ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

ಕಾಂಗ್ರೆಸ್ ಗೆ ಚಕ್ರವರ್ತಿಯೇ ಟಾರ್ಗೆಟ್ ಏಕೆ ?

ಚಕ್ರವರ್ತಿ ಸೂಲಿಬೆಲೆಯವರೇನು ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಯಾವುದೂ ಅಲ್ಲ. ಅಂದ ಮೇಲೆ ಯಾಕೆ ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆಯವರನ್ನೇ ಟಾರ್ಗೆಟ್ ಮಾಡಿ ಅವರ ತೋಜೋವಧೆಗೆ ಟೊಂಕಕಟ್ಟಿ ನಿಂತಿದೆ ಎಂದು ಕೆದುಕಿ ನೋಡಿದರೆ ತಿಳಿಯುತ್ತೆ ಚಕ್ರವರ್ತಿಯವರು ಕಾಂಗ್ರೆಸ್ ಗೆ ಯಾವ ಮಟ್ಟಿಗೆ ಅಡ್ಡಗಾಲು ಆಗಿದ್ದರು ಎಂದು. ಬಿಜೆಪಿಯಿಂದ ದೂರದಲ್ಲೇ ನಿಂತು 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಕರ್ನಾಟಕದಲ್ಲಿ ಅವರ ಪರ ಪ್ರಚಾರ ಆರಂಭಿಸಿ, ನಮೋ ಬ್ರಿಗೇಡ್‌ನ ಸಾರಥಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಸುತ್ತಾಡಿ ಕಾಂಗ್ರೆಸ್ ನ ದುರಾಡಳಿತವನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡುತ್ತ ಕಾಂಗ್ರೆಸ್ ಪರದೆ ಸರಿಸಿ, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಸಾರುತ್ತ ನವಭಾರತಕ್ಕೆ ನರೇಂದ್ರ ಮೋದಿ ಏಕೆ ಅವಶ್ಯಕ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುತ್ತ, ನರೇಂದ್ರ ಮೋದಿಯ ಪರ ಗ್ರಾಮ-ಗ್ರಾಮಗಳಲ್ಲಿ...
ಪ್ರಮುಖ ಸುದ್ದಿಗಳುಶಿವಮೊಗ್ಗ

ಕ್ಯಾನ್ಸರ್​ ಮಾಂತ್ರಿಕ ಶಿವಮೊಗ್ಗ ಜಿಲ್ಲೆಯ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ

ಕ್ಯಾನ್ಸರ್​ ಸೇರಿದಂತೆ ಅನೇಕ ಮಾರಣಾಂತಿಕ ರೋಗಗಳಿಗೆ ನಾಟಿ ಔಷಧಿಯ ಮೂಲಕ ಚಿಕಿತ್ಸೆ ನೀಡಿ ಜಗತ್ತಿನಾದ್ಯಂತ ಹೆಸರು ಮಾಡಿದ್ದ ಶಿವಮೊಗ್ಗದ ಸಾಗರ ತಾಲೂಕಿನ ನರಸೀಪುರದ 80 ವರ್ಷದ ನಾಟಿ ವೈದ್ಯ ನಾರಾಯಣಮೂರ್ತಿ ಬುಧವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವೈದ್ಯ ನಾರಾಯಣ ಮೂರ್ತಿ ಮತ್ತು ಅವರ ಕುಟುಂಬ ಸದಸ್ಯರು ದಶಕಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ, ಕಡಿಮೆ ದರದಲ್ಲಿ ಕ್ಯಾನ್ಸರ್​ಗೆ ನಾಟಿ ಔಷಧಿ ನೀಡುತ್ತಿದ್ದ ನಾರಾಯಣ ಮೂರ್ತಿ ಅವರ ಬಳಿ ವಿದೇಶಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು. ಸುಮಾರು ೪ ದಶಕಗಳಿಂದ ನರಸೀಪುರದಲ್ಲಿ ನಾಟಿ ಔಷಧಿ ನೀಡುತ್ತಿದ್ದ ಇವರು ಆರಂಭದಲ್ಲಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ನಂತರ ಕೇವಲ 100 ರೂ. ಪಡೆದು ಚಿಕಿತ್ಸೆ ನೀಡಲಾರಂಭಿಸಿದರು. ಕಿಡ್ನಿಯಲ್ಲಿ ಕಲ್ಲು, ಮಧುಮೇಹ, ಹೃದಯಸಂಬಂಧಿ ಸಮಸ್ಯೆ, ಗ್ಯಾಂಗ್ರಿನ್, ಗರ್ಭಕೋಶದ ಕ್ಯಾನ್ಸರ್​, ಅನ್ನನಾಳದ ಕ್ಯಾನ್ಸರ್ ಮುಂತಾದ ರೋಗಗಳಿಗೆ ಇವರು ನೀಡುತ್ತಿದ್ದ ಔಷಧಿ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಶಿವಮೊಗ್ಗ ಜಿಲ್ಲೆಯ ನರಸೀಪುರಕ್ಕೆ...
ಪ್ರಮುಖ ಸುದ್ದಿಗಳುಮೈಸೂರು

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಂತಾಪ ಸಲ್ಲಿಸಿದ ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ

ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಮೇಣದಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಕರ್ನಲ್ ಸಂತೋಷ್ ಬಾಬು ಬಿಹಾರ್ ರೆಜಿಮೆಂಟ್,ಹವಾಲ್ದಾರ್ ಪಳನಿ ಸ್ವಾಮಿ ರೆಜಿಮೆಂಟ್ ತಮಿಳುನಾಡು ... ಇವರಿಬ್ಬರಿಗೂ ಶ್ರದ್ಧಾಂಜಲಿ ಸಂತಾಪ ಸಲ್ಲಿಸಲಾಯಿತು. ನಂತರ ಮಾತನಾಡಿದ ನಗರಪಾಲಿಕೆ ಸದಸ್ಯರಾದ ಮಾವಿ.ರಾಂಪ್ರಸಾದ್ ಇಂದು ಭಾರತ-ಚೀನಾ ಗಡಿಯಲ್ಲಿ ಮೂವರು ಭಾರತೀಯ ಯೋಧರನ್ನು ಕುತಂತ್ರದಿಂದ ಕೊಲೆ ಮಾಡಿರುವ ಪಾಪಿ ಚೀನಾ ದೇಶದ ದುಷ್ಕೃತ್ಯವನ್ನು ತೀವ್ರತರವಾಗಿ ಖಂಡಿಸಬೇಕು. ಚೀನಾದೇಶವೂ ಸಹಾ ಇತರೇ ಶತೃ ದೇಶಗಳಂತೆ ಕಾಲ್ಕೆರೆದು ಬರುತ್ತಿರುವುದು ಅದರ ನೈತಿಕ ದೀವಾಳೀ ತನಕ್ಕೆ ಸಾಕ್ಷಿಯಾಗಿದೆ. ಭಾರತವು ಶಾಂತಿ ಬಯಸುವ ದೇಶವಾಗಿದ್ದು ಇಡೀ ವಿಶ್ವಕ್ಕೇ ಮಾದರಿಯಾಗಿದೆ ಆದರೆ ಭಾರತದ ತಾಳ್ಮೆ ಪರೀಕ್ಷಿಸುವ ಮೂಲಕ ಚೀನಾ ಕಾಲ್ಕೆರೆಯುತ್ತಿದೆ. ಸ್ವಾಭಿಮಾನಿ ಭಾರತೀಯರು ಚೀನಾ ಉತ್ಪನ್ನ ಗಳನ್ನು ಮತ್ತು ಮೊಬೈಲ್ ಆಪ್ ಗಳನ್ನು ಈ ಕೂಡಲೇ ಬಹಿಷ್ಕರಿಸಬೇಕು ಚೀನಾ ದೇಶಕ್ಕೆ ಸಾವಿರಾರು ಕೋಟಿ ರೂ.ಗಳು ವ್ಯವಹಾರ ನಡೆಸುತ್ತಿದ್ದು...
ದಾವಣಗರೆಪ್ರಮುಖ ಸುದ್ದಿಗಳು

ವರುಷಗಳೇ ಕಳೆದರೂ ಶಾಸಕರಿಗಾಗಲೀ.. ಸದಸ್ಯರಿಗಾಗಲೀ..ಮಹಾಪೌರರಿಗಾಗಲೀ ಕಣ್ಣಿಗೆ ಬೀಳದಿರುವ 41ನೇ ವಾರ್ಡಿನ ಪಾರ್ಕುಗಳು, ಸಿಗದ ಸೌಭಾಗ್ಯಕ್ಕಾಗಿ ಅಭಿವೃದ್ಧಿ ಹೆಸರಲ್ಲಿ ಲಕ್ಷ-ಲಕ್ಷ ಹಣ ಮಾತ್ರ ಗುಳುಂ ಸ್ವಾಹಃ ; ಶಾಸಕರಾಗಿ ಏನ್ ಪ್ರಯೋಜನ ಸ್ವಾಮಿ..???

ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿಯಾಗುತ್ತಿರುವ ದಾವಣಗೆರೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಪಾಲಿಕೆ ವ್ಯಾಪ್ತಿಯ ಪಾರ್ಕ್ಗಳ ಅಭಿವೃದ್ಧಿಗೆ ಅಮೃತ್ ಸಿಟಿ ಯೋಜನೆಯಡಿ ಕೋಟಿ ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದೆ. ಆದರೆ, ಪಾಲಿಕೆಯ ನಿರ್ಲಕ್ಷ್ಯದಿಂದ ಕೆಲವು ವಾರ್ಡ್ ಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಗರ ಬಡಿದಂತಾಗಿದೆ. ಕೇಂದ್ರ ಸರ್ಕಾರ ದಾವಣಗೆರೆಯ ಪಾರ್ಕ್ಗಳಿಗೆ ಆಧುನಿಕ ಸ್ಪರ್ಷ ನೀಡುವ ಉದ್ದೇಶದಿಂದ ಅಮೃತ್ ಸಿಟಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ವರ್ಷವೇ ಕಳೆದಿವೆ. ಆದರೆ, ಮಹಾನಗರ ಪಾಲಿಕೆ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು , ಆಯುಕ್ತರು ಮಾತ್ರ ಕೆಲವು ಪಾರ್ಕ್ ಗಳ ಅಭಿವೃದ್ಧಿಯನ್ನೇ ಮರೆತೇ ಬಿಟ್ಟಿದ್ದಾರೆ. ಅದರಲ್ಲಿಯೂ 41ನೇ ವಾರ್ಡಿಗೆ ಸಂಬಂಧಿಸಿದ ಲೋಕಿಕೆರೆ ರಸ್ತೆಗೆ ಹೊಂದಿಕೊಂಡಿರುವ ಮಾನ್ಯ ಶಾಸಕರ ಹೆಸರನ್ನೇ ಇಟ್ಟುಕೊಂಡಿರುವ ರವೀಂದ್ರನಾಥ ನಗರದಲ್ಲಿರುವ ಎರಡು ಪಾರ್ಕ್ ಗಳು ಅಭಿವೃದ್ಧಿಯ ಕಾಣದೆ ದುರಸ್ಥಿಯ ಅಂಚಿನಲ್ಲಿ ಸಿಲುಕಿವೆ. ಇಲ್ಲಿಯ...
ಪ್ರಮುಖ ಸುದ್ದಿಗಳುಮಂಡ್ಯ

ಕೆ ಆರ್ ಎಸ್ ನಲ್ಲಿ ನಾಲ್ವಡಿ ಪ್ರತಿಮೆ ಪಕ್ಕ ಸರ್ ಎಂವಿ ಪ್ರತಿಮೆ ಬೇಡ: ಬಿಜೆಪಿ ಸರ್ಕಾರಕ್ಕೆ ನಂಜರಾಜೇ ಅರಸ್, ಪ್ರಗತಿಪರರ ಆಗ್ರಹ

ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯದ ಬಳಿ ನಿರ್ಮಾಣವಾಗುತ್ತಿರುವ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ಸರಿಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಮಾಡುವುದು ಸರಿಯಲ್ಲ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜೆ ಅರಸ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟು ಕಟ್ಟಲು ದೃಢ ಸಂಕಲ್ಪ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅದಕ್ಕಾಗಿ ತನ್ನ ರಾಜ್ಯದ ಬೊಕ್ಕಸದಲ್ಲಿದ್ದ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಅಭರಣಗಳನ್ನು ದಾನವಾಗಿ ನೀಡಿದ್ದರು. ಆದರೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಏನೇನೂ ಇಲ್ಲಾ ಎಂದು ಹೇಳಿದರು. ಅಣೆಕಟ್ಟೆ ನಿರ್ಮಾಣ ಕಾರ್ಯ 1907 ರಿಂದ ಆರಂಭಗೊಂಡು 1939ರಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಅವಧಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಮಾತ್ರವಲ್ಲದೆ ಸುಮಾರು 7 ಮುಖ್ಯ ಇಂಜಿನಿಯರ್ ಹಾಗೂ 5 ಮಂದಿ ದಿವಾನರು ಕೆಲಸಮಾಡಿದ್ದಾರೆ. ಆದರೂ ಅಣೆಕಟ್ಟು ಕಟ್ಟಿದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಎಂದು ಅವರ ಕುರುಡು ಅಭಿಮಾನಿಗಳು...
ಪ್ರಮುಖ ಸುದ್ದಿಗಳು

ಅಗಸರಿಗೆ-ಸವಿತಾ ಸಮಾಜದವರಿಗೆ, ಚಾಲಕರಿಗೆ ಮಾತ್ರ 5000 ; ಬಿಜೆಪಿಯವರ ಒಡೆದಾಳುವ ಧೋರಣೆಗೆ ಭೋವಿ ಸಮಾಜ ಬಲಿ

ರಾಜ್ಯದಲ್ಲಿರುವ ಭೋವಿ ಸಮಾಜದ ಅಭಿವದ್ಧಿಗೆ ಹಾಗೂ ಸಮಾಜದ ಜನರಿಗೆ ಯಾವುದೇ ಯೋಜನೆಗಳನ್ನು ಸರಕಾರ ಜಾರಿಗೊಳಿಸದೆ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿದೆ. ರಾಜ್ಯದಲ್ಲಿ 45 ರಿಂದ 50ಲಕ್ಷ ಜನಸಂಖ್ಯೆ ಹೊಂದಿದ್ದೇವೆ. ಸಮಾಜದ ಬಹುತೇಕ ಜನರು ಅತ್ಯಂತ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಕಲ್ಲು ಒಡೆಯುವ, ಕಲ್ಲೊಡ್ಡು ಕಟ್ಟುವ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸಗಳು ಭೋವಿ ಸಮಾಜದವರಿಗೆ ದೊರೆಯುತ್ತಿಲ್ಲ. ಬಹುತೇಕರು ಕಷಿ ಭೂಮಿ ಇಲ್ಲದೆ ಅತ್ಯಂತ ಕಷ್ಟಕರ ಸ್ಥಿತಿ ಎದುರಿಸುತ್ತಿದ್ದಾರೆ. ವಾಸಿಸಲು ಮನೆಗಳಿಲ್ಲ, ನೆಲೆ ಇಲ್ಲ. ಹಲವಾರು ವರ್ಷಗಳಿಂದ ಭೋವಿ ಸಮಾಜದ ಜನರು ಸಂಕಷ್ಟಗಳನ್ನು ಎದುರಿಸುತ್ತ ಬಂದಿದ್ದಾರೆ. ಆದರೆ ಭೋವಿ ಸಮಾಜದ ಅಭಿವದ್ಧಿಗೆ ಯಾವ ಸರಕಾರಗಳೂ ಕ್ರಮ ಕೈಗೊಂಡಿಲ್ಲ, ಈಗಿನ ಯಡಿಯೂರಪ್ಪನವರ ಸರ್ಕಾರವೂ ಸೇರಿ ಯಾವುದೇ ಅನುಕೂಲಗಳನ್ನು ಮಾಡಿಕೊಟ್ಟಿಲ್ಲ. ಇದಕ್ಕೆ ತಾಜಾ ಸಾಕ್ಷಿಯೆಂದರೆ, ಮೊನ್ನೆ ಮೊನ್ನೆ ಕೋವಿಡ್-19 ಲಾಕ್ ಡೌನ್ ಪರಿಣಾಮವಾಗಿ ಚಾಲಕರಿಗೆ, ಆಗಸರಿಗೆ , ಸವಿತಾ ಸಮಾಜದವರಿಗೆ ಆರ್ಥಿಕ ತೊಂದರೆ...
ಪ್ರಮುಖ ಸುದ್ದಿಗಳು

ಸಹಾಯಹಸ್ತ ಚಾಚಲು ಹೋಗಿ ತಾನೇ ಕೊರೋನಾಗೆ ತುತ್ತಾದ ಪಾಕ್ ಕ್ರಿಕೆಟಿಗ ಆಫ್ರಿದಿ

ನವದೆಹಲಿ: ಪಾಕಿಸ್ತಾನದ ಪ್ರಸಿದ್ಧ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ ಸೋಂಕು ತಗುಲಿದೆ. ಶಾಹಿದ್ ಅಫ್ರಿದಿ ಟ್ವೀಟ್ ಮಾಡುವ ಮೂಲಕ ಸ್ವತಃ ಈ ಮಾಹಿತಿ ನೀಡಿದ್ದಾರೆ. ಗುರುವಾರದಿಂದ ನಾನು ಆರೋಗ್ಯವಾಗಿಲ್ಲ, ನನ್ನ ದೇಹವು ತುಂಬಾ ನೋವಿನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲ ಆರೋಗ್ಯ ಪರೀಕ್ಷೆಯನ್ನು ಮಾಡಿಸಿದ್ದೇನೆ. ದುರದೃಷ್ಟವಶಾತ್ ನಾನು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇದೆ. ಇನ್ಶಾ-ಅಲ್ಲಾ ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ಇಡೀ ವಿಶ್ವದಲ್ಲೇ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕರೋನಾವೈರಸ್ ಪಾಕಿಸ್ತಾನ ದಲ್ಲಿಯೂ ಸಾಕಷ್ಟು ಹಾನಿ ಮಾಡಿದೆ. ಈ ದೇಶದಲ್ಲಿ ಒಂದು ಲಕ್ಷ 32 ಸಾವಿರಕ್ಕೂ ಹೆಚ್ಚು ಜನರು ಈ ಮಾರಕ ಸಾಂಕ್ರಾಮಿಕ ರೋಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಪಾಕಿಸ್ತಾನ ಸರ್ಕಾರದ ಲಾಕ್ಡೌನ್ ನಿರ್ಧಾರದಿಂದ ಹಸಿವಿನಿಂದ ಬಳಲುತ್ತಿರುವ ಜನರು ಸಾವಿಗೆ ತುತ್ತಾಗಿದ್ದರು. ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಅಂತಹವರಿಗೆ ಸಹಾಯ ಮಾಡಲು...
ಪ್ರಮುಖ ಸುದ್ದಿಗಳು

ರಾಜ್ಯದಲ್ಲಿ ರಸ್ತೆಗಳಿಗೆ, ಅಣೆಕಟ್ಟುಗಳಿಗೆ ಬ್ರಾಹ್ಮಣರ ಹೆಸರು- ಪ್ರತಿಮೆಗಳ ನೆಪದಲ್ಲಿ ಜನರಿಗೆ ಮಣ್ಣಾಕುತ್ತಿರುವ ಬಿಜೆಪಿ ಸರ್ಕಾರ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತು ಸರ್ಕಾರದ ಮೂರ್ಖ ನಾಯಕರುಗಳು ಅಭಿವೃದ್ಧಿಯ ಮರೆತು, ಕೇವಲ ರಸ್ತೆಗಳಿಗೆ ಮತ್ತು ಅಣೆಕಟ್ಟುಗಳಿಗೆ ಒಂದು ಸಮುದಾಯದ ವ್ಯೆಕ್ತಿಗಳ ಹೆಸರನ್ನು, ಪ್ರತಿಮೆಗಳನ್ನು ಮಾಡುತ್ತ… ಐದು ವರ್ಷದ ಆಡಳಿತವನ್ನು ಮುಗಿಸುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಬಿಜೆಪಿಯ ದಂಡನಾಯಕ, ದಂಡನಾಯಕನ ಚೇಲಗಳು ಮಾಡುತ್ತಿರುವ ಕೆಲವು ಕುಚೇಷ್ಟೆಗಳೇ ಸಾಕ್ಷಿಯಾಗಿವೆ ಅನಿಸುತ್ತಿದೆ. ಇನ್ನೂ ಮೊನ್ನೆ ಮೊನ್ನೆ ಯಲಹಂಕ ಫ್ಲೈಓವರ್ ಗೆ ನೆರೆಯ ರಾಜ್ಯದ ವ್ಯೆಕ್ತಿಯ ಹೆಸರನ್ನು ಇಟ್ಟು, ತಮ್ಮ ಕಾರ್ಯಕರ್ತರಿಗೆ ಇವರೊಬ್ಬ ದೇಶ ಭಕ್ತ, ಅಪ್ರತಿಮ ಹೋರಾಟಗಾರ, ಯಾರು ಏನ್ ಹೇಳಿದರು ನಾವು ಆ ಹೆಸರನ್ನು ಇಟ್ಟೇ ತೀರುತ್ತೇವೆ ಎಂದು ಹೇಳಿ, ರಾಜ್ಯದಲ್ಲಿ ಕೆಲವು ಜನಾಂಗದವರಲ್ಲಿ ಗಲಭೆಯ ವಾತಾವರಣ ಸೃಷ್ಟಿಸಿದ್ದರು. ಈಗ ಕೆ.ಆರ್.ಎಸ್. ಅಣೆಕಟ್ಟಿನ ಮುಂಭಾಗದಲ್ಲಿ ರಾಜ್ಯದ ರಾಜರಾಗಿ, ಎಲ್ಲಾ ಜನಾಂಗದವರನ್ನು ಗಣನೆಗೆ ತೆಗೆದುಕೊಂಡು ಉತ್ತಮ ಆಡಳಿತ ನೀಡಿ, ಅಂದಿನ ಮದ್ರಾಸ್ ಸರ್ಕಾರದ ಜೊತೆ ಶಾಂತಿಯುತ ಒಪ್ಪಂದ ಮಾಡಿಕೊಂಡು ಅಣೆಕಟ್ಟನ್ನು...
ಪ್ರಮುಖ ಸುದ್ದಿಗಳುಬೆಂಗಳೂರು

ಜುಲೈ 2 ಕ್ಕೆ ಡಿಕೆಶಿ ಪದಗ್ರಹಣ ಫಿಕ್ಸ್? ಹೋಮ ನಡೆದ ಸ್ಥಳದಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜುಲೈ 2 ಕ್ಕೆ ಬಹುತೇಕ ಫಿಕ್ಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೂನ್ 14 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಒಟ್ಟು ಮೂರು ಬಾರಿ ಕಾರ್ಯಕ್ರಮ ಮಂದೂಡಲ್ಪಟ್ಟಿದ್ದು ಇದೀಗ ಜುಲೈ 2 ರಂದು ನಡೆಯಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಇದೆ. ಜೂನ್ 29 ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಯ ಆಯ್ಕೆ ಇನ್ನು ಅಂತಿಮಗೊಂಡಿಲ್ಲ. ಸಾಕಷ್ಟು ಜನರು ಲಾಬಿ ನಡೆಸುತ್ತಿದ್ದು ಅಭ್ಯರ್ಥಿ ಆಯ್ಕೆಯೂ ಜಟಿಲಗೊಂಡಿದೆ. ಪರಿಣಾಮ ಪ್ರಮುಖ ಮುಖಂಡರು ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಬೇಕಾಗಿದೆ. ಈ ಗೊಂದಲ ಬಗೆಹರಿದ ಬೆನ್ನಲ್ಲೇ ಕಾರ್ಯಮ್ರಮವನ್ನು ಹಮ್ಮಿಕೊಳ್ಳುವುದು ಡಿಕೆಶಿ ಯೋಜನೆಯಾಗಿದೆ. ಸದ್ಯ ತರಾತುರಿಯಲ್ಲಿ ಕಾರ್ಯಕ್ರಮ ನಡೆಸುವುದರಿಂದ ಸಮಸ್ಯೆಯಾಗಲಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಕಾರ್ಯಕ್ರಮಕ್ಕೆ ಅಡೆತಡೆ...
ಪ್ರಮುಖ ಸುದ್ದಿಗಳು

ಧೋನಿ ಸಿನಿಮಾ ಖ್ಯಾತಿಯ ಬಾಲಿಹುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಮುಂಬೈ: ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರ ಸುಶಾಂತ್ ಸಿಂಗ್ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು....
1 2 3 12
Page 1 of 12
error: Content is protected !!