ಮೈಸೂರು

ಮೈಸೂರು

ಆರೆಂಜ್ ಸೇವಾ ಸಂಸ್ಥೆಯ ವತಿಯಿಂದ ದಿನಸಿ ವಿತರಣೆ

ಆರೆಂಜ್ ಸೇವಾ ಸಂಸ್ಥೆ, ಮೈಸೂರು ಹಾಗೂ VINOD BANKERS ಕುಂಬಾರ ಕೊಪ್ಪಲು, ಮೈಸೂರು ಇವರುಗಳ ಅಶ್ರಯದಲ್ಲಿ ಸುಮಾರು 200 ಜನರಿಗೆ ಕೊಳ್ಳೇಗಾಲ ತಾಲೂಕು ಮುಳ್ಳೂರು ಗ್ರಾಮದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಸಂಸ್ಥೆಯ ಮಹಾಪೋಷಕರಾದ ದೀಪಕ್, ಸಂಸ್ಥೆಯ ಅಧ್ಯಕ್ಷರಾದ ಹೆಚ್ ಸಿ ಆನಂದ್, ಉಪಾಧ್ಯಕ್ಷರಾದ ಸುನಿಲ್ ಪಿಆರ್, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ, ನಾಗೇಶ್ ಪಿ ಮುಕ್ತಿಯರ್ ಚಾಂದಿ ವಾಲ್ ಜಾನ್, ಸಿಇಓ ಸುಮಲತಾ ವಿಕ್ರಂ ಸಿದ್ದರಾಜು ರವರು ಉಪಸ್ಥಿತರಿದ್ದರು....
ಮೈಸೂರು

ಆರೆಂಜ್ ಸೇವಾ ಸಂಸ್ಥೆ ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳ ಆಯೋಜನೆ

ಕಣ್ಣು ಮನುಷ್ಯನ ಅತಿ ಸೂಕ್ಷ್ಮ ಅಂಗವಾಗಿದೆ. ಪ್ರತಿಯೊಬ್ಬರು ನೇತ್ರದ ಕುರಿತು ವಿಶೇಷ ಕಾಳಜಿ ವಹಿಸುವುದು ಅವಶ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ H C ಆನಂದ್ ರವರು ಹೇಳಿದರು. ಮುಳ್ಳೂರು ಗ್ರಾಮದಲ್ಲಿ ಆರೆಂಜ್ ಸೇವಾ ಸಂಸ್ಥೆ ಹಾಗೂ ಎಂ ಆರ್ ಸಿ ಕಣ್ಣಿನ ಆಸ್ಪತ್ರೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿದ್ದು, ಸುಮಾರು ಮೂರು ವರ್ಷಗಳಲ್ಲಿ ೧೦,೦೦೦ ಕ್ಕೂ ಅಧಿಕ ಜನರು ಶಿಬಿರದ ಲಾಭ ಪಡೆದುಕೊಂಡಿದ್ದು, ಅಂಧತ್ವ ಮುಕ್ತ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಸಂಸ್ಥೆಯ ಗುರಿ ಎಂದರು. ವಯೋಸಹಜ ಹಾಗೂ ಟಿವಿ ಕಂಪ್ಯೂಟರ್ ಮೊಬೈಲ್ ಬಳಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದು, ಸಕ್ಕರೆ ಕಾಯಿಲೆ ಇರುವವರು ನಿಮಿತ್ತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ. ಕಣ್ಣಿನ ವಿಷಯದಲ್ಲಿ ಸ್ವಲ್ಪ ಅಜಾಗರೂಕತೆ ವಹಿಸಿದರೆ ಕಣ್ಣು ಕಳೆದುಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ...
ಪ್ರಮುಖ ಸುದ್ದಿಗಳುಮೈಸೂರು

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಂತಾಪ ಸಲ್ಲಿಸಿದ ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ

ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಮೇಣದಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಕರ್ನಲ್ ಸಂತೋಷ್ ಬಾಬು ಬಿಹಾರ್ ರೆಜಿಮೆಂಟ್,ಹವಾಲ್ದಾರ್ ಪಳನಿ ಸ್ವಾಮಿ ರೆಜಿಮೆಂಟ್ ತಮಿಳುನಾಡು ... ಇವರಿಬ್ಬರಿಗೂ ಶ್ರದ್ಧಾಂಜಲಿ ಸಂತಾಪ ಸಲ್ಲಿಸಲಾಯಿತು. ನಂತರ ಮಾತನಾಡಿದ ನಗರಪಾಲಿಕೆ ಸದಸ್ಯರಾದ ಮಾವಿ.ರಾಂಪ್ರಸಾದ್ ಇಂದು ಭಾರತ-ಚೀನಾ ಗಡಿಯಲ್ಲಿ ಮೂವರು ಭಾರತೀಯ ಯೋಧರನ್ನು ಕುತಂತ್ರದಿಂದ ಕೊಲೆ ಮಾಡಿರುವ ಪಾಪಿ ಚೀನಾ ದೇಶದ ದುಷ್ಕೃತ್ಯವನ್ನು ತೀವ್ರತರವಾಗಿ ಖಂಡಿಸಬೇಕು. ಚೀನಾದೇಶವೂ ಸಹಾ ಇತರೇ ಶತೃ ದೇಶಗಳಂತೆ ಕಾಲ್ಕೆರೆದು ಬರುತ್ತಿರುವುದು ಅದರ ನೈತಿಕ ದೀವಾಳೀ ತನಕ್ಕೆ ಸಾಕ್ಷಿಯಾಗಿದೆ. ಭಾರತವು ಶಾಂತಿ ಬಯಸುವ ದೇಶವಾಗಿದ್ದು ಇಡೀ ವಿಶ್ವಕ್ಕೇ ಮಾದರಿಯಾಗಿದೆ ಆದರೆ ಭಾರತದ ತಾಳ್ಮೆ ಪರೀಕ್ಷಿಸುವ ಮೂಲಕ ಚೀನಾ ಕಾಲ್ಕೆರೆಯುತ್ತಿದೆ. ಸ್ವಾಭಿಮಾನಿ ಭಾರತೀಯರು ಚೀನಾ ಉತ್ಪನ್ನ ಗಳನ್ನು ಮತ್ತು ಮೊಬೈಲ್ ಆಪ್ ಗಳನ್ನು ಈ ಕೂಡಲೇ ಬಹಿಷ್ಕರಿಸಬೇಕು ಚೀನಾ ದೇಶಕ್ಕೆ ಸಾವಿರಾರು ಕೋಟಿ ರೂ.ಗಳು ವ್ಯವಹಾರ ನಡೆಸುತ್ತಿದ್ದು...
ಪ್ರಮುಖ ಸುದ್ದಿಗಳುಮೈಸೂರು

ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸಾವಿರಾರು ಜನರಿಗೆ ಆಹಾರ ಪದಾರ್ಥಗಳ ವಿತರಣೆ

ಕೊರೊನ ಲೊಕ್ಡೌನ್ ಸಂದರ್ಭದಲ್ಲಿ ಜನಸಾಮಾನ್ಯರು ಉದ್ಯೋಗ ಕಳೆದುಕೊಂಡ ಸಂಕಷ್ಟದ ಸಮಯದಲ್ಲಿ ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸುಮಾರು 150 ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ಸಂಸ್ಥೆಯ ಸದಸ್ಯರುಗಳು ಸಹಕರಿಸಿದ್ದರು. ಈ ಸಂದರ್ಭದಲ್ಲಿ ಆರ್. ಬಿ. ಐ ತೆಲುಗು ಫ್ರೆಂಡ್ಸ್ ರವರು ನಮ್ಮ ಸಂಸ್ಥೆಯನ್ನು ದೂರವಾಣಿ ಮುಖಾಂತರ ಸಂದರ್ಶಿಸಿ ನಾವುಗಳು ಸಹಾಯ ಮಾಡಬೇಕೆಂದು ಎಲ್ಲಾರು ಸೇರಿ ತೀರ್ಮಾನಿಸಿದ್ದು ಆಹಾರ ಪದಾರ್ಥಗಳನ್ನು ಕೊಡಿಸುವುದಾಗಿ ಹೇಳಿದರು. ತದನಂತರದಲ್ಲಿ ಸಾವಿರಾರು ಜನರಿಗೆ ಆಹಾರ ಪದಾರ್ಥಗಳನ್ನು ಬಡಜನರಿಗೆ ವಿತರಿಸುವಲ್ಲಿ ಯಶಸ್ವಿಯಾದರು ಮತ್ತು ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಕೊರೊನ ಲೊಕ್ಡೌನ್ ಸಂದರ್ಭದಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಪ್ರತಿದಿನ ಬೆಳಿಗ್ಗೆ ರಾತ್ರಿ 150 ರಿಂದ 200 ಜನರಿಗೆ ವಿತರಿಸುವುದಕ್ಕೆ ಸಂಸ್ಥೆಯ ಮಹಾಪೋಷಕರು ದೀಪಕ್, ಸಂಸ್ಥೆಯ ಅಧ್ಯಕ್ಷರು ಹೆಚ್. ಸಿ. ಆನಂದ,ಉಪಾಧ್ಯಕ್ಷರು ಸುನೀಲ್ ಪಿ. ಆರ್. ಕಾರ್ಯದರ್ಶಿ ಪಿ. ಸುನೀಲ್, ಸಂಸ್ಥೆಯ ಆಯೋಜಕರಾದ ಚಾಂದಿವಾಲ್, ಜಾನ್, ವಿಕ್ರಮ್...
ಪ್ರಮುಖ ಸುದ್ದಿಗಳುಮೈಸೂರು

ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು

ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿದ್ಯಾರಣ್ಯಪುರಂ ಕೇಂದ್ರ ರೇಷ್ಮೆ ಮಂಡಳಿಯ ಕಛೇರಿಯ ಆವರಣದಲ್ಲಿ ಇಲಾಖೆಯಲ್ಲಿ ಎಲ್ಲರಿಗೂ ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಸುಮಾರು 224 ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು. ತೆಂಗಿನ ಗಿಡ-7, ಜಾಮುನ್ ಗಿಡ -32, ಸೀಬೆ -6, ಹುಣಸೆ-20, ತೇಗ- 50, ಬೇವು -20, ಸಿಲ್ವರ್ ಓಕ್-20, ಕಾಡು ಬಾದಾಮಿ-20, ದಾಳಿಂಬೆ-10, ಕರಿಬೇವು-5, ನುಗ್ಗೆಕಾಯಿ-20, ನೆಲ್ಲಿಕಾಯಿ-04, ಸಪೋಟ-10 ಹೀಗೆ ಹಲವು ಬಗೆಯ ಹಣ್ಣಿನ ಹಾಗೂ ವಿವಿಧ ಬಗೆಯ ಜಾತಿಯ ಗಿಡಗಳನ್ನು ನೆಟ್ಟು ಸಂಸ್ಥೆಯ ನೌಕರರು ಅದನ್ನು ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು. ಈ ಸಂದರ್ಭದಲ್ಲಿ ಮೈಸೂರಿನ ನಗರಪಾಲಿಕೆ ಸದಸ್ಯರಾದ ಮ.ವಿ ರಾಮಪ್ರಸಾದ್, ಮಾನ್ಯ ನಿರ್ದೇಶಕರಾದ ಡಾ.ಪಂಕಜ್ ತಿವಾರಿ, ಕೇಂದ್ರ ರೇಷ್ಮೆ ಮಂಡಳಿಯ ನಿವೃತ್ತ ತಾಂತ್ರಿಕ ಅಧಿಕಾರಿ ಕೆ.ಆರ್.ಗಣೇಶ್,...
ಅಂಕಣಪ್ರಮುಖ ಸುದ್ದಿಗಳುಮೈಸೂರು

ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ರೆಲ್ಲೋ ಪ್ಲೇಕ್ಸ್ ಪರಿಚಯಿಸಿದ ಯುವಾ ಬ್ರಿಗೇಡ್

ರೆಲ್ಲೊ ಪ್ಲೇಕ್ಸ್: ಇಂಗ್ಲೆಂಡಿನ ಬ್ಲೂ ಪ್ಲೇಕ್ಸ್ ನಿಂದ ಪ್ರೇರೇಪಿತಗೊಂಡು ಯುವಾಬ್ರಿಗೇಡ್ ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ಮಾಡಿದ ಪ್ರಯತ್ನ. ಕನ್ನಡ ಎಂದರೆ ಕೆಂಪು ಮತ್ತು ಹಳದಿಗಳ ಮಿಶ್ರಣ. ಹೀಗಾಗಿ ಇಲ್ಲಿ ಇದು ರೆಲ್ಲೊ (Red and Yellow) ಪ್ಲೇಕ್ ಆಗಿದೆ. 2000 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕರ್ನಾಟಕ ಇತಿಹಾಸಕ್ಕೆ, ಸಂಸ್ಕೃತಿಗೆ, ರಾಷ್ಟ್ರದ ವೈಭವಕ್ಕೆ ಕೊಟ್ಟ ಕೊಡುಗೆ ಅಪಾರ. ಇಲ್ಲಿನ ಪ್ರತಿ ಕಲ್ಲೂ ಒಂದು ಕಥೆಯನ್ನು ಹೇಳುವಂಥದ್ದೇ. ರೆಲ್ಲೋ ಪ್ಲೇಕ್ಸ್ ಅವುಗಳನ್ನು ಗುರುತಿಸಿ ಕರ್ನಾಟಕದ ಪರಂಪರೆಯನ್ನು ಜೀವಂತವಾಗುಳಿಸುವ ಪ್ರಯತ್ನವನ್ನು ಮಾಡುತ್ತದೆ. ಕರ್ನಾಟಕವೆಂದರೆ ಬರಿಯ ಬೆಂಗಳೂರಲ್ಲ. ಬೀದರ್ ನಿಂದ ಹಿಡಿದು ಮಡಿಕೇರಿಯವರೆಗೆ ಕಾರವಾರದಿಂದ ಹಿಡಿದು ಕೋಲಾರದವರೆಗೆ ಪ್ರತಿಯೊಂದು ಜಿಲ್ಲೆಯೂ ಸಾಂಸ್ಕೃತಿಕ ಹಿನ್ನೆಲೆಯಿಂದ ಶ್ರೀಮಂತವೇ. ಅದನ್ನು ಜಾಗತಿಕ ಸ್ತರದಲ್ಲಿ ಪರಿಚಯಿಸಿಕೊಟ್ಟರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತದೆ, ಉದ್ಯೋಗಾವಕಾಶವೂ ವೃದ್ಧಿಸುತ್ತದೆ. ಪ್ರತಿ ಜಿಲ್ಲೆಯ ಅತಿ ವಿಶಿಷ್ಟವಾದ ಸ್ಥಳಗಳನ್ನು...
ಮೈಸೂರು

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೈಸೂರಿನ “ಚಿಗುರು ಆಶ್ರಮ” ದ ಸಮೀಪದಲ್ಲಿ ಗಿಡಗಳನ್ನು ನೆಡಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಿವ್ಯಾಂಗರು ಹಾಗೂ ನಿರಾಶ್ರಿತ ಮಹಿಳೆಯರ ಆಶ್ರಿತ ಕೇಂದ್ರವಾದ, ಮೈಸೂರಿನ ಕೂರ್ಗಳ್ಳಿಯಲ್ಲಿರುವ "ಚಿಗುರು ಆಶ್ರಮ" ದ ಇಕ್ಕೆಲಗಳಲ್ಲಿ, ರಸ್ತೆ ಬದಿಯಲ್ಲಿ ೮೦ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಲೇಟ್ ಡಾ|| ಪಿ.ಆರ್.ಸೀತಾರಾಮ್ ರ ಸವಿ ನೆನಪಿನಲ್ಲಿ ಅವರ ಪುತ್ರಿ ಡಾ|| ಮಾಯಾ ಸೀತಾರಾಮ್ ರವರು ಉದಾರ ಮನಸ್ಸಿನಿಂದ ಗಿಡಗಳನ್ನು, ಟ್ರೀ ಗಾರ್ಡ್ ಗಳನ್ನು ಹಾಗೂ ತಿಂಡಿಯನ್ನು ವ್ಯವಸ್ಥೆಗೊಳಿಸಿದರು. ಈ ನಿಸ್ವಾರ್ಥ ಕಾರ್ಯವನ್ನು ಯುವಾ ಬ್ರಿಗೇಡ್ ಸಂಸ್ಥೆಯ ಸಂಚಾಲಕರಾದ ಚಂದ್ರಶೇಖರ್ ಹಾಗೂ ತಂಡ, ಸುರಕ್ಷಾ ಫೌಂಡೇಶನ್ ಸಂಸ್ಥಾಪಕರಾದ ಆನಂದ್ ರಾಜ್ ಹಾಗೂ ಸ್ವಚ್ಚಂದ ಗ್ರೂಪ್ ನ ಸದಸ್ಯರ ಸಹಭಾಗಿತ್ವದಲ್ಲಿ ಇಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಇದೇ ಸಮಯದಲ್ಲಿ ಮಾತನಾಡಿದ "ಚಿಗುರು ಆಶ್ರಮ" ದ ಸಂಸ್ಥಾಪಕರಾದ ಶ್ರೀಮತಿ ಸುಷ್ಮಾ ರವಿಯವರು ಸಹಾಯ ಮಾಡಿರುವ ಪ್ರತಿಯೊಬ್ಬರಿಗೂ, ಸಂಘಸಂಸ್ಥೆಗಳಿಗೂ ಹಾಗೂ ಯುವಾ ಬ್ರಿಗೇಡ್ ಸಮೂಹ ಕ್ಕೆ ಕೃತಜ್ಞತೆಗಳು ತಿಳಿಸಿದರು.  ...
ಪ್ರಮುಖ ಸುದ್ದಿಗಳುಮೈಸೂರು

ಜೂನ್ ಒಂದರಿಂದ ಮೈಸೂರಿನ ಮೃಗಾಲಯ ಆರಂಭ, ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ

ಮೈಸೂರು(ಮೇ 30): ಮೈಸೂರು ಮೃಗಾಲಯ ಪುನರಾರಂಭಕ್ಕೆ ಸಿದ್ದತೆ ನಡೆದಿದ್ದು, ಜೂನ್ ಮೊದಲ ವಾರದಲ್ಲೇ ಮೃಗಾಲಯ ಮತ್ತೆ ಆರಂಭ ಆಗುವ ಎಲ್ಲಾ ಸಾಧ್ಯತೆ ಇದೆ. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಅಧಿಕೃತ ಆದೇಶ ಬರಲಿದೆ. ಮೃಗಾಲಯದ ಪುನರಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಾಣಿಗಳ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಪುನರಾರಂಭ ಮಾಡುತ್ತೇವೆ ಎಂದು ತಿಳಿಸಿದರು. ಮೃಗಾಲಯದಿಂದ ಪುನರಾರಂಭಕ್ಕೆ ಮನವಿ ಕೇಳಿ ಬಂದಿತ್ತು. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದಿದ್ದೇವೆ ಮೃಗಾಲಯ ಪುನರಾರಂಭಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಅರಣ್ಯ ಸಚಿವರು ಹಾಗೂ ಸರ್ಕಾರದ ಅನುಮತಿ ಬಾಕಿ ಇದೆ ಅಧಿಕೃತ ಆದೇಶ ಬಂದ ನಂತರ ಮೃಗಾಲಯ ಪುನರಾರಂಭ ಆಗಲಿದೆ ಎಂದು ಹೇಳಿದರು. ಕರ್ನಾಟಕದ ಇತರೆ ಮೃಗಾಲಯದ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಮೈಸೂರು...
ಪ್ರಮುಖ ಸುದ್ದಿಗಳುಮೈಸೂರು

ಮೈಸೂರಿನಲ್ಲಿ ಗುಡುಗು, ಮಿಂಚು ಸಮೇತ ಧಾರಾಕಾರ ಮಳೆ

ಮೈಸೂರಿನಲ್ಲಿ ಗುಡುಗು, ಮಿಂಚು ಸಮೇತ ಧಾರಾಕಾರವಾಗಿ ಮಳೆಯಾಗಿ ವಿದ್ಯಾರಣ್ಯಪುರಂ ಹಾಗೂ ಹಲವಾರು ಕಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುಳಿದಿವೆ......
ಪ್ರಮುಖ ಸುದ್ದಿಗಳುಮೈಸೂರು

ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ದವಸ ಧಾನ್ಯದ ಕಿಟ್ ಗಳನ್ನು ನೀಡಿದರು

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ಹಾಗೂ ಇತರರಿಗೂ ಸೇರಿ 150 ಜನರಿಗೆ ದವಸ ದಾನ್ಯದ ಕಿಟ್ಗಳನ್ನು ಶ್ರೀನಿವಾಸ್ ವೃತ್ತದಲ್ಲಿ ನೀಡಲಾಯಿತು. ನಂತರ ಮಾತನಾಡಿದ ಮ ವಿ ರಾಮಪ್ರಸಾದ್ ರವರು ಹಸಿದವರಿಗೆ ಸಹಾಯ ಮಾಡುವುದು ನಿಜವಾದ ಧರ್ಮ, ಈ ದೇಶದಲ್ಲಿ ಹುಟ್ಟಿ, ಬೆಳೆದು, ಅನ್ನ ತಿಂದು ನೀರು ಕುಡಿಯುತ್ತಿರುವ ನಾವೆಲ್ಲರೂ ಭಾರತಾಂಬೆಯ ಮಕ್ಕಳು, ನಾವೆಲ್ಲಾ ದೇಶ ಭಕ್ತರಾಗಬೇಕು ಎಂದು ತಿಳಿಸಿದರು. ಇನ್ನೂ ಕರೋನ ನಮ್ಮನ್ನು ಬಿಟ್ಟಿಲ್ಲ ಅದರಿಂದ ಎಲ್ಲರೂ ಬಹಳ ಜಾಗರೂಕತೆಯಿಂದ ಇದ್ದು ಸರ್ಕಾರದ ಕಾನೂನನ್ನು ಪಾಲಿಸಬೇಕು ಮತ್ತೆ ಸರಕಾರ ಬಡವರಿಗೋಸ್ಕರ ನೀಡಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕರ್ಮದಲ್ಲಿ UMS ಪೆಟ್ರೋಲ್ ಬಂಕ್ ನ ಮಾಲೀಕರಾದ ಎಂ ಎಸ್ ಲೋಕೇಶ್, ಮುಖಂಡರಾದ ಸಿ ಸಂದೀಪ್, ವಿ ಮಂಜುನಾಥ್, ಧರ್ಮೇಂದ್ರ, ಶಿವು,...
1 2
Page 1 of 2
error: Content is protected !!