ಬಾಗಲಕೋಟೆ

ಪ್ರಮುಖ ಸುದ್ದಿಗಳುಬಾಗಲಕೋಟೆ

ಸಾಮಾಜಿಕ ಅಂತರ ಮರೆತ ಬಾಗಲಕೋಟೆ ಜಿಲ್ಲೆ ಸಿಇಒ; ನರೇಗಾ ಕೆಲಸಗಾರರ ಜಾತ್ರೆ

ಬಾಗಲಕೋಟೆ: ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು. ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಸನ್ನಿವೇಶದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವ ನೂರಾರು ಜನ ಕೂಲಿಕಾರರು ಒಂದೆ ಕಡೆಗೆ ಕೆಲಸ ಮಾಡುತ್ತಿದ್ದು, ಇವರಲ್ಲಿ ಬಹುತೇಕರು ಮಾಸ್ಕ್ ಧರಿಸಿಯೇ ಇಲ್ಲ. ಸಾಮಾಜಿಕ ಅಂತರ ಕಾಪಾಡುವುದಂತೂ ದೂರಿನ ಮಾತು ಎನ್ನುವುದನ್ನು ಪೊಟೋ ಸಾರಿ ಸಾರಿ ಹೇಳುತ್ತಿದೆ. ಬರೋಬ್ಬರಿ ೪೬೦ ಜನ ಕೂಲಿಕಾರರ ಜತೆ ನಿಂತು ಪೋಟೊ ಕ್ಲಿಕ್ಕಿಸಿಕೊಂಡವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ. ಭಾನುವಾರ ಕೆನಾಲ ಬಳಿ ಕೆಲಸ ಹೇಗೆ ನಡೆಯುತ್ತಿದೆ ಎನ್ನುವ ಪರಿಶೀಲನೆಗೆ ಹೋದಾಗ ಈ ಸನ್ನಿವೇಶ ನಿರ್ಮಾಣವಾಗಿತ್ತು. ಕೊರೋನಾ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ಸಿಇಒ...
ಬಾಗಲಕೋಟೆ

ಗೋವಾದಲ್ಲಿದ ಕೂಲಿ ಕಾರ್ಮಿಕರಿಗೆ ನೆರವಾದ: ಜಿಪ ಅಧ್ಯಕ್ಷೀ ಮೇಟಿ

ಬಾಗಲಕೋಟೆ: ಪಕ್ಕದ ರಾಜ್ಯ ಗೋವಾದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಜನರನ್ನು ಬಾಗಲಕೋಟ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಾಯಕ್ಕ ಮೇಟಿ ಯವರು ದಿನಾಂಕ 18/05/2020 ಸೋಮವಾರ ರಾತ್ರಿ 11-15 ಗಂಟೆಗೆ ಬಾಗಲಕೋಟೆಯ ನವನಗರ ಬಸ್ ನಿಲ್ದಾಣಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಕರೆತಂದಾಗ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ದಡ್ಡಿ ಹಾಜರಿದ್ದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರವಾಗಿ ಕಾರ್ಮಿಕರನ್ನು ತವರು ಜಿಲ್ಲೆಗೆ ಸ್ವಾಗತಿಸಿದರು ಮತ್ತು ಅವರಿಗಾಗಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಿನ ಪರಿಸ್ಥಿತಿ ಕಂಡು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಾಯಕ್ಕ ಮೇಟಿ ಯವರು ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ ಹಾಗೂ ಇನ್ನಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಮೊದಲೇ ಇಷ್ಟು ಕಾರ್ಮಿಕರು ಇಂತಹ ಸಮಯಕ್ಕೆ ಇಲ್ಲಿಗೆ ಬರುತ್ತಾರೆ ಎನ್ನುವ ಮಾಹಿತಿಯನ್ನು ನಾನು ಖುದ್ದಾಗಿ ತಮಗೆ ತಿಳಿಸಿರುತ್ತೇನೆ ಆದರೂ ತಮ್ಮೆಲ್ಲರ ನಿಷ್ಕಾಳಜಿಯಿಂದ ಈಗ ಕಾರ್ಮಿಕರಿಗೆ ಊಟವಿಲ್ಲದೆ...
ಪ್ರಮುಖ ಸುದ್ದಿಗಳುಬಾಗಲಕೋಟೆ

ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ವಿರೋಧಿ ಎಂದ: ವೀರಣ್ಣ ಚರಂತಿಮಠ

ಬಾಗಲಕೋಟೆ: ವಿವಾದಿತ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಸುಗ್ರೀವಾಜ್ಞೆಗೆ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಯ್ದೆ ಜಾರಿ ವೇಳೆ ಮತ ಹಾಕುವಾಗ ವಿಪ್ ಜಾರಿ ಮಾಡಲಾಗುತ್ತದೆ. ಆಗ ಸರ್ಕಾರದ ಪರ ನಾನು ವೋಟು ಹಾಕಬೇಕು. ಅದು ಬೇರೆ ವಿಷಯ. ಪಕ್ಷದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಪ್ಪಬೇಕೆಂದಿಲ್ಲ. ನಾವು ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರೃ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಫೋನ್ ಮಾಡಿ ಸಚಿವ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಈಶ್ವರಪ್ಪ ಜತೆ ಮಾತನಾಡಿದ್ದೇನೆ. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಯ್ದೆ ತಿದ್ದುಪಡಿಯಿಂದ ರೈತರಿಗಾಗುವ ಅನನುಕೂಲಗಳ ಬಗ್ಗೆ ತಿಳಿಹೇಳುತ್ತೇನೆ. ಸುಗ್ರೀವಾಜ್ಞೆ ಆಗಿದ್ದರೂ ಮಸೂದೆ ಬಗ್ಗೆ ಚರ್ಚೆ ನಡೆದಾಗ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು. ಹೊಸ ಕಾಯ್ದೆಯಿಂದ ಏನಾಗುತ್ತದೆ ಅಂದರೆ, ಈಗಾಗಲೇ ಅನೇಕರು ಹಳ್ಳಿಗಳಿಗೆ ಹೋಗಿ ದಾಸ್ತಾನು ಖರೀದಿ ಮಾಡುತ್ತಾರೆ....
ಬಾಗಲಕೋಟೆ

ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗದಿರಲು ಲಾಕ್‌ಡೌನ್ ಕಾರಣ: ಸಿಇಎ ಮಾನಕರ

ಬಾಗಲಕೋಟೆ: ಪ್ರತಿವರ್ಷ ಮೇ ತಿಂಗಳಿನಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈ ಬಾರಿ ಮಾತ್ರ ಜಿಲ್ಲೆಯ ಯಾವ ಭಾಗದಲ್ಲೂ ಇದುವರೆಗೂ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಇದಕ್ಕೆ ಲಾಕ್‌ಡೌನ್ ಕ್ರಮವೇ ಕಾರಣ ಎನ್ನುವುದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ನೀಡುವ ಸಮಜಾಯಿಷಿ. ಪ್ರತಿ ವರ್ಷ ಬೇಸಿಗೆಯಲ್ಲಿ ಏಪ್ರಿಲ್‌ನಿಂದಲೇ ತೀವ್ರ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಅದರಲ್ಲೂ ಕೃಷ್ಣಾ, ಘಟಪ್ರಭ ಮತ್ತು ಮಲಪ್ರಭ ನದಿ ತೀರದ ಗ್ರಾಮಗಳಲ್ಲಿನ ಜನತೆ ಹನಿ ನೀರಿಗೂ ಪರದಾಡುವ ಸ್ಥಿತಿ ಇರುತ್ತಿತ್ತು. ರಾಜ್ಯ ಸರ್ಕಾರ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ ಸರ್ಕಾರವನ್ನು ಪರಿಪರಿಯಾಗಿ ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಈಗ ನಾವು ಮೇ ತಿಂಗಳು ಮಧ್ಯ ಭಾಗದಲ್ಲಿ ಇದ್ದೇವಾದರೂ ಕುಡಿವ ನೀರಿನ ಸಮಸ್ಯೆ ಉಂಟಾಗಿಲ್ಲ. ಹಾಗಂತ ಮುಂಜಾಗೃತಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರಾಗಲಿರುವ...
ಬಾಗಲಕೋಟೆ

ಲಾಕಡೌನ್ ಸಮಯದಲ್ಲಿ ಯುವಕರು ಸಾಹಿತ್ಯದ ಕಡೆ ಒಲವು ಬೆಳೆಸಿಕೊಳ್ಳಿ : ಚರಂತಿಮಠ ಸ್ವಾಮಿ ಸ್ಪಷ್ಟನೆ

ಲಾಕಡೌನನಲ್ಲಿ ಸಾಹಿತ್ಯದ ಒಲವಿಗೆ ಅವಕಾಶ ಹೈಸ್ಕೂಲ್ ಕಾಲೇಜಿನ ದಿನಗಳಲ್ಲಿ ಅಧ್ಯಯನ ಮಾಡಿದ ಅನೇಕ ಇತಿಹಾಸಗಳು ಮರೆತು ಹೋಗಿದ್ದವು: ಶ್ರೀ ಚರಂತಿಮಠ ಸ್ವಾಮೀಜಿಗಳು ಬಾಗಲಕೋಟೆ: ಕರೋನಾ ಲಾಕಡೌನ ಈ ಸಮಯದಲ್ಲಿ ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ ಇವುಗಳ ಅಧ್ಯಯನದಿಂದ ಕಲೆ, ಸಾಹಿತ್ಯ, ಧರ್ಮ, ಧರ್ಮ ಸಂಸ್ಥಾಪಕರು, ಕಿತ್ತೂರು, ವಿಜಯನಗರ ಇತಿಹಾಸದಲ್ಲಿ ಮೈಸೂರು ಮಹಾರಾಜರ ಕೊಡುಗೆ ಇವೆಲ್ಲವು ಗಳನ್ನು ಅಧ್ಯಯನ ಮಾಡುವುದಕ್ಕೆ ಅನುಕೂಲವಾಗಿದೆ.ಇವೆಲ್ಲದರ ಜೊತೆಗೆ ವಾಲ್ಮೀಕಿ ವಿಜಯ ಗ್ರಂಥ, ತಿಪ್ಪೇರುದ್ರಸ್ವಾಮಿಯವರ ವಿಮರ್ಶಾ ಸಾಹಿತ್ಯ, ನನ್ನದಲ್ಲ ನನಗಲ್ಲ, ಚಿಂತನಾ ಬರಹಗಳು, ಕಸ್ತೂರಿ, 365 ಶ್ರೇಷ್ಠ ವಿಜ್ಞಾನಿಗಳ ಜೀವನ ಚರಿತ್ರೆ, ಸೂರ್ಯ ದರ್ಶನ,ಶಿರಿಷರವರ ಕಾದಂಬರಿ, ವಚನ ವಿಷಯ ವಿವರಣಾ ಸಂಪುಟ-15, ಸಂಗಮೇಶ್ವರ ಸವದತ್ತಿಮಠ ಇವರ ಗ್ರಂಥ, ಮಹಮದ್ ಪೈಗಂಬರ್ ಕಾದಂಬರಿ, ಮಹಾವೀರ ಮುಗ್ದತೆಯ ಮುಚ್ಚಲಾಗದು, ಇವೆಲ್ಲವನ್ನು ಲಾಕಡೌನ ಸಮಯದಲ್ಲಿ ಓದಿ ಅಧ್ಯಯನ ಮಾಡಿ ಸಮಯದ ಸದುಪಯೋಗ ಮಾಡಿಕೊಳ್ಳಲಾಯಿತು.--ಶ್ರೀ ಜಗದ್ಗುರು ಪಂಚಮ ಶ್ರೀಶಿವಲಿಂಗೇಶ್ವರ ಮಹಾಸ್ವಾಮಿಗಳು...
ಬಾಗಲಕೋಟೆ

ನಕಲಿ ಗೊಬ್ಬರ ತಯಾರಿಕೆ ಆರೋಪ; ಬಾಗಲಕೋಟೆಯ ಪ್ರೀತಮ್ ಇಂಡಸ್ಟ್ರೀಸ್​ ಸೀಜ್​​

ಬಾಗಲಕೋಟೆ : ನಕಲಿ ಗೊಬ್ಬರ ತಯಾರಿಸುತ್ತಿರೋ ಆರೋಪದ ಮೇರೆಗೆ ಬಾಗಲಕೋಟೆ ನವನಗರದ ಕೈಗಾರಿಕಾ ವಲಯದಲ್ಲಿರುವ ಪ್ರೀತಮ್ ಇಂಡಸ್ಟ್ರೀಸ್​ನ್ನು ಸೀಜ್ ಮಾಡಲಾಗಿದೆ. ಕೃಷಿ, ಕಂದಾಯ, ಪೊಲೀಸ್ ಅಧಿಕಾರಿಗಳ ಜಂಟಿ ದಾಳಿಯಲ್ಲಿ ಉಪ್ಪಿನ ರೀತಿಯಲ್ಲಿ ಕಾಣುವ ಬಿಳಿ ವಸ್ತು ಪತ್ತೆಯಾಗಿದೆ. ದಾಳಿ ವೇಳೆ 400ಕ್ಕೂ ಅಧಿಕ ಬ್ಯಾಗ್ ಸಿಕ್ಕಿದ್ದು, ಗೊಬ್ಬರಕ್ಕೆ ಮಿಕ್ಸ್ ಮಾಡಲು ಇಟ್ಟಿದ್ದರು ಎನ್ನಲಾದ ಕೆಂಪು ಹಾಗೂ ಹಳದಿ ಬಣ್ಣದ ಬ್ಯಾಗ್ ಗಳು ಪತ್ತೆಯಾಗಿವೆ. ಬೇರೆ ಬೇರೆ ಕಂಪನಿಗಳ ಗೊಬ್ಬರದ ಪ್ಯಾಕೆಟ್​ಗಳು ಇಲ್ಲಿ ಸಿಕ್ಕಿವೆ. ನಕಲಿ ಗೊಬ್ಬರ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಲಾಗಿದ್ದು, ಗೊಬ್ಬರದ ಗುಣಮಟ್ಟ ಪರೀಕ್ಷೆಗೆ ಕೃಷಿ ಇಲಾಖೆ ಅಧಿಕಾರಿಗಳು ಲ್ಯಾಬ್​ಗೆ ಕಳುಹಿಸಿ ಕೊಡಲಿದ್ದಾರೆ. ಇನ್ನು ದಾಳಿ ಮಾಡಿದ ಅಧಿಕಾರಿಗಳು ಇಂಡಸ್ಟ್ರೀಸ್​ಗೆ ಹೋದಾಗ ಸಂಬಂಧಪಟ್ಟವರಿಗೆ ಮೊಬೈಲ್ ಕರೆ ಮಾಡಿದ್ರು ಸ್ಪಂದಿಸಿಲ್ಲವಾದ್ದರಿಂದ ಗೇಟ್ ಮತ್ತು ಕೀಲಿ ಮುರಿದು ಕಾರ್ಖಾನೆಯೊಳಗೆ ಪ್ರವೇಶಿಸಿದ್ದಾರೆ....
ಬಾಗಲಕೋಟೆ

ಹೊರಗುತ್ತಿಗೆ ನೌಕರರಿಗೂ ದಿನಸಿ ಪದಾರ್ಥ ನೀಡುವಂತೆ ತಹಸೀಲ್ದಾರರಿಗೆ ಆಗ್ರಹ

ಬಾಗಲಕೋಟೆ: ಹುನಗುಂದ ತಾಲೂಕಿನ ಬಿಸಿಎಂ ಮತ್ತುಎಸ್‌ಸಿ, ಎಸ್‌.ಟಿ ಹಾಸ್ಟೇಲ್‌ಗ‌ಳಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದಿನಸಿ ವಸ್ತುಗಳನ್ನು ವಿತರಿಸುವಂತೆ ಒತ್ತಾಯಿಸಿ ಪರಿಶ್ರಮ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ ತಹಶೀಲ್ದಾರ್‌ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿತು. ಸಂಘದ ಅಧ್ಯಕ್ಷ ಸುರೇಶ ಬಿಸನಾಳ ಮಾತನಾಡಿ, ಹೊರಗುತ್ತಿಗೆಯ ನೌಕರರಿಗೆ ಸಂಬಳವಿಲ್ಲದೇ ದಿನಸಿ ವಸ್ತುಗಳನ್ನು ಖರೀದಿಸಲು ಬಹುದೊಡ್ಡ ಸಮಸ್ಯೆಯಾಗಿದೆ. ವೇತನವಿಲ್ಲದೇ ಕುಟುಂಬ ನಿರ್ವಹಣೆ ಮಾಡಲು ತೊಂದರೆಯಾಗುತ್ತಿದ್ದು, ಸರ್ಕಾರ ಗಮನ ಹರಿಸಿ ವಸತಿ ನಿಲಯದಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುವರಿಗೆ ದಿನಸಿ ವಸ್ತುಗಳನ್ನು ವಿತರಿಸಬೇಕು ಎಂದು ಮನವಿ ಮಾಡಿದರು. ಸಂಘದ ಖಜಾಂಚಿ ಲಕ್ಷ್ಮಣ ಮಾದರ, ಮೊಹಮ್ಮದ್‌ ಮುಲ್ಲಾ, ಶರಣವ್ವ ಮರ್ಜಿ,ಬಸವ್ವ ತಳಗೇರಿ,ಮಹಬೂಬಿ ಮುರೋಳ,ದಾವಲಬಿ ಗಂಗಾವತಿ, ರೇಣುಕಾ ಬಂಡರಗಲ್ಲ, ಕಸ್ತೂರೆವ್ವ ಕ್ಯಾತನಗೌಡ್ರ ರಜಿಯಾಬೇಗಂ ಭಾವಿಕಟ್ಟಿ ಇದ್ದರು....
ಬಾಗಲಕೋಟೆ

ಕೊರೋನ ಮಹಾಮಾರಿಗೆ ಬಾಗಲಕೋಟೆಯಲ್ಲಿ ಮತ್ತೊಂದು ಬಲಿ.

ಬಾಗಲಕೋಟೆ: ಕೊರೋನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದ 25 ವರ್ಷದ ಯುವಕ ಬುಧವಾರ ತಡ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಬೀಳಗಿ ಪಟ್ಟಣದ ನಿವಾಸಿಯಾದ ಯುವಕನನ್ನು ತೀವ್ರ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯ ಕಾರಣ ಬೆಳಿಗ್ಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಯುವಕನ ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿ ಶುಕ್ರವಾರ ಬರಲಿದೆ. ಹೀಗಾಗಿ ಕೋವಿಡ್-19 ನಿಯಮಾವಳಿ ಅನ್ವಯ ಶವಸಂಸ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ....
error: Content is protected !!