ಮಂಡ್ಯ

ಪ್ರಮುಖ ಸುದ್ದಿಗಳುಮಂಡ್ಯ

ಕೆ ಆರ್ ಎಸ್ ನಲ್ಲಿ ನಾಲ್ವಡಿ ಪ್ರತಿಮೆ ಪಕ್ಕ ಸರ್ ಎಂವಿ ಪ್ರತಿಮೆ ಬೇಡ: ಬಿಜೆಪಿ ಸರ್ಕಾರಕ್ಕೆ ನಂಜರಾಜೇ ಅರಸ್, ಪ್ರಗತಿಪರರ ಆಗ್ರಹ

ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯದ ಬಳಿ ನಿರ್ಮಾಣವಾಗುತ್ತಿರುವ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ಸರಿಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಮಾಡುವುದು ಸರಿಯಲ್ಲ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜೆ ಅರಸ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟು ಕಟ್ಟಲು ದೃಢ ಸಂಕಲ್ಪ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅದಕ್ಕಾಗಿ ತನ್ನ ರಾಜ್ಯದ ಬೊಕ್ಕಸದಲ್ಲಿದ್ದ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಅಭರಣಗಳನ್ನು ದಾನವಾಗಿ ನೀಡಿದ್ದರು. ಆದರೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಏನೇನೂ ಇಲ್ಲಾ ಎಂದು ಹೇಳಿದರು. ಅಣೆಕಟ್ಟೆ ನಿರ್ಮಾಣ ಕಾರ್ಯ 1907 ರಿಂದ ಆರಂಭಗೊಂಡು 1939ರಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಅವಧಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಮಾತ್ರವಲ್ಲದೆ ಸುಮಾರು 7 ಮುಖ್ಯ ಇಂಜಿನಿಯರ್ ಹಾಗೂ 5 ಮಂದಿ ದಿವಾನರು ಕೆಲಸಮಾಡಿದ್ದಾರೆ. ಆದರೂ ಅಣೆಕಟ್ಟು ಕಟ್ಟಿದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಎಂದು ಅವರ ಕುರುಡು ಅಭಿಮಾನಿಗಳು...
ಪ್ರಮುಖ ಸುದ್ದಿಗಳುಮಂಡ್ಯ

ಕಾಲು ಜಾರಿ ತಾಯಿ-ಇಬ್ಬರು ಮಕ್ಕಳು ಕೆರೆಯಲ್ಲಿ ನೀರುಪಾಲು

ಮಳವಳ್ಳಿ, ಜೂ.14- ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಆಯತಪ್ಪಿ ಕೆರೆಗೆ ಬಿದ್ದು ನೀರು ಪಾಲಾಗಿರುವ ದುರ್ಘಟನೆ ಇಂದು ಬೆಳಗ್ಗೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38), ಮಕ್ಕಳಾದ ಸವಿತಾ (19) ಮತ್ತು ಸೌಮ್ಯ (14) ಮೃತಪಟ್ಟವರು. ಇಂದು ಬೆಳಗ್ಗೆ ಬೀರನಹಳ್ಳಿ ಗ್ರಾಮದ ತಾಯಿ ಹಾಗೂ ಇಬ್ಬರು ಮಕ್ಕಳು ಬಟ್ಟೆ ಒಗೆಯುವ ಸಲುವಾಗಿ ಕೆರೆಗೆ ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಒಬ್ಬ ಮಗಳು ನೀರಿಗೆ ಬಿದ್ದು ಕೂಗಿಕೊಳ್ಳುತ್ತಿರುವಾಗ ಸಹಾಯಕ್ಕೆ ಹೋದ ತಾಯಿ ಹಾಗೂ ಮತ್ತೊಬ್ಬ ಮಗಳು ಸಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಈ ಮಾರ್ಗದಲ್ಲಿ ಹೋಗುತ್ತಿದ್ದ ಗ್ರಾಮಸ್ಥರು ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದುದನ್ನು ಗಮನಿಸಿ ಸಮೀಪ ಹೋಗಿ ನೋಡಿದಾಗ ದಡದಲ್ಲಿ ಬಟ್ಟೆಗಳು ಇರುವುದು ಕಂಡುಬಂದಿದೆ. ತಕ್ಷಣ ಗ್ರಾಮಸ್ಥರು ಕೆರೆಯಲ್ಲಿ ಮುಳುಗುತ್ತಿದ್ದವರನ್ನು ಬದುಕಿಸಲು ನೀರಿಗೆ...
ಪ್ರಮುಖ ಸುದ್ದಿಗಳುಮಂಡ್ಯ

ತಂಬಾಕುಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಿ

ಮಂಡ್ಯ: ತಂಬಾಕು ಎನ್ನುವುದು ಮನುಷ್ಯನ ಶತ್ರುವಿದ್ದ ಹಾಗೆ, ಹೃದ್ರೋಗ ತೊಂದರೆ, ಕ್ಯಾನ್ಸರ್, ಪಾರ್ಶ್ವವಾಯು, ಹೆಣ್ಣು ಮಕ್ಕಳಲ್ಲಿ ಗರ್ಭಪಾತ, ಮತ್ತು ಇತರ ಭಯಾನಕ ಖಾಯಿಲೆಗಳನ್ನು ಇದು ತರುತ್ತದೆ ಎಂದು ಜಿಲ್ಲಾಧಿಕಾರಿ ಡಾ ಎಂವಿ ವೆಂಕಟೇಶ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆದ ಮೇ 31 ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಜಾಗೃತಿ ಮೂಡಿಸುವ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷವು 80 ಲಕ್ಷ ಜನರು ಈ ತಂಬಾಕು ಸೇವನೆಯಿಂದ ಸಾವನ್ನಪ್ಪಿದರೆ, ಬೇರೆಯವರ ತಂಬಾಕು ಸೇವನೆಯಿಂದ ಬಂದ ಹೊಗೆಯಿಂದ 10 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇದನ್ನು ಮನಗಂಡ ವಿಶ್ವಸಂಸ್ಥೆಯ ಡಬ್ಲ್ಯೂಎಚ್ಓ ಈ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬೇಕು. ಮತ್ತು ಇದರಿಂದ ಆಗುವಂತಹ ಅನಾಹುತಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಮೇ 31 ನೇ ದಿನವನ್ನು ತಂಬಾಕು ರಹಿತ ದಿನವನ್ನಾಗಿ ಆಚರಣೆ ಮಾಡುತ್ತಿದೆ ಎಂದರು....
ಪ್ರಮುಖ ಸುದ್ದಿಗಳುಮಂಡ್ಯ

ಮಳವಳ್ಳಿ, ಮಂಡ್ಯ ನಗರ ಕೊರೋನಾ ಮುಕ್ತ!

ಮಂಡ್ಯ: ಕೆಆರ್ ಪೇಟೆ ಮತ್ತು ನಾಗಮಂಗಲದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ನಡುವೆಯೂ ಸಕ್ಕರೆ ನಗರಿ ಮಂಡ್ಯ ಜಿಲ್ಲೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಜುಬಿಲಿಯಂಟ್ ಸಂಪರ್ಕದಿಂದ ಆತಂಕ ಸೃಷ್ಠಿಸಿದ್ದ ಮಂಡ್ಯ ನಗರ ಮತ್ತು ತಬ್ಲಿಘೀ ನಂಟಿನಿಂದಾಗಿ ನಲುಗಿದ್ದ ಮಳವಳ್ಳಿ ಇದೀಗ ಕೊರೋನಾ ಮುಕ್ತ ಪಟ್ಟಣ ಎನ್ನಿಸಿಕೊಂಡಿದ್ದು ಇದರ ನಡುವೆ ಇಂದು ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲದಿರುವುದು ಸಕ್ಕರೆನಾಡಿಗೆ ತುಸು ನೆಮ್ಮದಿ ತಂದಿದೆ. ಇಡೀ ಮಂಡ್ಯ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಏ7 ರಂದು ಕೊರೋನಾ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮಳವಳ್ಳಿ ಪಟ್ಟಣ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. ಸುಮಾರು 22 ಜನರಿಗೆ ಕೊರೋನಾ ಸೋಂಕು ತಗುಲಿತ್ತಾದರೂ ಇದೀಗ ಅಷ್ಟೇ ವೇಗವಾಗಿ ಸೋಂಕಿತರೆಲ್ಲರು ಗುಣಮುಖರಾಗುವ ಮೂಲಕ ಇದೀಗ ಮಳವಳ್ಳಿ ಪಟ್ಟಣ ಕೊರೋನಾ ಮುಕ್ತವಾಗಿದೆ. ದೆಹಲಿಯಿಂದ ಬಂದಿದ್ದ ತಬ್ಲಿಘಿ ಜಮಾತ್ ಸದಸ್ಯರಿಂದ ಮಳವಳ್ಳಿ ಪಟ್ಟಣಕ್ಕೆ ಅಂಟಿದ್ದ ಕೊರೋನಾ ಸೋಂಕು ಪ್ರತಿದಿನ ಏರಿಕೆಯಾಗುತ್ತಾ ಬರೋಬ್ಬರಿ...
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆ;

ಮಂಡ್ಯ: ಕೊರೋನಾ ಮಾರಿ ಮಂಡ್ಯ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದು,ಇಂದು ಮುಂಬೈನಿಂದ ವಲಸೆ ಬಂದ ಕೆ.ಆರ್.ಪೇಟೆ ಮೂಲದ 28 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237ಕ್ಕೆರೀದೆ. ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಿಲ್ಲೆಯ 237 ಮಂದಿ ಸೋಂಕಿತರ ಪೈಕಿ 204 ಮಂದಿ ಮುಂಬೈನಿಂದ ಬಂದವರಾಗಿದ್ದು, ಇಂದಿನ 28 ಮಂದಿ ಸೋಂಕಿತರ ಪೈಕಿ 10ಮಂದಿ ಪುರುಷರು, 9 ಮಂದಿ ಮಹಿಳೆಯರು, 2 ಮತ್ತು 6 ವರ್ಷದ ಇಬ್ಬರು ಮಕ್ಕಳು, 11 ರಿಂದ 13 ವರ್ಷದ 3 ಬಾಲಕರು ಹಾಗೂ 15 ರಿಂದ 17 ವರ್ಷದ 4ಮಂದಿ ಬಾಲಕಿಯರು ಸೇರಿದ್ದಾರೆಂದು ಹೇಳಿದರು. P. 1796 ರಿಂದ P. 1807 ರವರೆಗಿನ 12 ಮಂದಿ ಹಾಗೂ P. 1914 ರಿಂದ P. 1929 ರ ವರೆಗಿನ 16 ಮಂದಿಗೆ ಸೋಂಕು...
error: Content is protected !!