ಬೆಂಗಳೂರು

ಪ್ರಮುಖ ಸುದ್ದಿಗಳುಬೆಂಗಳೂರು

ಜುಲೈ 2 ಕ್ಕೆ ಡಿಕೆಶಿ ಪದಗ್ರಹಣ ಫಿಕ್ಸ್? ಹೋಮ ನಡೆದ ಸ್ಥಳದಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜುಲೈ 2 ಕ್ಕೆ ಬಹುತೇಕ ಫಿಕ್ಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೂನ್ 14 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಒಟ್ಟು ಮೂರು ಬಾರಿ ಕಾರ್ಯಕ್ರಮ ಮಂದೂಡಲ್ಪಟ್ಟಿದ್ದು ಇದೀಗ ಜುಲೈ 2 ರಂದು ನಡೆಯಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಇದೆ. ಜೂನ್ 29 ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಯ ಆಯ್ಕೆ ಇನ್ನು ಅಂತಿಮಗೊಂಡಿಲ್ಲ. ಸಾಕಷ್ಟು ಜನರು ಲಾಬಿ ನಡೆಸುತ್ತಿದ್ದು ಅಭ್ಯರ್ಥಿ ಆಯ್ಕೆಯೂ ಜಟಿಲಗೊಂಡಿದೆ. ಪರಿಣಾಮ ಪ್ರಮುಖ ಮುಖಂಡರು ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಬೇಕಾಗಿದೆ. ಈ ಗೊಂದಲ ಬಗೆಹರಿದ ಬೆನ್ನಲ್ಲೇ ಕಾರ್ಯಮ್ರಮವನ್ನು ಹಮ್ಮಿಕೊಳ್ಳುವುದು ಡಿಕೆಶಿ ಯೋಜನೆಯಾಗಿದೆ. ಸದ್ಯ ತರಾತುರಿಯಲ್ಲಿ ಕಾರ್ಯಕ್ರಮ ನಡೆಸುವುದರಿಂದ ಸಮಸ್ಯೆಯಾಗಲಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಕಾರ್ಯಕ್ರಮಕ್ಕೆ ಅಡೆತಡೆ...
ಪ್ರಮುಖ ಸುದ್ದಿಗಳುಬೆಂಗಳೂರು

ನಾಲ್ಕು ಮದುವೆ ಸಾಲ್ದು ಅಂತ ಮ್ಯಾಟ್ರಿಮೋನಿಯಲ್ಲಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದವ ಪೊಲೀಸರ ಬಲೆಗೆ

ಬೆಂಗಳೂರು (ಜೂನ್ 09); ನಾಲ್ಕು ಮದುವೆಯಾಗಿ ಮತ್ತೊಂದು ಹುಡುಗಿಯನ್ನು ಮೈಂಟೇನ್ ಮಾಡ್ತಿದ್ದ ಚಾಲಾಕಿ ಕಳ್ಳನನ್ನು ವಿಚ್ಛೇಧಿತ ಮಹಿಳೆ ನೀಡಿದ ದೂರಿನ ಮೇಲೆ ನಗರದ ಬ್ಯಾಡರ ಹಳ್ಳಿ ಪೊಲೀಸರು ಇಂದು ಬಂಧಿಸಿದ್ದಾರೆ. ಬಂದಿತ ವ್ಯಕ್ತಿಯನ್ನು ಮೈಸೂರು ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ವಿಚ್ಛೇಧಿತ ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್. ಮ್ಯಾಟ್ರಿಮೋನಿಯಲ್ಲಿ ವಿಚ್ಛೇಧಿತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಈತ ಅವರಿಗೆ ಬಾಳು ಕೊಡುವುದಾಗಿ ನಂಬಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಹೀಗೆ ಪರಿಚಯವಾದ ಓರ್ವ ಮಹಿಳೆಯ ಬಳಿ ಸೈಟ್ ತೆಗೆದುಕೊಳ್ಳಬೇಕು ಎಂದು ಅದಕ್ಕೆ 10 ಲಕ್ಷ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಆರೋಪಿ ಮಾತಿಗೆ ಮರುಳಾಗಿ ಹಣ ಇಲ್ಲ ಎಂದು ಆಕೆಯೂ ಒಡವೆಯನ್ನು ಕೊಟ್ಟಿದ್ದಾರೆ. ತನ್ನ ಮಾಂಗಲ್ಯ ಸರ ಸೇರಿ 80 ಗ್ರಾಂ ಒಡವೆ ನೀಡಿದ್ದಾರೆ. ಆದರೆ, ಆರೋಪಿ ಸುರೇಶ್ ಮಾತ್ರ ಒಡವೆ ಕೈಗೆ ಸಿಗುತ್ತಿದ್ದಂತೆ ಫೋನ್ ರಿಸೀವ್ ಮಾಡದೆ ನಾಪತ್ತೆಯಾಗಿದ್ದಾನೆ. ಈ...
ಪ್ರಮುಖ ಸುದ್ದಿಗಳುಬೆಂಗಳೂರು

ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ನಿಜಕ್ಕೂ ಖರ್ಗೆ ಘೋಷಣೆ ಮಾಡಿರುವ ಆಸ್ತಿ ಅಷ್ಟೇನಾ ಎಂಬುದು ಓದುಗರ ಯಕ್ಷಾ ಪ್ರಶ್ನೆ!.

ಬೆಂಗಳೂರು: ರಾಜ್ಯಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು ಕರ್ನಾಟದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇತ್ತ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದರೊಂದಿಗೆ ಆಸ್ತಿ ಘೋಷಣಾ ಪತ್ರವನ್ನೂ ಸಲ್ಲಿಸಿದ್ದು, ಸದ್ಯ ಅವರ ಬಳಿ ಇರುವ ಆಸ್ತಿ ಎಷ್ಟು ಎಂಬ ವಿಚಾರ ಎಲ್ಲರ ಗಮನ ಸೆಳೆದಿದೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕನ ಹೆಸರಲ್ಲಿ ಜಮೀನು ಹಾಗೂ ಕಾರು ಇಲ್ಲ ಎಂಬುವುದು ಭಾರೀ ಅಚ್ಚರಿ ಮೂಡಿಸಿದೆ.... ಹೌದು ಸೋಮವಾರ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರ ಘೋಷಣಾ ಪತ್ರ ಸಲ್ಲಿಸಿದ್ದಾರೆ. ಖರ್ಗೆ ಕುಟುಂಬದ ಒಟ್ಟು ಆಸ್ತಿ ಮೌಲ್ಯ 15 ಕೋಟಿ ರೂ.ಗಳಿಗಿಂತ ಅಧಿಕವಿದೆ. ಇನ್ನು ಖರ್ಗೆಗಿಂತ ಅವರ ಪತ್ನಿ ರಾಧಬಾಯಿ ಹೆಚ್ಚು ಶ್ರೀಮಂತೆ ಎಂದು ಬಹಿರಂಗಗೊಂಡಿದೆ. ಖರ್ಗೆ ಅವರ ಬಳಿ ನಗದು ಸೇರಿ ನಾನಾ...
ಪ್ರಮುಖ ಸುದ್ದಿಗಳುಬೆಂಗಳೂರು

ರಾಜ್ಯಸಭೆ ಚುನಾವಣೆ: ಬಿ ಫಾರಂ ಪಡೆದುಕೊಂಡ ಖರ್ಗೆ, ದೇವೆಗೌಡ, ಮಂಗಳವಾರ ನಾಮಪತ್ರ ಸಲ್ಲಿಕೆ ಕೊನೆಯ ದಿನ ; ಬಿಜೆಪಿ ಅಭ್ಯರ್ಥಿ ಇನ್ನೂ ತೆರೆಯ ಹಿಂದೆ…..???

ಬೆಂಗಳೂರು: ಜೂನ್ 16 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ನಡೆಸಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಸಮ್ಮತಿ ಸೂಚಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಎಚ್ಡಿ ಕುಮಾರಸ್ವಾಮಿ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. "ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವರು. ಎಲ್ಲರ ಒಮ್ಮತದ ಅಭಿಪ್ರಾಯಕ್ಕೆ ಸಮ್ಮತಿಸಿದ ದೇವೇಗೌಡರಿಗೆ ಧನ್ಯವಾದಗಳು" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ್ದ ಜನನಾಯಕ ದೇವೇಗೌಡರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಎಲ್ಲರ...
ಪ್ರಮುಖ ಸುದ್ದಿಗಳುಬೆಂಗಳೂರು

ರಾಜ್ಯಾದ್ಯಂತ ದೇವಸ್ಥಾನ, ಚರ್ಚ್, ಮಸೀದಿಗಳು ಓಪನ್:ಪಾಲಿಸಬೇಕಾದ ನಿಯಮಗಳೇನು?

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು ಸೋಮವಾರ ತೆರೆದಿವೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಗ್ಗೆಯೇ ಬಂದು ದೇವರ ದರ್ಶನ ಪಡೆದಿದ್ದು ಕಂಡುಬಂತು. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಧಾರ್ಮಿಕ ಕೇಂದ್ರಗಳು ಬಾಗಿಲು ತೆರೆದಿವೆ. ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯ, ಮಸೀದಿ, ಚರ್ಚ್ ಗಳು ಸೋಮವಾರ ತೆರೆದಿವೆ. ಈ ಹಿನ್ನೆಲೆಯಲ್ಲಿ ಇಂದು ನಸುಕಿನಿಂದಲೇ ದೇವಸ್ಥಾನದ ಬಾಗಿಲು ತೆರೆದು ಅರ್ಚಕರು ದೇವರ ಮೂರ್ತಿಗಳನ್ನು ತೊಳೆದು, ಆವರಣಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡರು. ಭಕ್ತರು ಸಹ ದೇವಾಲಯಗಳಿಗೆ ಹೋಗುವ ಹುಮ್ಮಸ್ಸಿನಲ್ಲಿದ್ದಾರೆ. ಕರ್ನಾಟಕದಲ್ಲಿ ದೇವಾಲಯಗಳನ್ನು ಜೂನ್ 1ಕ್ಕೆ ಆರಂಭ ಮಾಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬರಲು ಸರ್ಕಾರ ಕಾಯುತ್ತಿತ್ತು ಎಂದು ಮುಜರಾಯಿ ಇಲಾಖೆ...
ಪ್ರಮುಖ ಸುದ್ದಿಗಳುಬೆಂಗಳೂರು

ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಜಮೀರ್ ಗರಂ

ಬೆಂಗಳೂರು: ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಗರಂ ಆಗಿದ್ದಾರೆ. ಹೌದು.. ಕೋವಿಡ್ 19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಇಂದು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ವೈರಸ್ ನಿಂದ ಗುಣಮುಖರಾದ ಖುಷಿಯಲ್ಲೇ ಇಮ್ರಾನ್ ಪಾಷಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಯಿಂದ ಮನೆಗೆ ನೂರಾರು ಜನರೊಂದಿಗೆ ಮೆರವಣಿಗೆಯಲ್ಲಿ ತೆರಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರೂ ಕೂಡ ಇಮ್ರಾನ್ ಪಾಷಾ ವಿರುದ್ಧ ಗರಂ ಆಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಜಮೀರ್, 'ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೊರೊನಾ ಇಂದ ಗುಣಮುಖರಾಗಿ ಬಂದಿದ್ದು ನನಗೂ ಸಂತೋಷವಾಗಿತ್ತು, ಆದರೆ ಈ ರೀತಿ ಯುದ್ಧ ಗೆದ್ದು ಬಂದವರಂತೆ...
ಪ್ರಮುಖ ಸುದ್ದಿಗಳುಬೆಂಗಳೂರುಮನರಂಜನೆ

ಆಗಸ್ಟ್ ಗೆ ಅಪ್ಪ, ಜೂನ್ ಗೆ ಅಣ್ಣಾ – ಅಳಿಯ, ಜೂನ್ ತಿಂಗಳು ಸರ್ಜಾ ಕುಟುಂಬಕ್ಕೆ ಮುಳ್ಳಾಗುತ್ತಿದೆಯಾ…???

ಅರ್ಜುನ್ ಸರ್ಜಾ ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರುಗಳಿಸಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.ಇಂತಹ ನಟನ ಕುಟುಂಬಕ್ಕೆ ಜೂನ್ ತಿಂಗಳು ಕೂಡಿ ಬರುತ್ತಿಲ್ಲವೆಂದು ಕಾಣಿಸುತ್ತಿದೆ. ಕಾರಣ ಕಳೆದ ಕೆಲವು ವರುಷಗಳ ಹಿಂದೆ ಅಂದರೆ 2009ರ ಜೂನ್ ತಿಂಗಳ ಕೊನೆ ವಾರದ ಶನಿವಾರದಂದೇ ಅರ್ಜುನ್ ಸರ್ಜಾರ ಮುದ್ದಿನ ಅಣ್ಣಾ, ಕನ್ನಡ ಚಿತ್ರರಂಗದ ತುಂಬು ಕುಟುಂಬದ ಚಲನಚಿತ್ರಗಳನ್ನ ನಿರ್ದೇಶಿಸಿ, ಸ್ಟಾರ್ ನಟರಿಗೆ ಆ್ಯಕ್ಸನ್ ಕಟ್ ಹೇಳಿದ್ದ ಕಿಶೋರ್ ಸರ್ಜಾ ಬಹು ಅಂಗಾಂಗ ವೈಫಲ್ಯತೆ ಹಾಗೂ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಕಿಶೋರ್ ಸರ್ಜಾ ಅವರು ಅಂದು ಎಸ್ ವಿ...
ಪ್ರಮುಖ ಸುದ್ದಿಗಳುಬೆಂಗಳೂರು

ಕೊರೋನಾ ಎಫೆಕ್ಟ್: ರಾಜ್ಯದಿಂದ ಕಾಲ್ಕಿತ್ತ 4 ರಿಂದ 5 ಲಕ್ಷ ಕಾರ್ಮಿಕರು: ಸಂಕಷ್ಟದಲ್ಲಿ ಕೈಗಾರಿಕೆಗಳು

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಹೊರ ರಾಜ್ಯಗಳ ಕಾರ್ಮಿಕರು ವಲಸೆ ಹೋಗಿದ್ದಾರೆ. ನುರಿತ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದು, ಪರಿಣಾಮ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲದ ತೀವ್ರ ಸಮಸ್ಯೆ ಎದುರಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಪರ್ಯಾಯವಿಲ್ಲ. ಬೃಹತ್ ಕೈಗಾರಿಕೆಗಳಲ್ಲಿ ರೊಬೋಟಿಕ್, ಆಟೋಮೇಷನ್ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೈಗಾರಿಕೆಗಳನ್ನು ಮುನ್ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಸೌಲಭ್ಯ ಸಣ್ಣ ಮಟ್ಟದ ಉದ್ಯಮಗಳಲ್ಲಿಲ್ಲ. ದೇಶಾದ್ಯಂತ ಸುಮಾರು ನಾಲ್ಕು ಸಾವಿರ ಶ್ರಮಿಕ್ ರೈಲುಗಳ ಮೂಲಕ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸಿದ್ದು, ಬಹುತೇಕ ಮಂದಿ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ. ರಾಜ್ಯದಿಂದಲೂ ಅಂದಾಜು ನಾಲ್ಕರಿಂದ ಐದು ಲಕ್ಷ ಕಾರ್ಮಿಕರು ವಾಪಸ್ ಹೋಗಿದ್ದಾರೆ. ಈ ಕಾರ್ಯಾಚರಣೆ ಇನ್ನಷ್ಟು ಮುಂದುವರೆಯಲಿದ್ದು, ಮತ್ತಷ್ಟು ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ...
ಪ್ರಮುಖ ಸುದ್ದಿಗಳುಬೆಂಗಳೂರು

ಬುಧವಾರ ಮತ್ತೆ ಬಿಜೆಪಿ ಬಂಡಾಯ ಶಾಸಕರ ಸಭೆ; ಸಿಎಂ ಯಡಿಯೂರಪ್ಪಗೆ ಸಂಕಟ

ಬೆಂಗಳೂರು (ಮೇ 31): ಕೊರೋನಾದಿಂದಾಗಿ ಕಳೆದ ಎರಡೂವರೆ ತಿಂಗಳಿಂದ ತಣ್ಣಗಾಗಿದ್ದ ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಗಾರಿಕೆಯ ಜೊತೆಗೆ ಬಿಜೆಪಿ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಬಿಜೆಪಿಯಲ್ಲಿ ಎದ್ದಿರುವ ಬಂಡಾಯವನ್ನು ಶಮನ ಮಾಡಲು ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಬುಧವಾರ ಮತ್ತೊಮ್ಮೆ ಸಭೆ ಸೇರಲು ಬಂಡಾಯ ಶಾಸಕರು ತೀರ್ಮಾನಿಸಿದ್ದಾರೆ. 2 ದಿನಗಳ ಹಿಂದಷ್ಟೇ ಬಿಜೆಪಿ ಬಂಡಾಯ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರು ಊಟಕ್ಕೆ ಸೇರಿದ್ದರು. ಊಟದ ನೆಪದಲ್ಲಿ ಅಲ್ಲಿ ಬಂಡಾಯ ಶಾಸಕರ ಸಭೆ ನಡೆಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ, ವಿಚಾರಗಳಲ್ಲಿ ತಲೆಹಾಕುತ್ತಿದ್ದಾರೆ ಎಂಬುದು ಹಲವು ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಇನ್ನು 3 ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಲು ಬಂಡಾಯ...
ಪ್ರಮುಖ ಸುದ್ದಿಗಳುಬೆಂಗಳೂರು

ಸಿಎಂ ಜೊತೆ ಉತ್ತಮ ಸಂಬಂಧಕ್ಕಾಗಿ ನಿರಾಣಿ ಭಿನ್ನರಿಗೆ ಇಟ್ಟರಾ ಗುರಾಣಿ ? : ಬಂಡಾಯ ಶಾಸಕರಲ್ಲಿ ಉಂಟಾಗಿದೆ ಆಕ್ರೋಶ

ಬೆಂಗಳೂರು(ಮೇ.31): ಆಡಳಿತಾರೂಢ ಬಿಜೆಪಿಯಲ್ಲಿನ ಬಂಡಾಯ ಹೊಸ ಟ್ವೀಸ್ಟ್ ಪಡೆಯುತ್ತಿದೆ. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಅದೇ ಪಕ್ಷದ ಶಾಸಕರಾದ ಉಮೇಶ ಕತ್ತಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುರುಗೇಶ್ ನಿರಾಣಿ ನಾನು ಭಿನ್ನಮತೀಯರ ಸಭೆಯಲ್ಲಿ ಪಾಲ್ಗೊಂಡಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವುದೇ ಶಾಸಕ ಉಮೇಶ್ ಕತ್ತಿ ಹಾಗೂ ಶಾಸಕ ಬಸವನಗೌಡ ಪಾಟೀಲ ಯತ್ನಾಳರ ಕೋಪಕ್ಕೆ ಕಾರಣವಾಗಿದೆ. ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಪಾಲ್ಗೊಂಡಿದ್ದರು. ಅಲ್ಲದೇ ಈ ಹಿಂದೆ ಉಮೇಶ ಕತ್ತಿ, ರಾಮದಾಸ್ ಜೊತೆ ಸೇರಿ ನಿರಾಣಿ ಸಭೆ ಮಾಡಿದ್ದರು. ಜೊತೆಗೆ ಗುರುವಾರ ಕತ್ತಿ ನಿವಾಸದ ಸಭೆಗೂ ಬರುತ್ತೇನೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಸಭೆಗೆ ಗೈರಾಗಿದ್ದರು. ಇದು ನಿರಾಣಿಯ ತಂತ್ರಗಾರಿಕೆ, ನಮ್ಮ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ...
1 2 3
Page 1 of 3
error: Content is protected !!