ಬೆಳಗಾವಿ

ಪ್ರಮುಖ ಸುದ್ದಿಗಳುಬೆಳಗಾವಿ

ಕೊರೋನಾ ನಡುವೆ ಬೆಳಗಾವಿಯಲ್ಲಿ ಪಂಚಾಯತಿ ರಾಜಕೀಯ: ನಾಮ ನಿರ್ದೇಶನ, ಕಾಂಗ್ರೆಸ್ ಬಿಜೆಪಿ ಕಿತ್ತಾಟ

ಬೆಳಗಾವಿ(ಜೂ.09): ರಾಜ್ಯದಲ್ಲಿ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲಿ ಮುಗಿಯಲಿದೆ. ನಿಯಮದ ಪ್ರಕಾರ ಅಧಿಕಾರವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲು ಬರುತ್ತದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಹೀಗಿರುವಾಗ ನಾಮ ನಿರ್ದೇಶನದ ಲೆಕ್ಕಾಚಾರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಟ್ಟಿ ಸಿದ್ದತೆ ಮಾಡಿಕೊಂಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿತ್ತು. ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ....
ಬೆಳಗಾವಿ

ಪೊಲೀಸರ ಲಾಠಿ ಏಟಿಗೆ ಯುವಕ ಅನುಮಾನಾಸ್ಪದ ಸಾವು; ಮದುವೆಯಾಗಿ ಎರಡೇ ವಾರ ಮಸಣ ಸೇರಿದ ಪ್ರೇಮಿ

ಚಿಕ್ಕೋಡಿ : ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಜಗದೀಶ್ ಸುರೇಶ ತೆಗ್ಗಿನವರ (27) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ 07 ಗಂಟೆಯಿಂದ ಸೋಮವಾರ ಬೆಳಗ್ಗೆ 07 ಗಂಟೆಯವರೆಗೆ ಕೊರೋನಾ ಕಾರಣಕ್ಕಾಗಿ ರಾಜ್ಯಾದ್ಯಂತ ಕಫ್ಯೂ ವಿಧಿಸಲಾಗಿದೆ. ಹೀಗಾಗಿ ಎಲ್ಲರೂ ಸಂಜೆ 07 ಗಂಟೆಯೊಳಗೆ ಅಂಗಡಿ ಬಾಗಿಲು ಹಾಕುವುದು ಕಡ್ಡಾಯವಾಗಿತ್ತು. ಆದರೆ, ಮೃತ ಯುವಕ ಜಗದೀಶ್ ಸುರೇಶ ತೆಗ್ಗಿನವರ ಮಾತ್ರ ಇನ್ನೂ ಅಂಗಡಿ ಬಾಗಿಲು ಹಾಕಿರಲಿಲ್ಲ. ಹೀಗಾಗಿ ಸ್ಥಳಕ್ಕೆ ಆಗಮಿಸಿದ್ದ ಕಾಗವಾಡ ಪೊಲೀಸರು ಆತನ ಮೇಲೆ ಲಾಠಿ ಬೀಸಿದ್ದರು ಎನ್ನಲಾಗಿದೆ. ಪೊಲೀಸರಿಂದ ಏಟು ತಿಂದ ಯುವಕನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯುವ ವೇಳೆ ದಾರಿ ನಡುವೆಯೇ ಆತ ಮೃತಪಟ್ಟಿದ್ದಾನೆ. ಮೃತ ಯುವಕ ಇದೇ ತಿಂಗಳ 9 ನೇ ತಾರೀಖು ಪ್ರೇಮ ವಿವಾಹವಾಗಿದ್ದ. ಆದರೆ, ಮದುವೆಯಾಗಿ ಎರಡೇ...
error: Content is protected !!