ಬಳ್ಳಾರಿ

ಪ್ರಮುಖ ಸುದ್ದಿಗಳುಬಳ್ಳಾರಿ

ಪೊಲೀಸ್ ಪೇದೆಗೆ ಕೊರೊನಾ ಅಟ್ಯಾಕ್, ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್ ! ಆತಂಕದಲ್ಲಿ 35 ಪೊಲೀಸ್ ಕುಟುಂಬಗಳು

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲಿ ಪೊಲೀಸ್ ಪೇದೆಗೆ ಕೋವಿಡ್-19 ಪಾಸಿಟಿವ್ ಹಿನ್ನಲೆಯಲ್ಲಿ ಕೊಟ್ಟೂರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಠಾಣೆಯ 35 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ರಜೆಯಲ್ಲಿ ದಾವಣಗೆರೆಗೆ ತೆರಳಿದ್ದ ಕೊಟ್ಟೂರು ಪೊಲೀಸ್ ಠಾಣೆಯ ಪೇದೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಜೆಯ ಬಳಿಕ ಇವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಕಾರಣದಿಂದಾಗಿ ಠಾಣೆಯ ಪಿಎಸ್ ಐ ಸೇರಿದಂತೆ ಎಲ್ಲಾ ಪೊಲೀಸರನ್ನು ಕ್ವಾರೆಂಟೈನ್ಗೆ ರವಾನಿಸಲಾಗಿದೆ. ಪರಿಣಾಮ ಠಾಣೆಯ 35 ಪೊಲೀಸ್ ಸಿಬ್ಬಂದಿಯ ಕುಟುಂಬವೂ ಆತಂಕದಲ್ಲಿದೆ. ಗಣಿನಾಡು ಬಳ್ಳಾರಿಯಲ್ಲಿ ಭಾನುವಾರ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ. ಈ ಪೈಕಿ ಓರ್ವ ಪೊಲೀಸ್ ಪೇದೆ ಸೇರಿದಂತೆ ಮತ್ತಿಬ್ಬರಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಇವರೆಲ್ಲರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಇದುವರೆಗೂ ಬಳ್ಳಾರಿಯಲ್ಲಿ ಒಟ್ಟು 51 ಪ್ರಕರಣಗಳು ಕಾಣಿಸಿಕೊಂಡಿವೆ....
ಬಳ್ಳಾರಿ

ಹರಪನಹಳ್ಳಿಯ ಅರಸೀಕೆರೆ ಗ್ರಾಮದಲ್ಲಿ ಕೋರೋನಾ ವಾರಿಯರ್ಸ್ ಗೆ ಹೂಮಳೆಯೊಂದಿಗೆ ಮೆರವಣಿಗೆ ಮಾಡಿದ ಗ್ರಾಮಸ್ಥರು

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಗ್ರಾಮದಲ್ಲಿ ಶುಕ್ರವಾರ ಕೊರೋನ ವಾರಿಯರ್ಸ್ಗಳಿಗೆ ಕೋಲ ಶಾಂತೇಶ್ವರ ಮಠದ ಸಿಬ್ಬಂಧಿಗಳಿಂದ ಹಾಗೂ ಗ್ರಾಮದ ಸಮಸ್ಥ ಜನರಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆಯ ಸಿಬ್ಬಂಧಿಗಳು, ಮಾಧ್ಯಮ ಮಿತ್ರು, ಗ್ರಾಮ ಪಂಚಾಯಿತಿ ಸಿಬ್ಬಂಧಿಗಳು, ಬೆಸ್ಕಾಂ ಸಿಬ್ಬಂಧಿಗಳನ್ನು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಿಂದ ಶ್ರೀ ಕೋಲ ಶಾಂತೇಶ್ವರ ಮಠದವರೆಗೆ ಮೆರವಣಿಗೆಯ ಮೂಲಕ ಕರೆತಂದು, ರಸ್ತೆಯ ಎರಡೂ ಬದಿ ಹೂವಿನ ಮಳೆ ಸುರಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಶಾಂತಲಿಂಗ ದೇಶೀಕೇಂದ್ರದ ಸ್ವಾಮೀಜಿ ಮಾತನಾಡಿ ಕೋರೋನಾದಿಂದ ಎಲ್ಲಾ ಕ್ಷೇತ್ರಗಳಿಗೂ ಪೆಟ್ಟು ಬಿದ್ದಿದೆ, ಇಂತಹ ಒಂದು ಭಯಾನಕ ಮಹಾಮಾರಿ ಕರೋನ ದಾಳಿ ಮಾಡಿದರೂ ಲೆಕ್ಕಿಸದೆ, ಗ್ರಾಮದ ಸಮಸ್ಥ ಇಲಾಖಾ ಸಿಬ್ಬಂಧಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು, ನಿಸ್ಕಲ್ಮಶ ಸೇವೆಯನ್ನು ಮಾಡುತ್ತಿದ್ದಾರೆ.ಎಂದು ಶ್ರೀ ಗಳು ತಿಳಿಸಿದರೆ, ಇಂತಹ...
error: Content is protected !!