ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

ಬೆಳ್ಳಂಬೆಳಿಗ್ಗೆ ರಾಯಚೂರಿನಲ್ಲಿ ಇಂಜಿನಿಯರ್ ಮನೆ ಮೇಲೆ ಎಸಿಬಿ ರೇಡ್

ರಾಯಚೂರು : ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದ್ದು, ಬೆಳ್ಳಂಬೆಳಿಗ್ಗೆ ರಾಯಚೂರಿನಲ್ಲಿ ಎಸಿಬಿ ರೇಡ್ ಮಾಡಿದ್ದಾರೆ. ಮಲ್ಲಿಕಾರ್ಜುನ ಗೋಪಶೆಟ್ಟಿ ನಗರಾಭಿವೃದ್ಧಿ ಇಂಜಿನಿಯರ್ ಆಗಿದ್ದು, ಇವರ ರಾಯಚೂರಿನ ಐಡಿಎಸ್ ಎಂಟಿ ಬಡಾವಣೆಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ....
ಪ್ರಮುಖ ಸುದ್ದಿಗಳುಬೆಳಗಾವಿ

ಕೊರೋನಾ ನಡುವೆ ಬೆಳಗಾವಿಯಲ್ಲಿ ಪಂಚಾಯತಿ ರಾಜಕೀಯ: ನಾಮ ನಿರ್ದೇಶನ, ಕಾಂಗ್ರೆಸ್ ಬಿಜೆಪಿ ಕಿತ್ತಾಟ

ಬೆಳಗಾವಿ(ಜೂ.09): ರಾಜ್ಯದಲ್ಲಿ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲಿ ಮುಗಿಯಲಿದೆ. ನಿಯಮದ ಪ್ರಕಾರ ಅಧಿಕಾರವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲು ಬರುತ್ತದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಹೀಗಿರುವಾಗ ನಾಮ ನಿರ್ದೇಶನದ ಲೆಕ್ಕಾಚಾರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಟ್ಟಿ ಸಿದ್ದತೆ ಮಾಡಿಕೊಂಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿತ್ತು. ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ....
ಪ್ರಮುಖ ಸುದ್ದಿಗಳುಬೆಂಗಳೂರು

ನಾಲ್ಕು ಮದುವೆ ಸಾಲ್ದು ಅಂತ ಮ್ಯಾಟ್ರಿಮೋನಿಯಲ್ಲಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದವ ಪೊಲೀಸರ ಬಲೆಗೆ

ಬೆಂಗಳೂರು (ಜೂನ್ 09); ನಾಲ್ಕು ಮದುವೆಯಾಗಿ ಮತ್ತೊಂದು ಹುಡುಗಿಯನ್ನು ಮೈಂಟೇನ್ ಮಾಡ್ತಿದ್ದ ಚಾಲಾಕಿ ಕಳ್ಳನನ್ನು ವಿಚ್ಛೇಧಿತ ಮಹಿಳೆ ನೀಡಿದ ದೂರಿನ ಮೇಲೆ ನಗರದ ಬ್ಯಾಡರ ಹಳ್ಳಿ ಪೊಲೀಸರು ಇಂದು ಬಂಧಿಸಿದ್ದಾರೆ. ಬಂದಿತ ವ್ಯಕ್ತಿಯನ್ನು ಮೈಸೂರು ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ವಿಚ್ಛೇಧಿತ ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್. ಮ್ಯಾಟ್ರಿಮೋನಿಯಲ್ಲಿ ವಿಚ್ಛೇಧಿತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಈತ ಅವರಿಗೆ ಬಾಳು ಕೊಡುವುದಾಗಿ ನಂಬಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಹೀಗೆ ಪರಿಚಯವಾದ ಓರ್ವ ಮಹಿಳೆಯ ಬಳಿ ಸೈಟ್ ತೆಗೆದುಕೊಳ್ಳಬೇಕು ಎಂದು ಅದಕ್ಕೆ 10 ಲಕ್ಷ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಆರೋಪಿ ಮಾತಿಗೆ ಮರುಳಾಗಿ ಹಣ ಇಲ್ಲ ಎಂದು ಆಕೆಯೂ ಒಡವೆಯನ್ನು ಕೊಟ್ಟಿದ್ದಾರೆ. ತನ್ನ ಮಾಂಗಲ್ಯ ಸರ ಸೇರಿ 80 ಗ್ರಾಂ ಒಡವೆ ನೀಡಿದ್ದಾರೆ. ಆದರೆ, ಆರೋಪಿ ಸುರೇಶ್ ಮಾತ್ರ ಒಡವೆ ಕೈಗೆ ಸಿಗುತ್ತಿದ್ದಂತೆ ಫೋನ್ ರಿಸೀವ್ ಮಾಡದೆ ನಾಪತ್ತೆಯಾಗಿದ್ದಾನೆ. ಈ...
ಪ್ರಮುಖ ಸುದ್ದಿಗಳುಬೆಂಗಳೂರು

ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ನಿಜಕ್ಕೂ ಖರ್ಗೆ ಘೋಷಣೆ ಮಾಡಿರುವ ಆಸ್ತಿ ಅಷ್ಟೇನಾ ಎಂಬುದು ಓದುಗರ ಯಕ್ಷಾ ಪ್ರಶ್ನೆ!.

ಬೆಂಗಳೂರು: ರಾಜ್ಯಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು ಕರ್ನಾಟದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇತ್ತ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದರೊಂದಿಗೆ ಆಸ್ತಿ ಘೋಷಣಾ ಪತ್ರವನ್ನೂ ಸಲ್ಲಿಸಿದ್ದು, ಸದ್ಯ ಅವರ ಬಳಿ ಇರುವ ಆಸ್ತಿ ಎಷ್ಟು ಎಂಬ ವಿಚಾರ ಎಲ್ಲರ ಗಮನ ಸೆಳೆದಿದೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕನ ಹೆಸರಲ್ಲಿ ಜಮೀನು ಹಾಗೂ ಕಾರು ಇಲ್ಲ ಎಂಬುವುದು ಭಾರೀ ಅಚ್ಚರಿ ಮೂಡಿಸಿದೆ.... ಹೌದು ಸೋಮವಾರ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರ ಘೋಷಣಾ ಪತ್ರ ಸಲ್ಲಿಸಿದ್ದಾರೆ. ಖರ್ಗೆ ಕುಟುಂಬದ ಒಟ್ಟು ಆಸ್ತಿ ಮೌಲ್ಯ 15 ಕೋಟಿ ರೂ.ಗಳಿಗಿಂತ ಅಧಿಕವಿದೆ. ಇನ್ನು ಖರ್ಗೆಗಿಂತ ಅವರ ಪತ್ನಿ ರಾಧಬಾಯಿ ಹೆಚ್ಚು ಶ್ರೀಮಂತೆ ಎಂದು ಬಹಿರಂಗಗೊಂಡಿದೆ. ಖರ್ಗೆ ಅವರ ಬಳಿ ನಗದು ಸೇರಿ ನಾನಾ...
ಅಂಕಣಪ್ರಮುಖ ಸುದ್ದಿಗಳುಮೈಸೂರು

ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ರೆಲ್ಲೋ ಪ್ಲೇಕ್ಸ್ ಪರಿಚಯಿಸಿದ ಯುವಾ ಬ್ರಿಗೇಡ್

ರೆಲ್ಲೊ ಪ್ಲೇಕ್ಸ್: ಇಂಗ್ಲೆಂಡಿನ ಬ್ಲೂ ಪ್ಲೇಕ್ಸ್ ನಿಂದ ಪ್ರೇರೇಪಿತಗೊಂಡು ಯುವಾಬ್ರಿಗೇಡ್ ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ಮಾಡಿದ ಪ್ರಯತ್ನ. ಕನ್ನಡ ಎಂದರೆ ಕೆಂಪು ಮತ್ತು ಹಳದಿಗಳ ಮಿಶ್ರಣ. ಹೀಗಾಗಿ ಇಲ್ಲಿ ಇದು ರೆಲ್ಲೊ (Red and Yellow) ಪ್ಲೇಕ್ ಆಗಿದೆ. 2000 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕರ್ನಾಟಕ ಇತಿಹಾಸಕ್ಕೆ, ಸಂಸ್ಕೃತಿಗೆ, ರಾಷ್ಟ್ರದ ವೈಭವಕ್ಕೆ ಕೊಟ್ಟ ಕೊಡುಗೆ ಅಪಾರ. ಇಲ್ಲಿನ ಪ್ರತಿ ಕಲ್ಲೂ ಒಂದು ಕಥೆಯನ್ನು ಹೇಳುವಂಥದ್ದೇ. ರೆಲ್ಲೋ ಪ್ಲೇಕ್ಸ್ ಅವುಗಳನ್ನು ಗುರುತಿಸಿ ಕರ್ನಾಟಕದ ಪರಂಪರೆಯನ್ನು ಜೀವಂತವಾಗುಳಿಸುವ ಪ್ರಯತ್ನವನ್ನು ಮಾಡುತ್ತದೆ. ಕರ್ನಾಟಕವೆಂದರೆ ಬರಿಯ ಬೆಂಗಳೂರಲ್ಲ. ಬೀದರ್ ನಿಂದ ಹಿಡಿದು ಮಡಿಕೇರಿಯವರೆಗೆ ಕಾರವಾರದಿಂದ ಹಿಡಿದು ಕೋಲಾರದವರೆಗೆ ಪ್ರತಿಯೊಂದು ಜಿಲ್ಲೆಯೂ ಸಾಂಸ್ಕೃತಿಕ ಹಿನ್ನೆಲೆಯಿಂದ ಶ್ರೀಮಂತವೇ. ಅದನ್ನು ಜಾಗತಿಕ ಸ್ತರದಲ್ಲಿ ಪರಿಚಯಿಸಿಕೊಟ್ಟರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತದೆ, ಉದ್ಯೋಗಾವಕಾಶವೂ ವೃದ್ಧಿಸುತ್ತದೆ. ಪ್ರತಿ ಜಿಲ್ಲೆಯ ಅತಿ ವಿಶಿಷ್ಟವಾದ ಸ್ಥಳಗಳನ್ನು...
ದಾವಣಗರೆಪ್ರಮುಖ ಸುದ್ದಿಗಳು

ಮೆಕ್ಕೆಜೋಳದ ಖರೀದಿ ಕೇಂದ್ರವಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಅನ್ನದಾತರು

-ರಾಮ ಪ್ರಸಾದ್ ಉಪ ಸಂಪಾದಕರು ಕದಂಬ ಕ್ರಾಂತಿ ಕೋರೊನಾದ ನಡುವೆ ಕಷ್ಟಪಟ್ಟು ರೈತರು ಭತ್ತ ಹಾಗೂ ಮೆಕ್ಕೆಜೋಳವನ್ನು ಬೆಳೆದಿದ್ದಾರೆ. ಕೋರೊನಾ ಲಾಕ್‍ಡೌನ್ ಮುಕ್ತಾಯದ ಹೊಸ್ತಿನಲ್ಲಿ ಬೆಳೆದ ಬೆಳೆಗಳನ್ನು ಮಾರಿ ಕೊಂಚ ನಿಟ್ಟುಸಿರುವ ಬಿಡುವ ಹೊಸ್ತಿನಲ್ಲಿದ್ದಾರೆ. ಆದರೆ ರೈತರಿಗೆ ಖರೀದಿ ಕೇಂದ್ರದ ಸಮಸ್ಯೆಯಾಗಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಜಿಲ್ಲಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶಗಳಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದು ಮಾರಲಾಗದೆ ಕಂಗೆಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ ಕೃಷಿ ಮತ್ತು ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಖರೀದಿ ಕೇಂದ್ರವನ್ನು ತೆರೆದರೆ ರೈತರಿಗೆ ಅನುಕೂಲವಾಗಲಿದೆ. ಕೋರೊನಾ ನಡುವೆ ಬೆಳೆಯನ್ನು ಮಾರಿ ಸ್ವಲ್ಪ ನಿಟ್ಟುಸಿರುವ ಬಿಡಬಹುದು ಎನ್ನುವುದು ರೈತರ ಅಭಿಪ್ರಾಯವಾಗಿದೆ. ಖರೀದಿ ಕೇಂದ್ರ ತೆರೆಯಿರಿ ರೈತರ ಸಮಸ್ಯೆ ಬಗೆಹರಿಸಿ:ಜಿಲ್ಲಾದ್ಯಾಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಭತ್ತ ಮತ್ತು ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಈಗಾಲೇ ಅನೇಕ ಕಡೆ ಕಟಾವು ಸಹಾ ಮಾಡಲಾಗಿದ್ದು ಇನ್ನು ಕೆಲವು...
ದಾವಣಗರೆಪ್ರಮುಖ ಸುದ್ದಿಗಳು

ದಾವಣಗೆರೆನಲ್ಲಿ ಆಂಬ್ಯುಲೆನ್ಸ್ ಚಾಲಕ ಹಸೇನ್ ರವರಿಗೆ ಸನ್ಮಾನ

ದಾವಣಗೆರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ದಕ್ಷಿಣ ವಲಯದಲ್ಲಿ ಉಚಿತವಾಗಿ 70 ದಿನದಲ್ಲಿ 220 ಜನ ಗರ್ಭಿಣಿ ಮಹಿಳೆಯರಿಗೆ ಮತ್ತು ಹಾರ್ಟ್ ರೋಗಿಗಳಿಗೆ ಆಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಹಸೇನ್ ರವರಿಗೆ ದಾವಣಗೆರೆ ಹಾಕಿ ಗ್ರೂಪ್ ವತಿಯಿಂದ ಸನ್ಮಾನಿಸಿದ್ದಾರೆ. ಜಿಲ್ಲೆಯಲ್ಲಿ ಈ ರೀತಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಹಸೇನ್ ಅವರಿಗೆ ನಮ್ಮ ಪತ್ರಿಕೆಯ ಕಡೆಯಿಂದ ಅಭಿನಂದನೆಗಳ ಸಲ್ಲಿಸುತ್ತೇವೆ....
ಪ್ರಮುಖ ಸುದ್ದಿಗಳು

ಈ ವರ್ಷ ಶಾಲಾ ಪಠ್ಯಪುಸ್ತಕದಲ್ಲಿ ಕೊರೋನಾ ಪಾಠ

ಕಲಬುರಗಿ:ಕೊರೋನಾ ವೈರಸ್ ಪ್ರಸಕ್ತ ವರ್ಷ ಭೂಮಂಡಲದ ಮೇಲೆ ಮಾಡಿರುವ ಪರಿಣಾಮ ಅಷ್ಟಿಷ್ಟಲ್ಲ. ಅದರ ಬಗ್ಗೆ ಅರಿವು ಮೂಡಿಸಲು ಇದೀಗ ರಾಜ್ಯ ಸರ್ಕಾರ ಕೋವಿಡ್-19 ಬಗ್ಗೆ ಶಾಲಾ ಮಕ್ಕಳಿಗೆ ಒಂದು ಪಾಠವನ್ನೇ ಇಡುತ್ತಿದೆಯಂತೆ. ಈ ವಿಷಯವನ್ನು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಆ ಪಾಠದಲ್ಲಿ ಇಂತಹ ರೋಗಗಳ ಬಗ್ಗೆ ಇತಿಹಾಸ, ಅವುಗಳ ಪರಿಣಾಮ ಸಮಾಜದ ಮೇಲೆ, ಮಾಸ್ಕ್ ಧರಿಸುವ ಅಗತ್ಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಶುಚಿಯಾಗಿರುವುದರ ಬಗ್ಗೆ ವಿವರಣೆಯಿರುತ್ತದೆ. ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಮುದ್ರಣವಾಗಿದೆ, ಹೀಗಾಗಿ ಕೋವಿಡ್-19 ಬಗ್ಗೆ ಪ್ರತ್ಯೇಕ ಕೈಪಿಡಿಯನ್ನು ತಯಾರಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗುವುದು. ಈ ವಿಷಯದ ಮೇಲೆ ಮಕ್ಕಳಿಗೆ ಪರೀಕ್ಷೆ ಕೂಡ ಇರುತ್ತದೆ ಎಂದರು. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಇಂದಿನಿಂದ ಪೋಷಕರು,...
ಪ್ರಮುಖ ಸುದ್ದಿಗಳುಬೆಂಗಳೂರು

ರಾಜ್ಯಸಭೆ ಚುನಾವಣೆ: ಬಿ ಫಾರಂ ಪಡೆದುಕೊಂಡ ಖರ್ಗೆ, ದೇವೆಗೌಡ, ಮಂಗಳವಾರ ನಾಮಪತ್ರ ಸಲ್ಲಿಕೆ ಕೊನೆಯ ದಿನ ; ಬಿಜೆಪಿ ಅಭ್ಯರ್ಥಿ ಇನ್ನೂ ತೆರೆಯ ಹಿಂದೆ…..???

ಬೆಂಗಳೂರು: ಜೂನ್ 16 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ನಡೆಸಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಸಮ್ಮತಿ ಸೂಚಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಎಚ್ಡಿ ಕುಮಾರಸ್ವಾಮಿ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. "ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವರು. ಎಲ್ಲರ ಒಮ್ಮತದ ಅಭಿಪ್ರಾಯಕ್ಕೆ ಸಮ್ಮತಿಸಿದ ದೇವೇಗೌಡರಿಗೆ ಧನ್ಯವಾದಗಳು" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ್ದ ಜನನಾಯಕ ದೇವೇಗೌಡರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಎಲ್ಲರ...
ಪ್ರಮುಖ ಸುದ್ದಿಗಳುಬಾಗಲಕೋಟೆ

ಸಾಮಾಜಿಕ ಅಂತರ ಮರೆತ ಬಾಗಲಕೋಟೆ ಜಿಲ್ಲೆ ಸಿಇಒ; ನರೇಗಾ ಕೆಲಸಗಾರರ ಜಾತ್ರೆ

ಬಾಗಲಕೋಟೆ: ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು. ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಸನ್ನಿವೇಶದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವ ನೂರಾರು ಜನ ಕೂಲಿಕಾರರು ಒಂದೆ ಕಡೆಗೆ ಕೆಲಸ ಮಾಡುತ್ತಿದ್ದು, ಇವರಲ್ಲಿ ಬಹುತೇಕರು ಮಾಸ್ಕ್ ಧರಿಸಿಯೇ ಇಲ್ಲ. ಸಾಮಾಜಿಕ ಅಂತರ ಕಾಪಾಡುವುದಂತೂ ದೂರಿನ ಮಾತು ಎನ್ನುವುದನ್ನು ಪೊಟೋ ಸಾರಿ ಸಾರಿ ಹೇಳುತ್ತಿದೆ. ಬರೋಬ್ಬರಿ ೪೬೦ ಜನ ಕೂಲಿಕಾರರ ಜತೆ ನಿಂತು ಪೋಟೊ ಕ್ಲಿಕ್ಕಿಸಿಕೊಂಡವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ. ಭಾನುವಾರ ಕೆನಾಲ ಬಳಿ ಕೆಲಸ ಹೇಗೆ ನಡೆಯುತ್ತಿದೆ ಎನ್ನುವ ಪರಿಶೀಲನೆಗೆ ಹೋದಾಗ ಈ ಸನ್ನಿವೇಶ ನಿರ್ಮಾಣವಾಗಿತ್ತು. ಕೊರೋನಾ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ಸಿಇಒ...
1 2 3 4 5 12
Page 3 of 12
error: Content is protected !!