ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳುಮಂಡ್ಯ

ಕಾಲು ಜಾರಿ ತಾಯಿ-ಇಬ್ಬರು ಮಕ್ಕಳು ಕೆರೆಯಲ್ಲಿ ನೀರುಪಾಲು

ಮಳವಳ್ಳಿ, ಜೂ.14- ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಆಯತಪ್ಪಿ ಕೆರೆಗೆ ಬಿದ್ದು ನೀರು ಪಾಲಾಗಿರುವ ದುರ್ಘಟನೆ ಇಂದು ಬೆಳಗ್ಗೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38), ಮಕ್ಕಳಾದ ಸವಿತಾ (19) ಮತ್ತು ಸೌಮ್ಯ (14) ಮೃತಪಟ್ಟವರು. ಇಂದು ಬೆಳಗ್ಗೆ ಬೀರನಹಳ್ಳಿ ಗ್ರಾಮದ ತಾಯಿ ಹಾಗೂ ಇಬ್ಬರು ಮಕ್ಕಳು ಬಟ್ಟೆ ಒಗೆಯುವ ಸಲುವಾಗಿ ಕೆರೆಗೆ ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಒಬ್ಬ ಮಗಳು ನೀರಿಗೆ ಬಿದ್ದು ಕೂಗಿಕೊಳ್ಳುತ್ತಿರುವಾಗ ಸಹಾಯಕ್ಕೆ ಹೋದ ತಾಯಿ ಹಾಗೂ ಮತ್ತೊಬ್ಬ ಮಗಳು ಸಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಈ ಮಾರ್ಗದಲ್ಲಿ ಹೋಗುತ್ತಿದ್ದ ಗ್ರಾಮಸ್ಥರು ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದುದನ್ನು ಗಮನಿಸಿ ಸಮೀಪ ಹೋಗಿ ನೋಡಿದಾಗ ದಡದಲ್ಲಿ ಬಟ್ಟೆಗಳು ಇರುವುದು ಕಂಡುಬಂದಿದೆ. ತಕ್ಷಣ ಗ್ರಾಮಸ್ಥರು ಕೆರೆಯಲ್ಲಿ ಮುಳುಗುತ್ತಿದ್ದವರನ್ನು ಬದುಕಿಸಲು ನೀರಿಗೆ...
ಪ್ರಮುಖ ಸುದ್ದಿಗಳು

ಭಾರತದ ತೀವ್ರ ವಿರೋಧದ ನಡುವೆಯೂ ನೂತನ ನಕ್ಷೆಗೆ ಅಸ್ತು ಎಂದ ನೇಪಾಳ ಸಂಸತ್ತು ; ಕೃತಕ ನಕ್ಷೆ ಹಿಗ್ಗುವಿಕೆ ಮಾಡಿದರೆ ಮುಂದಿನ ಪರಿಣಾಮಕ್ಕೆ ನೇಪಾಳವೇ ಹೊಣೆ ಎಂದು ಭಾರತದ ಎಚ್ಚರಿಕೆ ಸಂದೇಶ

ನವದೆಹಲಿ: ನೇಪಾಳದ ಸಂಸತ್ತು ತನ್ನ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತೆರವುಗೊಳಿಸಿದೆ, ಆ ಮೂಲಕ ಇದು ಕಾಠ್ಮಂಡು ಮತ್ತು ನವದೆಹಲಿ ನಡುವಿನ ಸಂಬಂಧಗಳಲ್ಲಿ ಶಾಶ್ವತ ಬಿಕ್ಕಟ್ಟನ್ನು ಸೃಷ್ಟಿಸಿದೆ. ನೇಪಾಳದಲ್ಲಿ ಕೊರೊನಾ ನಿಭಾಯಿಸುವಲ್ಲಿ ವಿಫಲವಾಗಿರುವ ಪ್ರಧಾನಿ ಕೆ.ಪಿ.ಶರ್ಮಾ ಒಲಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲೇ ಈಗ ಸಂಸತ್ತು ನೂತನ ನಕ್ಷೆಯನ್ನು ಪ್ರತಿಬಿಂಬಿಸುವ ಮಸೂದೆಯನ್ನು ತೆರವುಗೊಳಿಸಿದೆ. ಸಂಸತ್ತಿನ ವಿಶೇಷ ಸಭೆಯಲ್ಲಿ ನಕ್ಷೆಯ ಅಂಗೀಕಾರಕ್ಕೆ ನವದೆಹಲಿಯಿಂದ ಇನ್ನೂ ಔಪಚಾರಿಕ ಪ್ರತಿಕ್ರಿಯೆ ಬಂದಿಲ್ಲ. ಆದರೆ ಭಾರತದ ಅಧಿಕಾರಿಗಳು ನೇಪಾಳದ ಗಡಿ ವಿವಾದವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎನ್ನಲಾಗಿದೆ. ಮತದಾನದ ಮೊದಲು ನಡೆದ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ, ನೇಪಾಳ ಪ್ರಧಾನಿ ಓಲಿ ಭಾರತದಿಂದ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾ ಅವರ ನಿಯಂತ್ರಣವನ್ನು ಪುನಃ ಪಡೆದುಕೊಳ್ಳಲು ಒಂದು ಹೆಜ್ಜೆ ಮುಂದೆ ಇಡುವಂತೆ ಸಂಸದರಲ್ಲಿ ಮನವಿ ಮಾಡಿದರು....
ದಾವಣಗರೆಪ್ರಮುಖ ಸುದ್ದಿಗಳು

ಬಸ್ ಸಂಚಾರವಿಲ್ಲದ ಪರದಾಡುತ್ತಿರುವ ಶಿಕ್ಷಕರು ; ಸಹಾಯಹಸ್ತ ಚಾಚುವರೇ ಜಿಲ್ಲಾಧಿಕಾರಿಗಳು

ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಶಾಲೆಗಳನ್ನು ಕೂಡ ಪ್ರಾರಂಭಿಸುವ ಚಿಂತನೆ ನಡೆಸಿದೆ. ಶಾಲೆಯ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಲು ಆದೇಶ ನೀಡಿರುವ ಬೆನ್ನಲ್ಲೇ ಗ್ರಾಮೀಣ ಭಾಗದ ಶಿಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಗರ ಪ್ರದೇಶಗಳತ್ತ ಬಸ್ ಸಂಚರಿಸಿದರು ಪ್ರಯಾಣಿಕರಿಲ್ಲದೆ ಬಸ್ಸುಗಳು ನಿಂತಲ್ಲೇ ನಿಂತಿದ್ದರೆ, ಗ್ರಾಮೀಣ ಭಾಗದತ್ತ ಪ್ರಯಾಣಿಸಲು ಸಾರಿಗೆ ಸೌಕರ್ಯವಿಲ್ಲದೇ ಪ್ರತಿದಿನ ಪರದಾಡುವ ಸ್ಥಿತಿ ಎದುರಾಗಿರುವುದು ಇಂದು ನಿನ್ನೆಯದಲ್ಲ. ಆದರೆ ಲಾಕ್‌ಡೌನ್ ಆದ ಬಳಿಕ ಈ ಸಮಸ್ಯೆ ಉಲ್ಭಣಗೊಂಡಿದೆ ಎನ್ನುತ್ತಾರೆ ಗ್ರಾಮೀಣ ಭಾಗದ ಶಿಕ್ಷಕರು. ದಾವಣಗೆರೆಯಿಂದ ನೂರಾರು ಶಿಕ್ಷಕರು ಗ್ರಾಮಾಂತರ ಪ್ರದೇಶಗಳಿಗೆ ಪ್ರತಿನಿತ್ಯ ಸಂಚಾರಿಸುತ್ತಾರೆ. ಜಿಲ್ಲಾ ಕೇಂದ್ರದಿAದ ನಲ್ವತ್ತು ಕಿ.ಮೀ ದೂರದಲ್ಲಿ ಶಾಲೆಗಳು ಇದ್ದು ಅಲ್ಲಿಗೆ ಹೋಗಿ ಬರಲು ಯಾವುದೇ ವಾಹನದ ಸೌಕರ್ಯವಿಲ್ಲ. ಅದರಲ್ಲೂ ಮಹಿಳೆ ಶಿಕ್ಷಕಿಯರಂತೂ ಪ್ರತಿದಿನವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಮರಿಕುಂಟೆ, ಕಮಲಪುರ, ಪಲ್ಲಾಘಟ್ಟೆ, ದಿದ್ದಿಗೆ, ಕೆಂಚಮನಾಪ್ತಿಹಳ್ಳಿ,...
ದಾವಣಗರೆಪ್ರಮುಖ ಸುದ್ದಿಗಳು

ರೈತರನ್ನು ನಿರ್ಲಕ್ಷಿಸಿದ ಸರ್ಕಾರ : ಲಕ್ಷಗಟ್ಟಲೇ ಬೆಳೆ ನಷ್ಟ

ಲಾಕ್‌ಡೌನ್ ಆದ ಪರಿಣಾಮ ಮಾರುಕಟ್ಟೆಯಿಲ್ಲದೆ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರವೇನೋ ಬೆಳೆಹಾನಿ ಪರಿಹರ ನೀಡಿದೆ. ಫಸಲ್ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ರೈತರ ಖಾತೆಗೆ ಜಮಾವಣೆ ಆಗಿದೆ. ಆದರೆ ಅದರಲ್ಲಿ ಒಂದು ಬಿಡಿಗಾಸು ಕೂಡ ರೈತರ ಕೈಗೆ ತಲುಪಿಲ್ಲ. ಮೆಕ್ಕೆಜೋಳ, ಕಬ್ಬು ಮತ್ತಿತ್ತರ ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸದಾಗಿ ಸಿಹಿಕುಂಬಳ ಬೆಳೆಯುವ ಪ್ರಯತ್ನ ಮಾಡಲು ಹೋಗಿ ನಗರದ ಬಿ.ಕಲಪನಹಳ್ಳಿ ಗ್ರಾಮದ ಬಸವನಗೌಡ ಎಂಬ ರೈತ ನಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪಾವಧಿ ಬೆಳೆ, ಕೆಲಸ ಕಡಿಮೆ, ಹೆಚ್ಚು ಗೊಬ್ಬರ, ಕೀಟನಾಶಕ ಅಗತ್ಯ ಇಲ್ಲ, ಲಾಭ ಹೆಚ್ಚು ಎನ್ನುವ ಕೆಲವರ ಮಾತನ್ನು ನಂಬಿ ಹೊಲದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಮನುಷ್ಯನ ದೇಹಕ್ಕೆ ಅಗತ್ಯವಾದ ಪೊಟಾಷಿಯಂ ಅಂಶ ತುಂಬಿರುವ, ಹೆಚ್ಚಾಗಿ ಸಾಂಬಾರ್ ಮಾಡಲು ಬಳಸುವ ಕುಂಬಳಕ್ಕೆ ಸಾಮಾನ್ಯವಾಗಿ ಬೇಡಿಕೆ...
ಪ್ರಮುಖ ಸುದ್ದಿಗಳುಮೈಸೂರು

ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸಾವಿರಾರು ಜನರಿಗೆ ಆಹಾರ ಪದಾರ್ಥಗಳ ವಿತರಣೆ

ಕೊರೊನ ಲೊಕ್ಡೌನ್ ಸಂದರ್ಭದಲ್ಲಿ ಜನಸಾಮಾನ್ಯರು ಉದ್ಯೋಗ ಕಳೆದುಕೊಂಡ ಸಂಕಷ್ಟದ ಸಮಯದಲ್ಲಿ ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಸುಮಾರು 150 ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ಸಂಸ್ಥೆಯ ಸದಸ್ಯರುಗಳು ಸಹಕರಿಸಿದ್ದರು. ಈ ಸಂದರ್ಭದಲ್ಲಿ ಆರ್. ಬಿ. ಐ ತೆಲುಗು ಫ್ರೆಂಡ್ಸ್ ರವರು ನಮ್ಮ ಸಂಸ್ಥೆಯನ್ನು ದೂರವಾಣಿ ಮುಖಾಂತರ ಸಂದರ್ಶಿಸಿ ನಾವುಗಳು ಸಹಾಯ ಮಾಡಬೇಕೆಂದು ಎಲ್ಲಾರು ಸೇರಿ ತೀರ್ಮಾನಿಸಿದ್ದು ಆಹಾರ ಪದಾರ್ಥಗಳನ್ನು ಕೊಡಿಸುವುದಾಗಿ ಹೇಳಿದರು. ತದನಂತರದಲ್ಲಿ ಸಾವಿರಾರು ಜನರಿಗೆ ಆಹಾರ ಪದಾರ್ಥಗಳನ್ನು ಬಡಜನರಿಗೆ ವಿತರಿಸುವಲ್ಲಿ ಯಶಸ್ವಿಯಾದರು ಮತ್ತು ಆರೇಂಜ್ ಸೇವಾ ಸಂಸ್ಥೆಯ ವತಿಯಿಂದ ಕೊರೊನ ಲೊಕ್ಡೌನ್ ಸಂದರ್ಭದಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಪ್ರತಿದಿನ ಬೆಳಿಗ್ಗೆ ರಾತ್ರಿ 150 ರಿಂದ 200 ಜನರಿಗೆ ವಿತರಿಸುವುದಕ್ಕೆ ಸಂಸ್ಥೆಯ ಮಹಾಪೋಷಕರು ದೀಪಕ್, ಸಂಸ್ಥೆಯ ಅಧ್ಯಕ್ಷರು ಹೆಚ್. ಸಿ. ಆನಂದ,ಉಪಾಧ್ಯಕ್ಷರು ಸುನೀಲ್ ಪಿ. ಆರ್. ಕಾರ್ಯದರ್ಶಿ ಪಿ. ಸುನೀಲ್, ಸಂಸ್ಥೆಯ ಆಯೋಜಕರಾದ ಚಾಂದಿವಾಲ್, ಜಾನ್, ವಿಕ್ರಮ್...
ಪ್ರಮುಖ ಸುದ್ದಿಗಳುಮೈಸೂರು

ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು

ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿದ್ಯಾರಣ್ಯಪುರಂ ಕೇಂದ್ರ ರೇಷ್ಮೆ ಮಂಡಳಿಯ ಕಛೇರಿಯ ಆವರಣದಲ್ಲಿ ಇಲಾಖೆಯಲ್ಲಿ ಎಲ್ಲರಿಗೂ ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಸುಮಾರು 224 ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು. ತೆಂಗಿನ ಗಿಡ-7, ಜಾಮುನ್ ಗಿಡ -32, ಸೀಬೆ -6, ಹುಣಸೆ-20, ತೇಗ- 50, ಬೇವು -20, ಸಿಲ್ವರ್ ಓಕ್-20, ಕಾಡು ಬಾದಾಮಿ-20, ದಾಳಿಂಬೆ-10, ಕರಿಬೇವು-5, ನುಗ್ಗೆಕಾಯಿ-20, ನೆಲ್ಲಿಕಾಯಿ-04, ಸಪೋಟ-10 ಹೀಗೆ ಹಲವು ಬಗೆಯ ಹಣ್ಣಿನ ಹಾಗೂ ವಿವಿಧ ಬಗೆಯ ಜಾತಿಯ ಗಿಡಗಳನ್ನು ನೆಟ್ಟು ಸಂಸ್ಥೆಯ ನೌಕರರು ಅದನ್ನು ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು. ಈ ಸಂದರ್ಭದಲ್ಲಿ ಮೈಸೂರಿನ ನಗರಪಾಲಿಕೆ ಸದಸ್ಯರಾದ ಮ.ವಿ ರಾಮಪ್ರಸಾದ್, ಮಾನ್ಯ ನಿರ್ದೇಶಕರಾದ ಡಾ.ಪಂಕಜ್ ತಿವಾರಿ, ಕೇಂದ್ರ ರೇಷ್ಮೆ ಮಂಡಳಿಯ ನಿವೃತ್ತ ತಾಂತ್ರಿಕ ಅಧಿಕಾರಿ ಕೆ.ಆರ್.ಗಣೇಶ್,...
ಪ್ರಮುಖ ಸುದ್ದಿಗಳು

ಲಾಕ್ಡೌನ್ ಪರಿಣಾಮ: ಅಗ್ಗವಾಗಲಿವೆ ಸ್ಟಾರ್ ಹೋಟೆಲ್ ರೂಮ್ ಬಾಡಿಗೆ, ಊಟ-ತಿಂಡಿ ದರ

ಸಂಕಷ್ಟದ ಸಮಯದಲ್ಲಿ ಸ್ಟಾರ್ ಹೋಟೆಲ್ಗಳಿಗೆ ತಿಂಡಿ, ಊಟ ಮಾಡಲು ಹಾಗೂ ವಾಸ್ತವ್ಯಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ತಮ್ಮ ಹೋಟೆಲ್ಗಳ ಕಡೆಗೆ ಸೆಳೆಯಲು ದರ ಇಳಿಕೆ ಮಾಡಲು ಹೋಟೆಲ್ ಮಾಲೀಕರ ನಡುವೆ ಸಮಾಲೋಚನೆ ನಡೆದಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಸ್ಟಾರ್ ಹೋಟೆಲ್ಗಳಲ್ಲಿ ಒಂದು ಊಟಕ್ಕೆ 1,500 ರೂ.ನಿಂದ 5000 ರೂ. ವರೆಗೂ ದರವಿದೆ. ಇನ್ನು ರೂಮ್ ಬಾಡಿಗೆ ಪಡೆಯಬೇಕೆಂದರೆ ದಿನಕ್ಕೆ ಕನಿಷ್ಠ 3,500 ರೂ.ನಿಂದ 10 ಸಾವಿರ ರೂ.ವರೆಗೆ ವೆಚ್ಚ ಮಾಡಬೇಕಿದೆ. ಈಗ ಎಲ್ಲೆಡೆ ಕೊರೊನಾ ಹೆಮ್ಮಾರಿ ಆವರಿಸಿಕೊಂಡಿದ್ದು, ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಮದುವೆಗಳನ್ನು ಸರಳವಾಗಿ ಮನೆಗಳಲ್ಲೇ ನಡೆಸಲಾಗುತ್ತಿದೆ. ಎರಡೂವರೆ ತಿಂಗಳಿನಿಂದ ಬಾಡಿಗೆ ಇಲ್ಲದೆ ಸಿಬ್ಬಂದಿ ಸಂಬಳ, ವಿದ್ಯುತ್ ಬಿಲ್, ಸ್ವಚ್ಛತೆ, ಸಿಸಿ ಕ್ಯಾಮೆರಾಗಳ ಬಳಕೆ, ಎಸಿ ಸೇರಿದಂತೆ ನಿರ್ವಹಣೆಗೆ ಸಾಕಷ್ಟು ಖರ್ಚು ಬರುತ್ತದೆ. ಈಗಿನ...
ಪ್ರಮುಖ ಸುದ್ದಿಗಳು

ಹಿಂಧುಗಳ ಅಯೋಧ್ಯೆ ರಾಮಮಂದಿರಕ್ಕಿಂದು ಪಟ್ಟಾಭಿಷೇಕ

ಅಯೋಧ್ಯೆ: ಮರ್ಯಾದಾ ಪುರುಷೋತ್ತಮ, ಏಕಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದ್ದು, ಇದಕ್ಕೂ ಮುನ್ನ ಕುಬೇರ ತಿಲಾದಲ್ಲಿ ರುದ್ರಾಭಿಷೇಕ ನಡೆಯಲಿದೆ. ಲಂಕೆಯ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಶಿವನಿಗೆ ಶ್ರೀರಾಮಚಂದ್ರ ರುದ್ರಾಭಿಷೇಕ ಮಾಡಿದ್ದ. ಅದರಂತೆ ರಾಮ ಜನ್ಮಭೂಮಿಯಲ್ಲಿರುವ ಕುಬೇರ ತಿಲಾದಲ್ಲಿ ರುದ್ರಾಭಿಷೇಕ ನಡೆಯಲಿದೆ. ರುದ್ರಾಭಿಷೇಕ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾಂತ್ ಕಮಲ್ ನಯನ್ ದಾಸ್ ಜಿ ಮಹಾರಾಜ್ ಅವರು, ಕುಬೇರ್ ತಿಲಾದಲ್ಲಿ ರುದ್ರಾಭಿಷೇಖ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿರಲಿದ್ದಾರೆಂದು ಹೇಳಿದ್ದಾರೆ. ಪ್ರತೀನಿತ್ಯ ದೇಗುಲದಲ್ಲಿ ನಡೆಯುವ ಪ್ರಾರ್ಥಿಗಳು ಮುಂದುವರೆಯಲಿವೆ. ಕೊರೋನಾ ಸಾಂಕ್ರಾಮಿಕ ರೋಗವನ್ನು ದೂರಾಗಿಸುವ ಸಲುವಾಗಿ ಶಿವನನ್ನು ಪ್ರಾರ್ಥಿಸಲಾಗುತ್ತದೆ. ಅಯೋಧ್ಯೆ...
ಪ್ರಮುಖ ಸುದ್ದಿಗಳು

ಟಿ20 ವಿಶ್ವಕಪ್ ಹಣೆಬರಹ ಇಂದು ನಿರ್ಧರಿಸಲಿರುವ ಐಸಿಸಿ

ದುಬೈ: ಕೊರೋನಾ ವೈರಸ್ ನಿಂದಾಗಿ ಅನಿಶ್ಚತತೆಯಲ್ಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟ ನಡೆಸಬೇಕೋ ಅಥವಾ ಮುಂದೂಡಬೇಕೋ ಎಂಬ ವಿಚಾರದ ಬಗ್ಗೆ ಐಸಿಸಿ ಇಂದು ತೀರ್ಮಾನ ತೆಗೆದುಕೊಳ್ಳಲಿದೆ. ಐಸಿಸಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅಕ್ಟೋಬರ್ 18 ರಿಂದ ನವಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಕೂಟ ನಡೆಯುವುದು ಎಂದು ಈ ಮೊದಲು ತೀರ್ಮಾನಿಸಲಾಗಿತ್ತು. ಆದರೆ ಕೊರೋನಾದಿಂದಾಗಿ ಆಟಗಾರರು ಪ್ರವಾಸ ಮಾಡುವುದು, ಇಂತಹ ದೊಡ್ಡ ಕೂಟ ಆಯೋಜಿಸುವುದರಿಂದ ರೋಗ ಹರಡುವ ಭೀತಿ ಹೆಚ್ಚಿರುವ ಹಿನ್ನಲೆಯಲ್ಲಿ ವಿಶ್ವಕಪ್ ನಡೆಸಬೇಕೋ ಬೇಡವೋ ಎಂಬುದು ಚರ್ಚೆಗೆ ಗ್ರಾಸವಾಗಿದೆ....
ಪ್ರಮುಖ ಸುದ್ದಿಗಳು

ಕೊರೋನಾ ಅಟ್ಟಹಾಸಕ್ಕೆ ದೇಶದಲ್ಲಿಯೇ ಮೊದಲ ಶಾಸಕ ಬಲಿ ; ತಮಿಳುನಾಡಿನ ಡಿಎಂಕೆ ಪಕ್ಷಕ್ಕೆ ಶಾಕ್

ಚೆನ್ನೈ, ಜೂ.10- ಡೆಡ್ಲಿ ಕೊರೊನಾ ಸೋಂಕಿಗೆ ಡಿಎಂಕೆ ಮುಖಂಡ ಮತ್ತು ಶಾಸಕ ಜೆ. ಅನ್ಬಳಗನ್(62) ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅನ್ಬಳಗನ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟರು. ಮಧುಮೇಹ, ಅಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡ ಸಮಸ್ಯೆಗಳಿಂದ ಬಳಸುತ್ತಿದ್ದ ಅವರಿಗೆ ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ವೈರಸ್ ಇರುವುದು ದೃಢಪಟ್ಟಿತ್ತು. ಕೊರೊನಾ ಸೋಂಕು ತಗುಲಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಎಂಕೆ ಶಾಸಕರನ್ನು ವೆಂಟಿಲೇಟರ್ (ಪ್ರಾಣವಾಯು) ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.ಮೊನ್ನೆಯಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನಿನ್ನೆ ಮಧ್ಯಾಹ್ನ ಅವರ ಆಮ್ಲಜನಕದ ಪ್ರಮಾಣದ ಅರ್ಧಕ್ಕೆ ಇಳಿದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ನಿನ್ನೆ ಸಂಜೆಯಿಂದ ಅವರ ಆರೋಗ್ಯ ವಿಷಮ ಹಂತ ತಲುಪಿತ್ತು. ಅವರ ಉಸಿರಾಟ ಸುಧಾರಣೆಗೆ ವೈದ್ಯರ ತಂಡದ ಪ್ರಯತ್ನ ಸಫಲವಾಗಲಿಲ್ಲ. ಇವರಿಗೂ 61...
1 2 3 4 12
Page 2 of 12
error: Content is protected !!