ಮನರಂಜನೆ

ಪ್ರಮುಖ ಸುದ್ದಿಗಳುಬೆಂಗಳೂರುಮನರಂಜನೆ

ಆಗಸ್ಟ್ ಗೆ ಅಪ್ಪ, ಜೂನ್ ಗೆ ಅಣ್ಣಾ – ಅಳಿಯ, ಜೂನ್ ತಿಂಗಳು ಸರ್ಜಾ ಕುಟುಂಬಕ್ಕೆ ಮುಳ್ಳಾಗುತ್ತಿದೆಯಾ…???

ಅರ್ಜುನ್ ಸರ್ಜಾ ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರುಗಳಿಸಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.ಇಂತಹ ನಟನ ಕುಟುಂಬಕ್ಕೆ ಜೂನ್ ತಿಂಗಳು ಕೂಡಿ ಬರುತ್ತಿಲ್ಲವೆಂದು ಕಾಣಿಸುತ್ತಿದೆ. ಕಾರಣ ಕಳೆದ ಕೆಲವು ವರುಷಗಳ ಹಿಂದೆ ಅಂದರೆ 2009ರ ಜೂನ್ ತಿಂಗಳ ಕೊನೆ ವಾರದ ಶನಿವಾರದಂದೇ ಅರ್ಜುನ್ ಸರ್ಜಾರ ಮುದ್ದಿನ ಅಣ್ಣಾ, ಕನ್ನಡ ಚಿತ್ರರಂಗದ ತುಂಬು ಕುಟುಂಬದ ಚಲನಚಿತ್ರಗಳನ್ನ ನಿರ್ದೇಶಿಸಿ, ಸ್ಟಾರ್ ನಟರಿಗೆ ಆ್ಯಕ್ಸನ್ ಕಟ್ ಹೇಳಿದ್ದ ಕಿಶೋರ್ ಸರ್ಜಾ ಬಹು ಅಂಗಾಂಗ ವೈಫಲ್ಯತೆ ಹಾಗೂ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಕಿಶೋರ್ ಸರ್ಜಾ ಅವರು ಅಂದು ಎಸ್ ವಿ...
ಪ್ರಮುಖ ಸುದ್ದಿಗಳುಮನರಂಜನೆ

ಪೋಷಕ ನಟರಿಗೆ ಸಹಾಯ ಹಸ್ತ

ಕರೋನದಿಂದ ಕಸ್ಟದ ಪರಿಸ್ತಿತಿಯಲ್ಲಿದ್ದ ಚಲನಚಿತ್ರ ಪೋಷಕ ನಟರಿಗೆ ಜನಮನ ವೇದಿಕೆಯ ಅಧ್ಯಕ್ಷರಾದ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರು ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಉತ್ಸುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರು ನಡಸಿ ಕೊಟ್ಟರು,ಹಾಗು ಕಲಾವಿದರಿಗೆ ೭೫೦೦೦ ಸಾವಿರ ರೂಗಳನ್ನು ನೀಡಿದರು, ಸಹಕಾರಿ ದುರೀಣ ರಾಜೀವ್ ರವರು ಅಧ್ಯಕ್ಷತೆ ವಹಿಸಿದ್ದರು , ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ರವರು ೭೫೦೦೦ ರೂಗಳನ್ನು, ಸಹಕಾರಿ ದುರೀಣ ರಾಜೀವ್ ರವರು ೨೫೦೦೦, ಉದ್ಯಮಿ ಅಮರ್ ನಾಥ್ ರಾಜೇ ಅರಸ್ ರವರು ೨೫೦೦೦ ರೂಗಳನ್ನು ನೀಡಿದರು. ಒಬ್ಬಬ್ಬರಿಗೆ ೮ ಸಾವಿರ ರೂಗಳನ್ನು ೩೦ ಕಲಾವಿದರಿಗೆ ನೀಡಲಾಯಿತು, ಇದರ ಜೊತೆ ಗೆ ಹಣ್ಣು ಹಾಗು ಗಿಡಗಳನ್ನು ನೀಡಲಾಯಿತು , ಚಲನಚಿತ್ರ ಪೋಷಕರ ನಟರಾದ ಡಿಂಗ್ರಿ ನಾಗರಾಜ್, ಶ್ರೀಮತಿ ರೇಖಾ ದಾಸ್...
ಪ್ರಮುಖ ಸುದ್ದಿಗಳುಮನರಂಜನೆ

78 ವರ್ಷಗಳಲ್ಲಿ ಕಲಿಯದೇ ಇರುವುದನ್ನು ಲಾಕ್ ಡೌನ್ ವೇಳೆಯಲ್ಲಿ ಕಲಿತೆ; ಬಚ್ಚನ್ ಅನಿಸಿಕೆ

ಮುಂಬೈ: ಲಾಕ್ ಡೌನ್ ಸಮಯದಲ್ಲಿ ಕಲಿತಷ್ಟು 78 ವರ್ಷಗಳಲ್ಲಿ ಕಲಿಯಲು ಸಾಧ್ಯವಾಗಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಲಾಕ್ ಡೌನ್ ನಂತರ ಅವರು ಇನ್ನೂ ಕಾರ್ಯನಿರತರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡಪತಿಯ ನೋಂದಣಿಗಾಗಿ ಕೆಲವು ಪ್ರೋಮೋ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ. ಅಮಿತಾಬ್‌ಗೆ ಲಾಕ್‌ಡೌನ್ ಹಂತವು ಪಾಠಕ್ಕಿಂತ ಕಡಿಮೆಯಿಲ್ಲ, ಹರೆಯದ ಹಾಗೂ ಈಗಿನ ಪೋಟೋಗಳನ್ನು ಶೇರ್ ಮಾಡಿಕೊಂಡಿರುವ ಅಮಿತಾಬ್, 78 ವರ್ಷಗಳಲ್ಲಿ ಕಲಿಯಲು, ಅರ್ಥಮಾಡಿಕೊಳ್ಳಲು, ತಿಳಿಯಲಾಗದನ್ನು ಲಾಕ್ ಡೌನ್ ಸಂದರ್ಭದಲ್ಲಿ ಕಲಿತಿರುವುದಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ಮನರಂಜನೆ

ಅಂತೂ ಇಂತು ಬಾಹುಬಲಿಯ ಬಲ್ಲಾಳನಿಗೆ ಮದುವೆ ಯೋಗ

ಟಾಲಿವುಡ್ ನಟ ರಾಟಾ ದಗ್ಗುಬಾಟಿ ಗೆಳತಿ ಮಿಹಿಕಾ ಬಜಾಜ್ ಅವರನ್ನು ಪ್ರೀತಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅದಾದ ಕೆಲವು ದಿನಗಳ ನಂತರ ಇವರಿಬ್ಬರು ಎಂಗೇಜ್ಮ್ಮೆಂಟ್ ಕೂಡ ಆದರು. ಲಾಕ್ಡೌನ್ ಸಮಯದಲ್ಲಿ ಎರಡು ಕುಟುಂಬಗಳು ಸೇರಿ ಸಿಂಪಲ್ಲಾಗಿ ರಾಣಾ ಮತ್ತು ಮಿಹಿಕಾ ನಿಶ್ಚಿತಾರ್ಥ ನೆರವೇರಿತು. ಆದರೆ ಇವರ ವಿವಾಹ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿರಲಿಲ್ಲ. ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ಮೇ 12ರಂದು ಮಿಹಿಕಾರ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಅವರನ್ನು ವಿವಾಹವಾಗುತ್ತಿದ್ದೇನೆ ಎಂದಿದ್ದರು. ಏಪ್ರಿಲ್ 22ರಂದು ಹೈದರಾಬಾದ್ನಲ್ಲಿ ಎಂಜೇಗ್ಮ್ಮೆಂಟ್ ನಡೆಯಿತು. ವರ್ಷದ ಕೊನೆಯಲ್ಲಿ ವಿವಾಹವಾಗುವ ಸಾಧ್ಯತೆ ಇದೆ ಎಂದು ರಾಣಾ ಹೇಳಿದ್ದರು. ಇದೀಗ ಟಾಲಿವುಡ್ನಲ್ಲಿ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ರಾಣಾ ಮತ್ತು ಮಿಹಿಕಾ ಬಜಾಜ್ ಅಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಅಗಸ್ಟ್ 8 ರಂದು ವಿವಾಹವಾಗುವ ಸಾಧ್ಯತೆ ಇದೆ. ಆದರೆ...
ಮನರಂಜನೆ

ಹುಟ್ಟುಹಬ್ಬಕ್ಕೆ ಫ್ಯಾನ್ಸಗಳಿಗೆ ರವಿಮಾಮನ ಗಿಫ್ಟ್

ಒಂದೇ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ವಿಕ್ರಂ ಅಭಿನಯ ಕ್ರೇಜಿ ಸ್ಟಾರ್ ರವಿಚಂದ್ರನ್ ಜನ್ಮದಿನವವನ್ನು ಈ ವರ್ಷ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಕೊರೋನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಮಾಜಿಕ ಅಂತರವನ್ನು ಭ್ಯಾಸ ಮಾಡುವಂತೆ ಅವರು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. ಈ ನಡುವೆ ರವಿಮಾಮ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುವುದನ್ನು ಕಾಣಬೇಕೆನ್ನುವ ಅವರ ಅಭಿಮಾನಿಗಳ ಆಸೆ ಶೀಘ್ರವೇ ಈಡೇರುವ ಭರವಸೆಯನ್ನವರು ಕೊಟ್ಟಿದ್ದಾರೆ.           ರವಿಚಂದ್ರನ್ ಅವರ ಪುತ್ರನ ಸಿನಿಮಾವನ್ನು ನಿರ್ದೇಶನ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ನಟ-ನಿರ್ದೇಶಕ-ನಿರ್ಮಾಪಕ, ಅಭಿಮಾನಿಗಳ ಕ್ರೇಜಿ ಸ್ಟಾರ್ ತಮ್ಮ ಪುತ್ರನಿಗಾಗಿ ಸ್ಕ್ರಿಪ್ಟ್ನ ತಯಾರಿ ನಡೆಸಲು ಲಾಕ್ಡೌನ್ ಸಮಯವನ್ನು ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ ಜತೆಗೆ ಅವರ ಎರಡನೇ ಮಗನಾದ ವಿಕ್ರಂ ರವಿಚಂದ್ರನ್ ತೆರೆಯ ಮೇಲೆ ಕಾಣಿಸಲಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಎಡಿಟ್...
ಪ್ರಮುಖ ಸುದ್ದಿಗಳುಬೆಂಗಳೂರುಮನರಂಜನೆ

ಅಂಬಿ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಗಣ್ಯರ ನಮನ

ಇಂದು ದಿವಂಗತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಜನ್ಮದಿನ. ಕೊರೋನಾ ಲಾಕ್ ಡೌನ್ ಕಾರಣ, ಅವರ ಸಮಾಧಿಯ ಬಳಿಗೆ ತೆರಳಲಾಗದೆ, ಅಭಿಮಾನಿಗಳು ಸರಳವಾಗಿ ಹುಟ್ದಬ್ಬ ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಅಭಿಮಾನದ ಮಹಾಪೂರವೇ ಹರಿದು ಬರುತ್ತಿದೆ. ಪತ್ನಿ ಸುಮಲತಾ, “ ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ” ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ " ವಿಧಿ ಅವರನ್ನು ನಮ್ಮಿಂದ ಶಾಶ್ವತವಾಗಿ ದೂರ ಮಾಡಿದೆ. ಅವರ ಹೃದಯ ಬ್ರಹ್ಮಾಂಡದಷ್ಟು ವಿಶಾಲವಾಗಿತ್ತು. ಜೀವನದಲ್ಲಿ ಅವರೊಡನೆ ಕೆಲ ಹೆಜ್ಜೆ ಹಾಕಿದ್ದಕ್ಕಾಗಿ ನನಗೆ ಹೆಮ್ಮೆ ಇದೆ" ಎಂದು ಇನ್ನೊಂದು ಟ್ವೀಟ್ ಮಾಡಿ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ್, ಗಣ್ಯರ ನಮನಮಾಜಿ ಸಚಿವ, ಜನಪ್ರಿಯ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್....
ಮನರಂಜನೆ

‘ಜೊತೆ ಜೊತೆಯಲಿ’ ಧಾರಾವಾಹಿಯ ಜನಪ್ರಿಯತೆ ಬೇರೆ ರಾಜ್ಯಗಳಿಗೂ ಹಬ್ಬಿದೆ; ನಟ ಅನಿರುದ್ಧ ಹೇಳಿಕೆ

ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧ್ ಆಗಿ ನಟ ಅನಿರುದ್ಧ ಅವರು ಈಗ ಜನಜನಿತರಾಗಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿರುವ ಅವರು, "ಆರ್ಯವರ್ಧನ್ ಪಾತ್ರ ಸಾಕಷ್ಟು ಆಯಾಮಗಳಿರುವಂತಹದ್ದು. ಪ್ರೀತಿಯ ಜೊತೆಗೆ, ಜವಾಬ್ದಾರಿ ಇರುವ ಪಾತ್ರ. ವ್ಯಕ್ತಿಗಳ ಬಗೆಗಿನ ವಿಶೇಷ ಕಾಳಜಿ ಆಗಿರಬಹುದು, ಸಮಾಜದ ಬಗ್ಗೆ ಇರುವಂತಹ ಕಾಳಜಿ ಆಗಿರಬರಹುದು. ಇದೆಲ್ಲಾ ನೋಡುತ್ತಿದ್ದರೆ ನನಗೆ ತುಂಬಾ ಹತ್ತಿರವಾದಂತಹವು. ನನಗೆ ಇಷ್ಟವಾದ ಪಾತ್ರ ಕೂಡ. ಇದು ನನಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಮಾದರಿ ಎನ್ನಿಸಿದೆ ಎಂದಿದ್ದಾರೆ. "ಕಸದ ಬಗ್ಗೆ ಒಂದಷ್ಟು ವಿಚಾರಗಳನ್ನು ಇಟ್ಟುಕೊಂಡು ಹಂಚಿಕೊಂಡಿದ್ದೆವು. ಆ ಎಪಿಸೋಡ್ ಇನ್ನೂ ಅರ್ಧ ಆಗಿದೆಯಷ್ಟೇ, ಇನ್ನೂ ತುಂಬಾ ಇದೆ ಅದು. ಲಾಕ್ಡೌನ್ನಿಂದಾಗಿ ಇನ್ನೂ ಕಂಪ್ಲೀಟ್ ಮಾಡಲು ಆಗಿಲ್ಲ. ಹಸಿ ಕಸ ಹಾಗು ಒಣ ಕಸ ಸಪರೇಟ್ ಮಾಡಿ ಒಂದಷ್ಟು ಸಂಚಿಕೆಗಳಲ್ಲಿ ಹೇಳಿದ್ದೇನೆ. ಅದನ್ನು ನಮ್ಮ ಕನ್ನಡಿಗರು ಪಾಲಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಅಭಿಮಾನಿಗಳು, ಸರಕಾರಿ...
ಪ್ರಮುಖ ಸುದ್ದಿಗಳುಮನರಂಜನೆ

ಕನಸುಗಾರನ ಈಶ್ವರೀ ಸಂಸ್ಥೆಗೆ ಗೋಲ್ಡನ್ ಜ್ಯೂಬ್ಲೀ (50 ರ)ಯ ಸಂಭ್ರಮ…

ಚಂದನವನದಲ್ಲಿ ಪ್ರಸಿದ್ಧಿ ಪಡೆದಂತಹ ಕೆಲವೇ ಕೆಲವು ಸಂಸ್ಥೆಗಳಲ್ಲಿ ಈಶ್ವರಿ ಸಂಸ್ಥೆಯು ಕೂಡ ಒಂದು. 1970ರಲ್ಲಿ ಆರಂಭಗೊಂಡ ಈ ಸಂಸ್ಥೆಗೆ ಈಗ 50ನೆ ವರ್ಷದ ಸಂಭ್ರಮಾಚರಣೆಯಲ್ಲಿದೆ. ಆಗಿನ ಕಾಲಕ್ಕೆ ಚಿತ್ರ ನಿರ್ಮಾಣ, ವಿತರಣೆ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮದೇ ಒಂದು ಭದ್ರ ನೆಲೆಯನ್ನು ಕಟ್ಟಿದಂತಹ ವ್ಯಕ್ತಿ ನಾಗಪ್ಪ ವೀರಸ್ವಾಮಿ. ಕನ್ನಡದ ಹೆಮ್ಮೆಯ ನಟರುಗಳಾದ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್ ಸೇರಿದಂತೆ ಹಲವರು ನಾಯಕ ಹಾಗೂ ನಾಯಕಿಯರ ಚಿತ್ರವನ್ನು ನಿರ್ಮಿಸಿದಂತಹ ಹೆಗ್ಗಳಿಕೆ ಈಶ್ವರಿ ಸಂಸ್ಥೆಗೆ ಸಲ್ಲುತ್ತದೆ. 1971ರಲ್ಲಿ ಡಾ.ರಾಜ್ಕುಮಾರ್ ಅಭಿನಯದ ಕುಲಗೌರವ ಚಿತ್ರದ ಮೂಲಕ ಈಶ್ವರಿ ಸಂಸ್ಥೆ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿತು. ತದನಂತರ ಹಲವಾರು ಯಶಸ್ವೀ ಚಿತ್ರಗಳಾದ ನಾಗರಹಾವು, ಭೂತಯ್ಯನಮಗಅಯ್ಯು, ಚಕ್ರವ್ಯೂಹ, ನಾರದ ವಿಜಯ, ಪ್ರಳಯಾಂತಕ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಈ ಸಂಸ್ಥೆಗೆ ಸಲ್ಲುತ್ತದೆ. ತದನಂತರ ವೀರಸ್ವಾಮಿ ಅವರ ಸುಪುತ್ರ ಕ್ರೇಜಿಸ್ಟಾರ್ ರವಿಚಂದ್ರನ್...
ಮನರಂಜನೆ

ಕೆಜಿಎಫ್-2, ಅಧೀರನ ಗೆಟಪನಲ್ಲಿದ್ದ ಸಂಜಯ್ ದತ್ ಪೊಟೋ ರಿವೀಲ್

ದೇಶದಲ್ಲಿ ಬಾಹುಬಲಿ ಚಿತ್ರದ ಬಿಡುಗಡೆಯ ನಂತರ, ಪಾರ್ಟ್-2ಗಾಗಿ ಹೇಗೆ ಅಭಿಮಾನಿ ಪ್ರೇಕ್ಷಕರು ನಿರೀಕ್ಷಿಸುತ್ತಿದ್ದರು, ಸೇಮ್ ಟು ಸೇಮ್ ಅದೇ ತರಹ ಫೀಲಿಂಗ್ ಅನ್ನು ಯಶ್ ನಟಿಸಿರುವ ಕೆಜಿಎಫ್ ಪಾರ್ಟ-2 ಗಾಗಿ ಕಾಯುತ್ತಾ ಕುಳಿತ್ತಿದ್ದಾರೆ ನಮ್ಮ ಪ್ರೇಕ್ಷಕ ಪ್ರಭುಗಳು. ಸೆಕೆಂಡ್ ಟು ಸೆಕೆಂಡ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ನಾವುಗಳು ನಮ್ಮ ಕನ್ನಡ ಸಿನಿಮಾವನ್ನು ಯಾವಾಗ ನೋಡುತ್ತೇವೆ ಎಂದು ಕಾದು ಕುಳಿತಿರುವ ಪ್ರೇಕ್ಷಕರಿಗೆ ಇಲ್ಲೊಂದು ಸಿಹಿ ಸುದ್ಧಿಯಿದೆ. ಅದುವೇ ಖಳನಾಯಕ ಅಧೀರನ ಪೊಟೋ ಸಂಪೂರ್ಣವಾಗಿ ರೀವಿಲ್ ಆಗಿ ಹೊರಬಿದ್ದಿದೆ. ಮಹಾಮಾರಿ ಕೊರೋನಾದಿಂದ ಸಿನಿಮಾದ ಕೊನೆ ಭಾಗದ ಕೆಲಸಗಳು ನಿಂತಿದ್ದು, ಭಾನುವಾರ ರಾಜ್ಯ ಸರ್ಕಾರ ಕನ್ನಡ ಸಿನಿ ಇಂಡಸ್ಟ್ರೀಸ್ ಗೆ ತಮ್ಮ ಪೋಸ್ಟ್ ಪ್ರೊಡೋಕ್ಸೆನ್ ಕೆಲಸಗಳನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಈ ನಡುವೆ ಚಿತ್ರದ ನಿರ್ಮಾಪಕರು ಮ್ಯೂಸಿಕ್ ಕಂಪೋಸಿಸನ್ ಕಂಪ್ಲೀಟ್ ಆಗಿದೆ. ಆದಷ್ಟು ಬೇಗನೆ ಭಾಗ-2 ಬಿಡುಗಡೆಯಾಗುತ್ತೆ ಎಂದು...
ಮನರಂಜನೆ

ನಟನೆಗೆ ಗುಡ್ ಬೈ ಹೇಳಿದ ಪಂಜಾಬಿ ಬೆಡಗಿ ಚಾರ್ಮಿ ಕೌರ್

ತೆಲುಗು ಚಿತ್ರರಂಗದಲ್ಲಿ ಅವಿರತ ಶ್ರಮದೊಂದಿಗೆ ಜ್ಯೋತಿಲಕ್ಷ್ಮೀಯಾಗಿಯೇ ಎಲ್ಲರ ಮನಸೆಳೆದಿದ್ದ  ಹಾಗೂ ತೆಲುಗಿನ ರಫ್ ಡೀರೆಕ್ಟರ್ ಖ್ಯಾತಿಯ ಪೂರಿ ಜಗನ್ನಾಥಗೆ ಇಷ್ಟವಾದ ನಟಿ,  ತ್ರಿಷಾ ಕೃಷ್ಣನ್ರನ್ನು ಆಕೆಯ 36ನೇ ಹುಟ್ಟುಹಬ್ಬ ಸಂದರ್ಭದಲ್ಲಿ "ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಗಾಗಿ ನಿರೀಕ್ಷಿಸುತ್ತಿದ್ದೇನೆ. ನಾವು ಮದುವೆಯಾಗೋಣವೇ? ಈಗ ಕಾನೂನು ಪ್ರಕಾರ ಅವಕಾಶ ಇದೆ" ಎಂದು ಹ್ಯಾಪಿ ಬರ್ತ್ಡೇ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿ ಹಲವರ ಹುಬ್ಬೇರಿಸಿದ್ದ ತೆಲುಗು, ತಮಿಳು, ಕನ್ನಡ, ಮಲಯಾಳಂ , ಚಿತ್ರರಂಗದಲ್ಲಿ ನಟಿಯಾಗಿ ಮಿಂಚಿದ ನಟಿ ಚಾರ್ಮಿ ನಟನೆಗೆ ಸಂಪೂರ್ಣವಾಗಿ ಗುಡ್ ಬೈ ಹೇಳಿದ್ದಾರೆ. ಇತ್ತೀಚೆಗೆ ಚಾರ್ಮಿ, ತಾನು ನಟನೆಗೆ ಗುಡ್ ಬೈ ಹೇಳುವುದಾಗಿ ಅನೌನ್ಸ್ ಮಾಡಿದ್ದಾರೆ. ನಟನೆ ಬಿಟ್ಟು ನಿರಂತರವಾಗಿ ಸಿನಿಮಾಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ತೆಲುಗು ಚಿತ್ರರಂಗದಲ್ಲಿ ಒಟ್ಟು 50...
1 2
Page 1 of 2
error: Content is protected !!