ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

ಕನ್ನಡದ ಮತ್ತೊಬ್ಬ ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ನಿಧನರಾಗಿದ್ದಾರೆ. ಊಟ ಮಾಡಿ ಕುಳಿತಿದ್ದ ಮಧು ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸೂರ್ಯವಂಶ , ಓಂ , ಶ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ. ಸೂರ್ಯವಂಶದ ಮಹಾಪ್ರಭು ನೀವೇನು ಇಲ್ಲಿ ಎಂಬ ಸಂಭಾಷಣೆ ಇಂದಿಗೂ ಫೇಮಸ್. ಪಾಪಿಗಳ ಲೋಕದಲ್ಲಿ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಸಿನಿಮಾದಲ್ಲಿಯೂ ಪಾತ್ರ ನಿರ್ವಹಿಸಿದ್ದರು. ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದು ಮೈಕಲ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಒದ್ದಾಡಿದ್ದರು. ಗುರುವಾರ ಬೆಳಿಗ್ಗೆ ಕುಟುಂಬದವರಿಗೆ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗುವುದು ಎಂದು ಆಸ್ಪತ್ರೆ ಸಿಬ್ಬಂಧಿ ವರ್ಗ ತಿಳಿಸಿದೆ. ಕಾಶಿನಾಥ್, ಉಪೇಂದ್ರ, ಕುಮಾರ್ ಗೋವಿಂದ್ ಅವರ ಜತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟ ಇನ್ನು ನೆನಪು ಮಾತ್ರ....
ಪ್ರಮುಖ ಸುದ್ದಿಗಳು

ಕೊಪ್ಪಳ: ಬಡವರ ಅನ್ನಭಾಗ್ಯಕ್ಕೆ ಕನ್ನ, ಅಕ್ಕಿ ಕಾಳಸಂತೆಯಲ್ಲಿ ಮಾರಾಟ!

ಕೊಪ್ಪಳ: ರಾಜ್ಯದ ಯಾವೊಬ್ಬ ಬಡವನು ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಲಾಕ್‌ಡೌನ್ ಪರಿಹಾರವಾಗಿ ಈಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಏನಿದು ಪ್ರಕರಣ?: ಮೇ 6ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಗದಗ ನಗರ ಠಾಣೆ ಪೊಲೀಸರು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿಯೊಂದನ್ನು ಕಳಸಾಪುರ ರಿಂಗ್ ರಸ್ತೆಯಲ್ಲಿ ತಡೆಯುತ್ತಾರೆ. ಲಾರಿ ಚಾಲಕ ಸೋಮಲಿಂಗಪ್ಪ ಶಿರೂರನ್ನು ವಿಚಾರಿಸಿದಾಗ ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ಕಿರಣ್ಟ್ರೇ ಡರ್ಸ್‌ನಿಂದ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್‌ಗೆ ಸುಮಾರು 600 ಚೀಲ (ಚೀಲವೊಂದರಲ್ಲಿ 50 ಕೆಜಿ ಅಕ್ಕಿ) ಅಂದರೆ 7.35 ಲಕ್ಷ ರೂಪಾಯಿ ಮೌಲ್ಯದ 300 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುತ್ತಿರುವುದು ಬಯಲಿಗೆ ಬಂದಿದೆ....
ಪ್ರಮುಖ ಸುದ್ದಿಗಳು

ಮುಧೋಳದಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದೃಢ: ಜಿಲ್ಲಾಧಿಕಾರಿ

ಬಾಗಲಕೋಟೆ: ಮುಧೋಳದಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 68 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದ್ದಾರೆ. ಮುಧೋಳದ 55 ವರ್ಷದ ಪಿ-865 ವ್ಯಕ್ತಿಗೆ ನೆಗಡಿ, ಕೆಮ್ಮು, ಜ್ವರ (ಐ.ಎಲ್.ಐ) ಹಿನ್ನಲೆಯಲ್ಲಿ ಸೋಂಕು ದೃಡಪಟ್ಟರೆ, ಇನ್ನು 16 ವರ್ಷದ ಪಿ-870, 14 ವರ್ಷದ ಪಿ-871, 33 ವರ್ಷದ ಪಿ-872, 21 ವರ್ಷದ ಪಿ-873, 19 ವರ್ಷದ ಪಿ-874, ಪಿ-875, 34 ವರ್ಷದ ಪಿ-876, 30 ವರ್ಷದ ಪಿ-893, 17 ವರ್ಷದ ಪಿ-894, 32 ವರ್ಷದ ಪಿ-895, 20 ವರ್ಷದ ಪಿ-896, 18 ವರ್ಷದ ಪಿ-897, 29 ವರ್ಷದ ಪಿ-898, 80 ವರ್ಷದ ವೃದ್ದ ಪಿ-899 ಸೋಂಕು ದೃಡಪಟ್ಟಿದ್ದು, ಇವರಿಗೆ ಅಹಮದಾಬಾದ್, ಗುಜರಾತ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಡಪಟ್ಟಿರುವುದಾಗಿ ವರದಿಯಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 52 ಸ್ಯಾಂಪಲ್‍ಗಳ ಪೈಕಿ...
ಪ್ರಮುಖ ಸುದ್ದಿಗಳು

ಹಿಂದೂ ಧರ್ಮಕ್ಕೆ ಮತಾಂತರಗೊಂಡ 40 ಮುಸ್ಲಿಂ ಕುಟುಂಬ.

ಚಂಢಿಘಡ: 40 ಕುಟುಂಬದ ಸುಮಾರು 250 ಜನ ಮುಸಲ್ಮಾನ್ ಧರ್ಮವನ್ನು ತ್ಯೆಜಿಸಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಳಿಕ 80 ವರ್ಷದ ಮಹಿಳೆಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿರುವ ಘಟನೆ ಹರ್ಯಾಣದ ಹಿಸಾರ್ ಎಂಬ ಜಿಲ್ಲೆಯಲ್ಲಿ ನಡೆದಿದೆ. ಈ ಹಿಂದೆ ಜಿಂದ್ ಜಿಲ್ಲೆಯಲ್ಲೂ ಕೂಡ 6 ಕುಟುಂಬಗಳಿಂದ ಒಟ್ಟು 35-40 ಜನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಗ್ಋಆಮಸ್ಥರೊಬ್ಬರು, ಮತಾಂತರಗೊಂಡ ಬಿಟ್ಮಾಡಾದ ಕುಟುಂಬಗಳಾಗಿದ್ದು, ದನೋಡಾ ಕಲನ್ ಎಂಬ ಹಳ್ಳಿಯಲ್ಲ ಸ್ವಾತಂತ್ಯಕ್ಕೂ ಮುನ್ನ ಜೀವನ ನಡೆಸುತ್ತಿದ್ದರು. ಇವರ ಜೀವನ ಶೈಲಿಯು ಹಿಂದೂ ಧರ್ಮದ್ದೇ ಆದರೂ ಅಂತ್ಯ ಕ್ರಿಯೆಯೂ ಮಾತ್ರ ಮುಸ್ಲೀಂ ಸಂಪ್ರದಾಯದಂತೆ ನಡೆಯುತ್ತಿತ್ತು. ಇವರ ಪೂರ್ವಜರು ಮೊಘಲರ ಆಳ್ವಿಕೆಯಿಂದಲೂ ನೆಲೆವೂರಿದ್ದು, ಹಿಂದೂ ಕುಟುಂಬಗಳಾಗಿದ್ದವು. ಆದರೆ ಅಂದಿನ ಮೊಘಲ್ದೊ ರೆಯಾದ ಔರಾಂಗಜೇಬನ ದುರಾಡಳಿತದಿಂದ ಒತ್ತಾಯ ಪೂರ್ವಕವಾಗಿ ಮುಸ್ಲೀಂ ಧರ್ಮಕ್ಕೆ ಮತಾಂತರಿಸಲಾಗಿತ್ತು. ಇದರಿಂದ ಇಡೀ ಗ್ರಾಮವೇ ಹಿಂದೂ...
ಪ್ರಮುಖ ಸುದ್ದಿಗಳು

ಚರ್ಮ ಕುಶಲಕರ್ಮಿಗಳಿಗೆ 5000 ರೂ. ಪರಿಹಾರದ ವಿಶೇಷ ಪ್ಯಾಕೇಜ್‌: ರಾಜ್ಯ ಸರ್ಕಾರ ಘೋಷಣೆ.

ಬೆಂಗಳೂರು: ಕೋವಿಡ್‌ 19 ಲಾಕ್‌ಡೌನ್‌ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ರಸ್ತೆ ಬದಿಯಲ್ಲಿ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ರಾಜ್ಯ 11,772 ಚರ್ಮ ಕುಶಲಕರ್ಮಿಗಳಿಗೆ ಒಂದು ಬಾರಿ ಪರಿಹಾರ ರೂ.5000 ಗಳಂತೆ 5.89 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 11772 ಚರ್ಮ ವೃತ್ತಿಯಲ್ಲಿರುವ ಕುಶಲಕರ್ಮಿಗಳಿಗೆ ರೂ.5000 ಒಂದು ಬಾರಿ ಪರಿಹಾರವನ್ನು ನೀಡುವ ಸಂಬಂಧ ಪಾರದರ್ಶಕವಾಗಿ ಚರ್ಮ ಕುಶಲಕರ್ಮಿಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲು ವಿಶೇಷ ಪ್ಯಾಕೇಜನ್ನು ಅನುಷ್ಠಾನಗೊಳಿಸಬೇಕು. ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಲಭ್ಯವಿರುವ ಪಾದಚಾರಿ ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣದ ಮುಂಭಾಗ ಹಾಗೂ ಇತರ ಜನನಿಬಿಡ ಪ್ರದೇಶದಲ್ಲಿ ಕುಟೀರಗಳಲ್ಲಿ ಕುಳಿತು ಪಾದರಕ್ಷೆ ಮತ್ತು ಚರ್ಮ ವಸ್ತುಗಳ ರಿಪೇರಿ ಕಾಯಕ ನಿರ್ವಹಿಸುತ್ತಿರುವ ಮತ್ತು ತರಬೇತಿ ಪಡೆದ ಫಲಾನುಭವಿಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ಒಂದು ವಾರದೊಳಗೆ ಒಂದು ಬಾರಿ...
ಪ್ರಮುಖ ಸುದ್ದಿಗಳು

ಜಮ್ಮು ಕಾಶ್ಮೀರ: 5 ತಿಂಗಳಲ್ಲಿ 3 ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥರ ಸೇರಿದಂತೆ 64 ಉಗ್ರರ ಹತ್ಯೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ತಿಂಗಳುಗಳಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥರು ಸೇರಿದಂತೆ ಒಟ್ಟು 64 ಉಗ್ರರನ್ನು ಹತ್ಯೆ ಮಾಡಿದೆ. ಕಳೆದ ಜನವರಿ ತಿಂಗಳಿನಿಂದಲೂ ಸೇನಾಪಡೆಗಳು ಉಗ್ರರ ವಿರುದ್ಧ 27 ಕಾರ್ಯಾಚರಣೆಗಳನ್ನು ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಪ್ರಮುಖ ಮುಖ್ಯಸ್ಥರಾಗಿದ್ದ ಕ್ವಾರಿ ಯಾಸಿರ್, ಬುರ್ಹಾನ್ ಕೊಕಾ, ರಿಯಾಜ್ ನಾಯ್ಕೂ ಎಂಬುವವರನ್ನು ಹತ್ಯೆ ಮಾಡಿದೆ. ಈ ಕುರಿತು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾನತಾಡಿದ್ದು, ಕಾರ್ಯಾಚರಣೆ ವೇಳೆ 150 ಮಂದಿ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ. ಬುಧವಾರ ಅವಂತಿಪೋರಾದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ರಿಯಾಲ್ ನಾಯ್ಕೂ ಹತ್ಯೆ ಮಾಡಿದ್ದು, ಸೇನೆಗೆ ದೊಡ್ಡ ಯಶಸ್ಸನ್ನೇ ತಂದುಕೊಟ್ಟಿದೆ. ಕಳೆದ 6 ತಿಂಗಳಿನಿಂದಲೂ ಆತನ ಚಟುವಟಿಕೆಗಳ ಮೇಲೆ ಸೇನೆ ಕಣ್ಗಾವಲಿರಿಸಿತ್ತು. ಆತನಿರುವ...
ಪ್ರಮುಖ ಸುದ್ದಿಗಳು

ಮಂಗಳೂರು: ಲಾರಿಯಲ್ಲಿ ಊರಿಗೆ ಹೊರಟಿದ್ದ 120 ಕಾರ್ಮಿಕರು ಪೊಲೀಸ್ ವಶಕ್ಕೆ.

ಮಂಗಳೂರು: ಮಂಗಳೂರಿನಿಂದ ಅಕ್ರಮವಾಗಿ ಉತ್ತರ ಭಾರತದ ಕಡೆಗೆ ಲಾರಿಯಲ್ಲಿ ಹೊರಟಿದ್ದ 120 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ಹಾಸ್ಟೆಲ್ ಒಂದರಲ್ಲಿ ಇರಿಸಿದ್ದಾರೆ. 120 ವಲಸೆ ಕಾರ್ಮಿಕರು ಎರಡು ಲಾರಿಗಳಲ್ಲಿ ಹೋಗುತ್ತಿದ್ದಾಗ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹರ್ಯಾಣ ನೋಂದಣಿಯ ಎರಡೂ ಲಾರಿಗಳಿಗೆ ಮೇಲ್ಭಾಗದಲ್ಲಿ ಟರ್ಪಾಲ್ ಹೊದಿಸಲಾಗಿದ್ದು, ಅಗತ್ಯ ವಸ್ತುಗಳ ಸಾಗಾಟದ  ಸ್ಟಿಕ್ಕರ್ ಸಹ ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೇ 8ರಂದು ಮುಂಜಾನೆ 3 ಗಂಟೆ ಸುಮಾರಿಗೆ ಗುಂಡ್ಯ ಚೆಕ್‌ಪೋಸ್ಟ್ ತಲುಪಿದ ಈ ಲಾರಿಗಳನ್ನು ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮವಾಗಿ ಜನರನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾರಿಗಳನ್ನು ಪೊಲೀಸರು ತಡೆದು ಅದರಲ್ಲಿದ್ದ ಕಾರ್ಮಿಕರನ್ನು ಗುಂಡ್ಯ  ಪಿಲಿಕಜೆ ಶಾಲೆಗೆ ಕರೆದೊಯ್ದರು. ಆದರೆ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಪಟ್ಟುಹಿಡಿದು ಕುಳಿತಿದ್ದರು. ವಿಷಯ ತಿಳಿದ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಮಧ್ಯಾಹ್ನದ ವೇಳೆಗೆ...
ಪ್ರಮುಖ ಸುದ್ದಿಗಳು

ಗಂಗಾವತಿ: ತುಂಬು ಗರ್ಭಿಣಿಯನ್ನು ಅಲೆದಾಡಿಸಿ ಅಮಾನವೀಯತೆ ಮೆರೆದ ಸರ್ಕಾರಿ ವೈದ್ಯರು.

ಗಂಗಾವತಿ: ಹೆರಿಗೆ ಉದ್ದೇಶಕ್ಕೆ ಸರ್ಕಾರಿ ಆಸ್ಪತ್ರೆಗೆ ತೆರಳಿದ ಬಡ ಕುಟುಂಬದ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಕನಕಗಿರಿಯ ಸಮುದಾಯ ಆಸ್ಪತ್ರೆಯ ವೈದ್ಯರು ವಿನಾಕಾರಣ ಅಲೆದಾಡಿಸಿ ಅಮಾನವೀಯತೆ ತೋರಿದ ಘಟನೆ ಬೆಳಕಿಗೆ ಬಂದಿದೆ. ಕನಕಗಿರಿಯಿಂದ ಗಂಗಾವತಿಗೆ, ಪುನಃ ಗಂಗಾವತಿಯಿಂದ ಕನಕಗಿರಿಗೆ ಹೀಗೆ ಸುಮಾರು 34 ಕಿ.ಮೀ ಅಲೆದಾಡಿದ ಮಹಿಳೆಯನ್ನು ಕನಕಗಿರಿಗೆ ಕರೆಯಿಸಿಕೊಂಡು ಸಮುದಾಯ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ ಮತ್ತು  ಮಗುಆರೋಗ್ಯವಾಗಿದ್ದಾರೆ. ಆದರೆ ಗರ್ಭಿಣಿ ಮಹಿಳೆಯನ್ನು ವಿನಾಕಾರಣಕ್ಕೆ ಅಲೆದಾಡಿಸಿದ್ದಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನಕಗಿರಿ ಪಟ್ಟಣದ ಪದ್ಮಾವತಿ ಗುರುರಾಜ್ ಬಡಿಗೇರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಪಟ್ಟಣದ ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ್ದಾರೆ. ಆದರೆ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರವಳಿಕೆ ತಜ್ಞರಿಲ್ಲ ಎಂಬ ಕಾರಣಕ್ಕೆ ಅಲ್ಲಿನ ವೈದ್ಯರು ಗಂಗಾವತಿಗೆ ಶಿಫಾರಸ್ಸು ಮಾಡಿದ್ದಾರೆ. ಗಂಗಾವತಿಗೆ ಆಗಮಿಸಿದ ಮಹಿಳೆಯ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು...
ಪ್ರಮುಖ ಸುದ್ದಿಗಳು

ಅಮೆರಿಕ ಸೇರಿ ವಿಶ್ವಕ್ಕೆ ಮತ್ತೊಂದು ಶಾಕ್ ನೀಡಿದ ಚೀನಾ..!

ಬೀಜಿಂಗ್/ವಾಷಿಂಗ್ಟನ್, ಮೇ 1-ಕೊರೊನಾ ವೈರಸ್ ಹಾವಳಿ ನಂತರ ಚೀನಾ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಹಳಸಿದ್ದು, ವಾಣಿಜ್ಯ ಸಮರ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.ಕೊರೊನಾ ವೈರಸ್ವಿ ಪ್ಲವಕ್ಕಾಗಿ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಅಮೆರಿಕ ಸೇರಿದಂತೆ ಹಲವು ದೇಶಗಳು ಮುಂದಾಗಿರುವ ಸಂದರ್ಭದಲ್ಲೇ ಕಮ್ಯೂನಿಸ್ಟ್ ದೇಶದ ಇಂದು ಇಡೀ ವಿಶ್ವಕ್ಕೆ ಶಾಕ್ ನೀಡಿದೆ. ಚೀನಾ ತನ್ನ ಷೇರುಪೇಟೆಯಲ್ಲಿ ಇಂದು ಬೆಳಗ್ಗೆಯಿಂದಲೇ ಡಾಲರ್ ನಿಲ್ಲಿಸಿ ಸಂಪೂರ್ಣ ತನ್ನ ದೇಶಿ ಕರೆನ್ಸಿ ಯೆನ್‍ನಲ್ಲೇ ವಹಿವಾಟು ಆರಂಭಿಸಿದೆ. ಇದು ಅಮೆರಿಕ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ವಾಣಿಜ್ಯಾ ಘಾತವಾಗಿದೆ. ಚೀನಾದ ಇತಿಹಾಸದಲ್ಲೇ ಈ ವಿದ್ಯಮಾನ ಇದೇ ಮೊದಲು. ಇದು ಕೇವಲ ಅಮೆರಿಕ ಡಾಲರ್ ಮೇಲಷ್ಟೇ ಅಲ್ಲದೆ ಜಾಗತಿಕ ಷೇರು ವಹಿವಾಟುಗಳ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ. ಚೀನಾ ಯೆನ್ ಮತ್ತು ಅಮೆರಿಕ ಡಾಲರ್ ವಿರುದ್ಧ ನಿರಂತರವಾಗಿ ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಬೀಜಿಂಗ್ ಕೈಗೊಂಡಿರುವ...
ಪ್ರಮುಖ ಸುದ್ದಿಗಳು

ಕೊರೊನಾ ಜನಕ ಚೀನಾಗೆ ಮತ್ತೊಂದು ಶಾಕ್ ಕೊಡಲು ಟ್ರಂಪ್ ತಯಾರಿ..!

ವಾಷಿಂಗ್ಟನ್, ಮೇ 1- ಕಿಲ್ಲರ್ ಕೊರೊನಾ ವೈರಸ್‍ನಿಂದ ಅಪಾರ ಸಾವು-ನೋವು ಮತ್ತು ಊಹೆಗೂ ನಿಲುಕದ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಅಮೆರಿಕ, ಚೀನಾ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ಕೋವಿಡ್-19 ವೈರಸ್‍ನಿಂದ ಅಮೆರಿಕದಲ್ಲಿ ಆಗಿರುವ ಭಾರೀ ಹಾನಿಗಾಗಿ ಚೀನಾದಿಂದ ದೊಡ್ಡ ಮೊತ್ತದ ಪರಿಹಾರಕ್ಕಾಗಿ ಆಗ್ರಹಿಸಿ ತನಿಖೆಗೆ ಮುಂದಾಗಿರುವ ಟ್ರಂಪ್ ಈಗ ಕಮ್ಯೂನಿಸ್ಟ್ ದೇಶದ ವಿರುದ್ಧ ತೆರಿಗೆ ವಿಧಿಸಲು ಸಿದ್ಧರಾಗಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷರು, ತಮ್ಮ ದೇಶದಲ್ಲಿ ಭಾರೀ ಸಾವು ಮತ್ತು ಸೋಂಕು ಹೆಚ್ಚಳ ಹಾಗೂ ಆರ್ಥಿಕ ಕುಂಠಿತಕ್ಕೆ ಕಾರಣವಾಗಿರುವ ಚೀನಾಗೆ ಶಿಕ್ಷೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೊದಲ ಹಂತವಾಗಿ ಕೆಂಪು ದೇಶದ ಮೇಲೆ ಭಾರೀ ತೆರಿಗೆ ವಿಧಿಸುವ ಮುನ್ಸೂಚನೆ ನೀಡಿದ್ದಾರೆ. ಆದರೆ, ಶಿಕ್ಷೆ ರೂಪದಲ್ಲಿ ಅಮೆರಿಕದ ಸಾಲ ನೀಡಿಕೆಯನ್ನು ಕಡಿತಗೊಳಿಸುವ ಸಾಧ್ಯತೆಯನ್ನು ಟ್ರಂಪ್...
1 10 11 12
Page 12 of 12
error: Content is protected !!