ಬೆಂಗಳೂರು

ಪ್ರಮುಖ ಸುದ್ದಿಗಳುಬೆಂಗಳೂರು

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಏಕೆ…? ರಾಜ್ಯದಲ್ಲಿ ಬೇರೆ ಯಾರು ಸ್ವಾತಂತ್ರ್ಯ ಹೋರಾಟಗಾರರಿಲ್ಲವೇ…?? ಕುಮಾರಸ್ವಾಮಿ ಕಿಡಿ

ಬೆಂಗಳೂರು: ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೆಸರಿಡಲು ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ಮುಂದಾಗಿದ್ಯಾ? ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು. 'ಸ್ವಾತಂತ್ರ್ಯ ಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರು ರಾಜ್ಯದಲ್ಲಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಹೋರಾಟ ನಡೆಸಿರುವ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡುವುದು ಅಸಮಂಜಸವಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹ ಮಾಡುತ್ತೇನೆ' ಎಂದು ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ....
ಪ್ರಮುಖ ಸುದ್ದಿಗಳುಬೆಂಗಳೂರು

ಖಾಸಗಿ ವಾಹನ ಚಾಲಕರ ದಿಕ್ಕು ತಪ್ಪಿಸುತ್ತಿರುವ ಸಾರಿಗೆ ಇಲಾಖೆ; ಸ್ವಂತ ವಾಹನ ಇದ್ದವರಿಗಷ್ಟೇ ಸೌಲಭ್ಯವಾದರೆ.., ಇನ್ನುಳಿದ ಬಾಡಿಗೆ ವಾಹನ ಚಾಲಕರು ಎಲ್ಲಿಗೆ ಹೋಗಬೇಕು..????

ಬೆಂಗಳೂರು, - ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸೂಚನೆಯನ್ನು ಲೆಕ್ಕಿಸದೆ ಸಾರಿಗೆ ಇಲಾಖೆ ಆಟೋ, ಟ್ಯಾಕ್ಸಿ ಚಾಲಕರಿಗೆ ಸೌಲಭ್ಯ ತಲುಪದಂತೆ ಅಡೆ ತಡೆ ಉಂಟು ಮಾಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪ 1610 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದರಲ್ಲಿ ಚಾಲಕರಿಗೆ ಮಾಸಿಕ ಐದು ಸಾವಿರ ರೂ.ನೀಡುವುದು ಸೇರಿದೆ. ಐದು ಸಾವಿರ ರೂ. ಪಡೆಯಲು ಚಾಲಕರು ಸೇವಾಸಿಂಧು ಆ್ಯಪ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಾವಣೆಗೆ ನಾನಾ ರೀತಿಯ ಷರತ್ತುಗಳನ್ನು ವಿಧಿಸಲಾಗಿತ್ತು. ಚಾಲಕರು ತಮ್ಮ ಚಾಲನ ಪರವಾನಗಿಯ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಸಂಖ್ಯೆಯ ಜೊತೆಗೆ, ವಾಹನದ ಎಫ್ಸಿ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿ ನಾನಾ ರೀತಿಯ ಮಾಹಿತಿ ಕೇಳಲಾಗಿತ್ತು. ಇದರಿಂದ ವಾಹನಗಳ ಮಾಲೀಕರಿಗೆ ಮಾತ್ರ ಅನುಕೂಲವಾಗುತ್ತಿತ್ತು.ಇದನ್ನು ಚಾಲಕರ ಸಂಘಗಳು ವಿರೋಧಿಸಿದವು. ಕೇವಲ ಮಾಲೀಕರಿಗೆ ಮಾತ್ರ ಅರ್ಜಿ ಹಾಕುವುದಕ್ಕೆ...
ಬೆಂಗಳೂರು

ರಾಜ್ಯಾದಾದ್ಯಂತ ಕಟಿಂಗ್ ಷಾಪ್-ಬ್ಯೂಟಿ ಪಾರ್ಲರಗಳನ್ನೂ ತೆರೆಯಬಹುದು…ಆದರೆ ಕಂಡೀಷನ್ ಅಪ್ಲೈ ಮಾಡಿದ ಕುಟುಂಬ ಕಲ್ಯಾಣ ಇಲಾಖೆ

ಬೆಂಗಳೂರು (ಮೇ 19); ರಾಜ್ಯಾದ್ಯಂತ ಸಲೂನ್ ಮತ್ತು ಬ್ಯೂಟಿ ಪಾರ್ಲರ್ಗಳನ್ನು ತೆರೆಯಲು ಆರೋಗ್ಯ- ಕುಟುಂಬ ಕಲ್ಯಾಣ ಇಲಾಖೆ ಕೊನೆಗೂ ಕೆಲವು ನಿರ್ಬಂಧಗಳ ಜೊತೆಗೆ ಅನುಮತಿ ನೀಡಿದೆ. ಸಲೂನ್ ಮತ್ತು ಪಾರ್ಲರ್ ಗಳ ಆರಂಭಕ್ಕೆ ನಿಯಮಗಳ ಜಾರಿಗೊಳಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, "ಜ್ವರ,ಶೀತ, ಕೆಮ್ಮು, ಗಂಟಲು ನೋವು ಇರೋ ವ್ಯಕ್ತಿಗಳಿಗೆ ನೋ ಎಂಟ್ರಿ. ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದ್ವಾರದಲ್ಲಿ ಸ್ಯಾನಿಟೈಸರ್ ಇಡುವುದು ಕಡ್ಡಾಯ. ಪಾರ್ಲರ್,ಸಲೂನ್ ಸಿಬ್ಬಂದಿ ಏಫ್ರನ್, ಮಾಸ್ಕ್ ಹಾಗೂ ಟೋಪಿ ಧರಿಸುವುದು ಕಡ್ಡಾಯ. ಬಳಸಿದ ಟವಲ್, ಶೀಟ್ ಬಳಸುವಂತಿಲ್ಲ, ಯೂಸ್ & ಥ್ರೋ ಟವಲ್, ಪೇಪರ್ ಶೀಟ್ ಬಳಕೆ ಕಡ್ಡಾಯ. ಪ್ರತಿಹೇರ್ ಕಟ್ ಬಳಿಕ ಸಿಬ್ಬಂದಿ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳಬೇಕು. ಟೋಕನ್ ವ್ಯವಸ್ಥೆ ಮೂಲಕ ಗ್ರಾಹಕರ ನಿಯಂತ್ರಣ ಮಾಡಬೇಕು ಮತ್ತು ಆಸನಗಳ ನಡುವೆ ಸಾಮಾಜಿಕ ಅಂತರ ಕಡ್ಡಾಯ. ಇನ್ನೂ...
ಬೆಂಗಳೂರು

ರಾಜ್ಯಕ್ಕೆ ಕೊರೋನ ಆಘಾತ: ಒಂದೇ ದಿನ ದಾಖಲೆಯ 149 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆ

ಬೆಂಗಳೂರು: ಸಕ್ಕರೆ ನಾಡು ಮಂಡ್ಯಕ್ಕೆ ಮಹಾರಾಷ್ಟ್ರ ಕಂಟಕ ಎದುರಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ಒಂದೇ ಬರೋಬ್ಬರಿ 71 ಹಾಗೂ ರಾಜ್ಯದಲ್ಲಿ ಒಟ್ಟು 149 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆಯಾಗಿದೆ. 149 ಹೊಸ ಸೋಂಕಿತರ ಪೈಕಿ 113 ಮಂದಿ ಅಂತರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಂಡ್ಯದಲ್ಲಿ ಇಂದು ಒಂದೇ ದಿನ 71 ಮಂದಿಗೆ ಸೋಂಕು ತಗುಲಿದ್ದು, ಎಲ್ಲಾ 71 ಮಂದಿ ಕೂಡ ಮುಂಬೈನಿಂದಲೇ ಆಗಮಿಸಿದ್ದಾರೆ. ಉಳಿದಂತೆ ದಾವಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿ 4, ಉತ್ತರ ಕನ್ನಡದಲ್ಲಿ 4, ವಿಜಯಪುರ, ಬೀದರ್, ಗದಗ, ಯಾದಗಿರಿ, ಚಿತ್ರದುರ್ಗ, ರಾಯಚೂರಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. ಬೀದರ್ ನಲ್ಲಿ 2 ವರ್ಷ 6 ತಿಂಗಳ ಮಗು ಸೇರಿದಂತೆ ಎಲ್ಲಾ ವಯೋಮಾನದ ಜನರು ಸೋಂಕಿತರ ಪಟ್ಟಿಯಲ್ಲಿದ್ದಾರೆ. ಇದರಿಂದ ರಾಜ್ಯದಲ್ಲಿ...
ಪ್ರಮುಖ ಸುದ್ದಿಗಳುಬೆಂಗಳೂರು

ಮುಂದಿನ ತಿಂಗಳು SSLC + PUC ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು. ಮೇ. 18 ; ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಕೊನೆಗೂ ಪ್ರಕಟವಾಗಿದೆ. ಜೂನ್ 26 ರಿಂದ ಜುಲೈ 4 ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಘೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ ಕುಮಾರ್ ವೇಳಾಪಟ್ಟಿ ಪ್ರಕಟ ಮಾಡಿದರು. ಕೋವಿಡ್ – 19 ಆತಂಕದ ನಡುವೆ ಗೊಂದಲದಲ್ಲಿದ್ದ ಪರೀಕ್ಷಾ ದಿನಾಂಕವನ್ನು ಕೊನೆಗೂ ಪ್ರಕಟಿಸಿದ್ದು 2879 ಕೇಂದ್ರಗಳಲ್ಲಿ 848196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪರೀಕ್ಷೆ ಬರೆಯಲು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 43720 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣಾ ಸ್ಕ್ರೀನ್ ಜತೆಗೆ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗುವುದು, ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಮೇಲ್ವಿಚಾರಕರು ಶಿಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪ್ರತಿ...
ಪ್ರಮುಖ ಸುದ್ದಿಗಳುಬೆಂಗಳೂರು

ಭಾಸ್ಕರ್ ರಾವ್ ಕುರ್ಚಿಗೆ ಕಮಲ್ ಪಂತ್-ಅಮೃತ್ ಪಾಲ್ ನಡುವೆ ಬಿಗ್ ಫೈಟ್; ಭಾಸ್ಕರ್ ರಾವ್ ಎತ್ತಂಗಡಿಗೆ ಕಾರಣವಾದರೂ ಏನು….???

ಬೆಂಗಳೂರು, ಮೇ 18-ರಾಜಧಾನಿ ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ, ಕೊರೊನಾ ನಿಯಂತ್ರಣ, ಸಿಎಎ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ವಿಫಲರಾದ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎತ್ತಂಗಡಿಯಾಗುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ಬೆಂಗಳೂರು ಮಹಾನಗರಕ್ಕೆ ರಾಜ್ಯ ಸರ್ಕಾರ ನೂತನ ಪೊಲೀಸ್ ಆಯುಕ್ತರನ್ನು ನೇಮಕ ಮಾಡಿ ಆದೇಶ ಹೊರಡಿಸಲಿದೆ. ಭಾಸ್ಕರ್ರಾವ್ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಈಗಾಗಲೇ ತೆರೆಮರೆಯಲ್ಲಿ ಭರ್ಜರಿ ಲಾಬಿ ಆರಂಭವಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್ಪಂಥ್, ಅಗ್ನಿಶಾಮಕ ಪಡೆಯ ಎಡಿಜಿಪಿ ಸುನಿಲ್ ಅಗ್ರವಾಲ್ ಹಾಗೂ ಆಡಳಿತ ವಿಭಾಗದ ಮುಖ್ಯಸ್ಥ ಅಮೃತ್ಪಾಲ್ ಅವರ ಹೆಸರುಗಳು ಕೇಳಿಬರುತ್ತಿವೆ. ಒಂದು ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಿದ್ದೇ ಆದಲ್ಲಿ ಈ ಸ್ಥಾನಕ್ಕೆ ಕಮಲ್ಪಂಥ್ ನೇಮಕವಾಗುವ ಸಾಧ್ಯತೆ ಹೆಚ್ಚಿದೆ. ಕಾರಣ ಕಮಲ್ಪಂಥ್...
ಬೆಂಗಳೂರು

ಶೀಘ್ರದಲ್ಲೇ ಎತ್ತಂಗಡಿಯಾಗುವರೇ ಬೆಂಗಳೂರಿನ ದಕ್ಷ ಪೊಲೀಸ್ ಆಯುಕ್ತರು..??

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುವ ಸಾಧ್ಯತೆ ಕಂಡು ಬಂದಿದೆ. ಲಾಕ್ ಡೌನ್ ವೇಳೆ ಆದ ಘಟನಾವಳಿಗಳು ಹಾಗೂ ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮತ್ತು ಭಾಸ್ಕರ್ ರಾವ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಭಾಸ್ಕರ್ ರಾವ್ ಅವರ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಅಮೃತ್ ಪೌಲ್ ಅವರನ್ನು ನೇಮಕ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಇಂದು ರಾತ್ರಿ ಅಥವಾ ನಾಳೆ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ....
ಬೆಂಗಳೂರು

ಆಧಿಕೃತವಾಗಿ ಶಾಲೆಗಳ ತೆರೆಯುವುದಕ್ಕೆ ಸರ್ಕಾರದಿಂದ ಸ್ಪಷ್ಟನೆ..!!

ಬೆಂಗಳೂರು, (ಮೇ.16): ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವುದರಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭವಾಗುತ್ತದೆ ಎಂಬ ಗೊಂದಲ ಇನ್ನೂ ಮುಂದುವರೆದಿದೆ. ಇದರ ನಡುವೆ ಎರಡು ಪಾಳಿಯಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ ಎನ್ನುವ ಸುದ್ದಿ ಹಬ್ಬಿದೆ. ಇದೀಗ ಶಿಕ್ಷಣ ಇಲಾಖೆ ಶಾಲೆಗಳು ಆರಂಭವಾಗುವ ಕುರಿತು ಬಂದಿರುವ ವರದಿಗಳಿಗೆ ಸಮಜಾಯಿಷಿ ನೀಡಿದೆ. ಸಾಮಾಜಿಕ ಅಂತರ ಕಾಪಾಡುವ ಕುರಿತು ಪಾಳಿ ಪದ್ಧತಿಯಲ್ಲಿ ತರಗತಿಗಳನ್ನು ನಡೆಸುವ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ಆಗಿವೆ. ಆದ್ರೆ, ಇದೇ ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದೆ... 2020-21ನೇ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭಿಸಬೇಂದು ನಿರಂತರವಾಗಿ ಅಧಿಕಾರಿಗಳ ಸಭೆ ಮೇಲೆ ಸಭೆ ನಡೆಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಇದರಿಂದ ತರಾತುರಿಯಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ. ಶಾಲೆ ಆರಂಭದ ಬಗ್ಗೆ ಇನ್ನೂ ಯಾವುದೇ ತೀರ್ಮಾನ...
ಬೆಂಗಳೂರು

ಲಾಕ್ಡೌನ್ ವೇಳೆಯಲ್ಲಿ ದರೋಡೆಗೆ ಸ್ಕೆಚ್ ; ಸ್ಕೆಚ್ ಮಿಸ್ಸಾಗಿ ಐದು ಜನ ಆರೆಸ್ಟ್

ಬೆಂಗಳೂರು, ಮೇ 14- ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ರೌಡಿಗಳು ಸೇರಿ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಬಾಗಲಗುಂಟೆಯ ಅಶೋಕನಗರ ನಿವಾಸಿ ರಘು ಅಲಿಯಾಸ್ ಕೋತಿ ರಘು (27), ವಿಲ್ಸನ್ ಗಾರ್ಡನ್ ನಿವಾಸಿ ಗಣೇಶ್ ಅಲಿಯಾಸ್ ಗಣಿ (27), ದಾಸರಹಳ್ಳಿಯ ಚೊಕ್ಕಸಂದ್ರ ನಿವಾಸಿ ರಂಜನ್ (29), ಲಗ್ಗೆರೆ, ಕಾವೇರಿನಗರದ ಸುನೀಲ್ಕುಮಾರ್ (31) ಮತ್ತು ಜಾಲಹಳ್ಳಿ ಕ್ರಾಸ್, ವಿವೇಕಾನಂದ ನಗರದ ರಾಜಶೇಕರ್ (27) ಬಂಧಿತ ರೌಡಿಗಳು. ನಗರದ ಪೀಣ್ಯ 1ನೆ ಹಂತ, ಇಂಡಸ್ಟ್ರಿಯಲ್ ಏರಿಯಾದ ಕಿರ್ಲೋಸ್ಕರ್ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರಿಂದ ಹಣ-ಆಭರಣ ದೋಚಲು ಹೊಂಚು ಹಾಕಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿ ಮಚ್ಚು, ಲಾಂಗು, ಖಾರದ ಪುಡಿ ಪೊಟ್ಟಣ ವಶಪಡಿಸಿಕೊಂಡಿದ್ದಾರೆ.ಆರೋಪಿ ರಘು ಬಾಗಲಗುಂಟೆ ಠಾಣೆಯ ರೌಡಿ ಶೀಟರ್ ಆಗಿದ್ದು,...
ಬೆಂಗಳೂರು

ಸೇವಾಸಿಂಧುವಿನಲ್ಲಿ ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ

ಬೆಂಗಳೂರು, ಮೇ 14 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೆ, ಸಾರಿಗೆ ಸಂಚಾರ ಆರಂಭವಾಗದ ಕಾರಣ ಅಂತರ ಜಿಲ್ಲಾ ಸಂಚಾರ ನಡೆಸುವುದು ಅಷ್ಟು ಸುಲಭವಾಗಿಲ್ಲ. ಅಲ್ಲದೇ ಸಂಚಾರಕ್ಕೆ ಪಾಸು ಪಡೆಯುವುದು ಕಡ್ಡಾಯವಾಗಿದೆ. ರಾಜ್ಯದ ವಿವಿಧ ನಗರದಲ್ಲಿ ಸಿಲುಕಿರುವ ಜನರು ಅಂತರ ಜಿಲ್ಲಾ ಸಂಚಾರ ಮಾಡಲು ಪಾಸುಗಳನ್ನು ಪಡೆಯಬೇಕು. ಕರ್ನಾಟಕ ಪೊಲೀಸ್ ಇಲಾಖೆ ಇದಕ್ಕಾಗಿ kspclearpass ನೀಡುತ್ತಿದೆ. ಪಾಸು ಇಲ್ಲದೇ ಸಂಚಾರ ನಡೆಸಿದರೆ ಕಡ್ಡಾಯವಾಗಿ ಕ್ವಾರಂಟೈನ್ಗೆ ಹಾಕಲಾಗುತ್ತದೆ. ಪೊಲೀಸ್ ಇಲಾಖೆ ವೆಬ್ ಸೈಟ್ ಮೂಲಕ ಮಾತ್ರ ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯಬೇಕಿತ್ತು. ಕರ್ನಾಟಕ ಸರ್ಕಾರ ಈಗ ಪಾಸು ಪಡೆಯುವುದನ್ನು ಮತ್ತಷ್ಟು ಸುಲಭವಾಗಿ ಮಾಡಿದೆ. ಸೇವಾಸಿಂಧು ಪೋರ್ಟಲ್ನಲ್ಲಿಯೂ ಪಾಸುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.ಸೇವಾಸಿಂಧು ಪೋರ್ಟಲ್ನಲ್ಲಿ ಕೋವಿಡ್ - 19 ಕರ್ನಾಟಕದ ಇತರ ಜಿಲ್ಲೆಗಳಿಗೆ ಪ್ರಯಾಣಿಸಲು ಇಲ್ಲಿ ಅರ್ಜಿ ಸಲ್ಲಿಸಿ ಎಂಬ ವಿಭಾಗವಿದೆ. ಅಲ್ಲಿ ಕ್ಲಿಕ್ ಮಾಡಿ...
1 2 3
Page 3 of 3
error: Content is protected !!