ಬೇರೆ ಪ್ರದೇಶದಿಂದ ಜನ ಬರುತ್ತಾರೆ ಜಾಗೃಕರಾಗಿರಬೇಕು, ದಿನ ನಿತ್ಯ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಕರೋನ ಬಗ್ಗೆ ಇನ್ನೂ ಹೆಚ್ಚಾಗಿ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಯುವಕರ ಸಂಘದ ಬಸವಣ್ಣ, ಸಿ...
1 2
Page 2 of 2
error: Content is protected !!