ದಾವಣಗರೆ

ದಾವಣಗರೆಪ್ರಮುಖ ಸುದ್ದಿಗಳು

ಕಂದಾಯ ಪರಿಷ್ಕರಣೆ ಕೈಬಿಟ್ಟು ಹಳೇ ಕಂದಾಯ ವಸೂಲಿಗೆ ಆಗ್ರಹಿಸಿ ಪಾಲಿಕೆ ಕಾಂಗ್ರೆಸ್ ಸದಸ್ಯರಿಂದ ಮೌನ ಪ್ರತಿಭಟನೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆಯನ್ನು ಕೈಬಿಟ್ಟು ಹಿಂದಿನ ಕಂದಾಯವನ್ನೆ ಪರಿಗಣಿಸಬೇಕೆಂದು ಒತ್ತಾಯಿಸಿ ದಾವಣಗೆರೆ ಮಹಾನಗರ ಪಾಲಿಕೆ ವಿಪಕ್ಷ ಕಾಂಗ್ರೆಸ್ ಸದಸ್ಯರುಗಳು ಇಂದು ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಇಂದು ಬೆಳಿಗ್ಗೆ ಮಹಾನಗರ ಪಾಲಿಕೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಮಹಾನಗರ ಪಾಲಿಕೆ ಸದಸ್ಯರುಗಳು ಮೌನ ಪ್ರತಿಭಟನೆ ನಡೆಸಿ ಕೋವಿಡ್-19 ಸಂಕಷ್ಟದಿಂದ ಕಳೆದ 2 ತಿಂಗಳಕಾಲ ವಾಣಿಜ್ಯ ನಗರವಾದ ದಾವಣಗೆರೆ ಸ್ಥಬ್ದಗೊಂಡಿದೆ ಯಾವುದೇ ವ್ಯಾಪಾರ ವಹಿವಾಟು ನಡೆದಿರುವುದಿಲ್ಲ. 2 ತಿಂಗಳುಗಳ ಕಾಲ ಜನ ಲಾಕ್ಡೌನ್, ಜನತಾಕಪ್ರ್ಯೂ ಇವುಗಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ ಅಂದು ದುಡಿದು ಅಂದೇ ತಿನ್ನುವ ಜನರ ಬದುಕು ಬೀದಿಗೆ ಬಿದ್ದಿದೆ ಇಂತಹ ಸಂಕಷ್ಟದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಈ ಹಿಂದೆ ಮಾಡಿದ ನಿರ್ಣಯದಿಂದ ಮಹಾನಗರದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು. ದಾವಣಗೆರೆ...
ದಾವಣಗರೆ

ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19ಗೆ ಹದಿನೈದು ಔಟ್ ಪುಟ್ ಆದರೆ, ಹನ್ನೊಂದು ಹೊಸ ಪ್ರಕರಣಗಳು ದಾಖಲು

ದಾವಣಗೆರೆ: ಜಿಲ್ಲೆಯಲ್ಲಿ ಇಂದು 11 ಹೊಸ ಕೊರೋನ ಪಾಸಿಡಿವ್ ಪ್ರಕರಣಗಳು ವರದಿಯಾಗಿದ್ದು, ಇವರೆಲ್ಲರೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿ ಸಂಖ್ಯೆ-2208 ಇವರು 47 ವರ್ಷದ ಮಹಿಳೆಯಾಗಿದ್ದು ತೀವ್ರ ಸ್ವರೂಪದ ಉಸಿರಾಟದ ತೊಂದೆರೆಯಿಂದ ಬಳಲುತ್ತಿರುವ ಪ್ರಕರಣದವರಾಗಿದ್ದರು. ಹಾಗೂ ರೋಗಿ ಸಂಖ್ಯೆ 2257, ಇವರು 28 ವರ್ಷದ ಮಹಿಳಾ ರೋಗಿಯಾಗಿದ್ದು 933 ರ ಸಂಪರ್ಕಿತರಿಂದಾಗಿದ್ದಾರೆ. 2274 ರ ರೋಗಿಯು ಶೀತ ಜ್ವರದಿಂದ ಬಳಲುತ್ತಿರುವ ಪ್ರಕರಣದವಾಗಿದ್ದರು ಹೀಗೆ ಒಟ್ಟು 15 ಜನ ಕೊರೋನಾ ಮಹಾಮಾರಿಯಿಂದ ಬಚಾವ್ ಆಗಿ ಹೊರ ಬಂದಿದ್ದಾರೆ. ಅವರಿಗೆ ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಎಸ್ಪಿ ಸಾಹೇಬರು ಸೇರಿ ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ. ಆದರೆ ದುರಾದೃಷ್ಠವಶಾತ್ ಜಿಲ್ಲೆಯಲ್ಲಿ ಮತ್ತೆ ಹೊಸದಾಗಿ ಹನ್ನೊಂದು ಹೊಸ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಪೊಲೀಸ್ ಇಲಾಖೆಯ ಹೆಡ್ ಕಾನ್ಸಟೇಬಲ್ ಗೂ ಕೊರೋನಾ ಪಾಸಿಟಿವ್ ಬಂದಿರುವುದು ವಿಶೇಷವಾಗಿದೆ. ಒಟ್ಟು ಜಿಲ್ಲೆಯಲ್ಲಿ 136 ಪ್ರಕರಣಗಳಿದ್ದು ಅವುಗಳ ಪೈಕಿ...
ದಾವಣಗರೆಪ್ರಮುಖ ಸುದ್ದಿಗಳು

ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಯಿಸಲು 10 ಸಾವಿರದಿಂದ 40 ಸಾವಿರ ಲಂಚ; ಮಾಯಾಕೊಂಡ ಠಾಣೆಯಲ್ಲಿ ಸಾರ್ವಜನಿಕರಿಂದ ದೂರು

ಅಹಿಂದ ವರ್ಗಗಳ ಕಲ್ಯಾಣದ ಸದುದ್ಧೇಶದಿಂದ 25 ವರ್ಷಗಳ ಹಿಂದೆ ಜಾರಿಗೊಳಿಸಿರುವ ಗಂಗಾ ಕಲ್ಯಾಣ ಯೋಜನೆಯು ಭೌತಿಕವಾಗಿ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿರುವ ಈ ಕಾರ್ಯಕ್ರಮವು ಕೇವಲ ರಾಜಕಾರಣಿಗಳ, ಅಧಿಕಾರಿಗಳ, ಮಧ್ಯವರ್ತಿಗಳ ಹಾಗೂ ಗುತ್ತಿಗೆದಾರರ ಕಪಿಮುಷ್ಠಿಯಲ್ಲಿ ಸಿಲುಕಿ ನಿಜವಾದ ಫಲಾನುಭವಿಗಳಿಗೆ ಸಿಗದೆ ಅದೋಗತಿಗೆ ಹಿಡಿದಿದೆ. ಶಾಸಕರು ಇಲ್ಲದ ಸಮಿತಿಯನ್ನು ರಚಿಸಿ, ನೈಜ ಫಲಾನುಭವಿಗಳನ್ನು ಆಯ್ಕೆ ಮಾಡದೆ, ತಮ್ಮ ಕಾರ್ಯಕರ್ತರು ಹಾಗೂ ಮಧ್ಯವರ್ತಿಗಳು ತರುವ ಪಟ್ಟಿಯನ್ನು ಆಯ್ಕೆ ಮಾಡಿ, ತಮ್ಮ ಕರ್ತವ್ಯದಲ್ಲಿ ಲೋಪವೆಸಗುತ್ತಿದ್ದಾರೆ. ಅರಣ್ಯವಾಸಿ, ಆದಿವಾಸಿಗಳು, ಬುಡಕಟ್ಟು ಜನಾಂಗ, ಪರಿಶಿಷ್ಟ ಜಾತಿ & ಪಂಗಡದ ಜನರಿಗೆ ಇದರ ಉಪಯೋಗವನ್ನು ತಲುಪಿಸಬೇಕಾದ ಅಧಿಕಾರಿಗಳು, ಹಣದ ಆಮೀಷಕ್ಕೆ ಒಳಗಾಗಿ ಮಧ್ಯವರ್ತಿಗಳಿಂದ, ರಾಜಕಾರಣಿಗಳಿಂದ ಪ್ರೇರಿತರಾಗಿ, ಕೇವಲ ಬಲಿಷ್ಠ ವ್ಯೆಕ್ತಿಗಳಿಗೆ ಮಾತ್ರ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲು ಮಂಜೂರು ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ದಾವಣಗೆರೆ ಜಿಲ್ಲೆಯ ಮಾಯಕೊಂಡ...
ದಾವಣಗರೆ

ದಾವಣಗೆರೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಂದುಗಳ ಬಗ್ಗೆ ಕೋಮುಗಲಭೆಯ ಸೃಷ್ಠಿಸಿ, ಬೆದರಿಕೆ ಹಾಕಿದ್ದವರ ಬಂಧನ

ದಾವಣಗೆರೆ, ಮೇ 18: ಕೋಮು ದ್ವೇಷ ಹರಡುವ ವಿಡಿಯೋ ಒಂದು ದಾವಣಗೆರೆ ನಗರದಲ್ಲಿ ಶನಿವಾರ ವೈರಲ್ ಆಗಿತ್ತು. ಈ ಸಂಬಂಧ ಅಶಾಂತಿ ವಾತಾವರಣ ಸೃಷ್ಠಿಯ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಯ್ಯದ್ ಮೊಹಮ್ಮದ್ (24), ಫಯಾಜ್ ಅಹ್ಮದ್ (32) ಎಂಬ ಇಬ್ಬರು ಯುವಕರನ್ನು ಕೆಟಿಜೆ ನಗರ ಪಿಎಸ್ಐ ವೀರೇಶ್ ನೇತೃತ್ವದ ತಂಡ ಬಂಧಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. ಕೆಲವು ಮುಸ್ಲಿಂ ಯುವಕರು ದಾವಣಗೆರೆ ನಗರದ ಎವಿಕೆ ರಸ್ತೆಯಲ್ಲಿರುವ ಬಿ.ಎಸ್ ಚನ್ನಬಸಪ್ಪ ಬಟ್ಟೆ ಅಂಗಡಿಯಲ್ಲಿ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ಖರೀದಿಸಿ ಹೊರ ಬರುವಾಗ ಅದೇ ಕೋಮಿನ ಮಹಿಳೆಯರನ್ನು ನಡು ರಸ್ತೆಯಲ್ಲೇ ತಡೆದು ಹೊಸ ಬಟ್ಟೆಯ ಕೇಸರಿ ಬ್ಯಾಗ್ ಕಸಿದುಕೊಂಡು ಆ ಬ್ಯಾಗ್ ನಿಂದ ಹೊಸ ಬಟ್ಟೆ ಬೇರ್ಪಡಿಸಿದ್ದಾರೆ. ಅಂಗಡಿಯಿಂದ ಹೊಸ ಬಟ್ಟೆಗಳನ್ನು ಖರೀದಿಸಬಾರದೆಂದು ಸಮಾಜದ ಮುಖಂಡರು ಹೇಳಿಲ್ವಾ? ಏತಕ್ಕಾಗಿ ಬಟ್ಟೆ...
ದಾವಣಗರೆ

ಕಡಿಮೆಯಾಗುತ್ತಾ ಸಾಗಿದೆ ದಾವಣಗೆರೆಯಲ್ಲಿ ಕೋರೊನಾ ಕೇಸ್

ದಾವಣಗೆರೆ: ಮಹಾಮಾರಿ ಕೋರೊನಾ ವಿಶ್ವಾದ್ಯಾಂತ ನಡುಕ ಸೃಷ್ಟಿಮಾಡಿದ ದೇಶದ ಆರ್ಥಿಕ ಸ್ಥತಿಯನ್ನು ತಲೆಕೆಳಗಾಗುವಂತೆ ಮಾಡಿದೆ. ರಾಜ್ಯದಲ್ಲಿ 30 ಕ್ಕು ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಕೋರೊನಾ ಈಗಾಗಲೇ ಸಾವಿರ ಗಡಿ ದಾಟಿದೆ. ಒಂದು ಕಡೆ ಕೊರೋನಾ ಸೊಂಕು ಕಾಣಿಸಿಕೊಳ್ಳದ ಪ್ರದೇಶಗಳಿಗೆ ಒಮ್ಮೆಲೆ ಹೆಜ್ಜೆ ಇಡುತ್ತಿರುವ ಕೋರೊನಾ ಗ್ರೀನ್ ಜೋನ್ ನಲ್ಲಿದ್ದ ಮಧ್ಯಕರ್ನಾಟಕ ದಾವಣಗೆರೆಗೆ ಒಮ್ಮೆಲೆ 30 ಸೊಂಕಿತರನ್ನು ಸೃಷ್ಟಿಸಿ ಸದ್ಯ ಸೆಂಚುರಿ ಸನಿಹದಲ್ಲಿದೆ. ಕಡಿಮೆಯಾಗುತ್ತಾ ಸಾಗಿದೆ ದಾವಣಗೆರೆಯಲ್ಲಿ ಕೋರೊನಾ ಗ್ರೀನ್ ಜೋನ್ ನಲ್ಲಿದ್ದ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಕೋರೊನಾ ಸೊಂಕಿತರ ಸಂಖ್ಯೆ ಸದ್ಯ ಕಡಿಮೆಯಾಗುತ್ತಾ ಸಾಗಿದೆ ಎಂದು ತಿಳಿದುಬಂದಿದೆ. ಒಂದೇ ದಿನ 8,20,14,6 ಹೀಗೆ ಹೆಚ್ಚಾಗುತ್ತಾ ಸಾಗಿದ್ದ ಕೋರೊನಾ ಕೇಸ್ ಮೂರು ದಿನಗಳಿಂದ ಕಡಿಮೆಯಾಗುತ್ತಾ ಸಾಗಿದೆ ಎಂದು ಹೇಳಬಹುದು. ಮೇ 15 ರಂದು ಒಂದು ಕೇಸ್ ದಾವಣಗೆರೆ ಕಂಡು ಬರದಿದ್ದರು 16 ರಂದು ಒಂದು ಕೇಸ್ ಮಾತ್ರ...
ದಾವಣಗರೆ

ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ವತಿಯಿಂದ ರಾಜ್ಯ ಉಪಾಧ್ಯಕ್ಷರಾದ ಎಲ್.ಎಮ್.ಹೆಚ್ ರವರಿಂದ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ದಾವಣಗೆರೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮತ್ತು ನೇರ ಪಾವತಿ ಪೌರಕಾರ್ಮಿಕರಿಗೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಮ್. ಹನುಮಂತಪ್ಪ ಆಹಾರ ಕಿಟ್ ವಿತರಿಸಿದರು.ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ಪೌರ ಕಾರ್ಮಿಕರಿಗೆ ಸಂಘದ ವತಿಯಿಂದ ಅಗತ್ಯವಿರುವ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಪಾಲಿಕೆ ಪೌರ ಕಾರ್ಮಿಕರ ಕಚೇರಿಯಲ್ಲಿ ವಿತರಿಸಲಾಯಿತು. ಇದಕ್ಕೂ ಮುನ್ನ ಬಾಪೂಜಿ ವಿದ್ಯಾ ಸಂಸ್ಥೆಯ ನಿರ್ದೇಶಕರು ಶ್ರೀಯುತ ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಕೇತಿಕವಾಗಿ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಜನಕ್ಕೆ ಸಹಾಯ ಮಾಡಲು ಸ್ಥಿತಿವಂತರು ಮುಂದೆ ಬರಬೇಕು ಎಂದು ಶ್ರೀಮತಿ ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ಕರೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯ ಆರೋಗ್ಯ ಪರಿವೀಕ್ಷಕ ಡಾಕ್ಟರ್ ಸಂತೋಷ್ ಕುಮಾರ್, ಸುನೀಲ್ ಕುಮಾರ್ ಹಾಗೂ ಮಹಾನಗರ ಪಾಲಿಕೆ ಸದಸ್ಯ ಸುರೇಶ್...
ದಾವಣಗರೆ

ದಾವಣಗೆರೆಯಲ್ಲಿ ಟ್ರಾಫಿಕ್ ಪೊಲೀಸಿಗೆ ಕೊರೊನಾ ಸೋಂಕು

ದಾವಣಗೆರೆ: ದಾವಣಗೆರೆಯಲ್ಲಿ ಕೊರೋನಾ ನರ್ತನ ಮುಂದುವರೆದಿದೆ. ಇಂದು ಬಂದ ವರದಿಯಲ್ಲಿ ಜಿಲ್ಲೆಯ ಪೊಲೀಸರಿಗೊಬ್ಬರಿಗೆ ಕೊರೊನಾ ಇರುವುದು ದೃಡ ಪಟ್ಟಿದೆ. ಕಂಟೈನ್ ಮೈನ್ ಝೋನ್ ನಲ್ಲಿ ಕಾರ್ಯ ನಿರ್ವಹಿಸಿದ್ದ ಒಬ್ಬ ಟ್ರಾಫಿಕ್ ಪೊಲೀಸ್ ರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ನಿನ್ನೆ ರಾತ್ರಿ ಪೊಲೀಸ್ ಗೆ ಸೋಂಕು ಧೃಪಟ್ಟಿದೆ. ಸೀಲ್ ಡೌನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಪೇದೆಗೆ  ಇದೀಗ ಸೋಂಕು ಪತ್ತೆಯಾಗಿದ್ದು,  ಪೊಲೀಸ್ ಪೇದೆ ಸಂಪರ್ಕದಲ್ಲಿದ್ದವರಲ್ಲಿದ್ದವರಿಗೆ ಆತಂಕ ಉಂಟುಮಾಡಿದೆ. ಜಿಲ್ಲೆಯಲ್ಲಿ ಒಟ್ಟು 86 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದು 88 ಸಕ್ರಿಯ ಕೇಸ್ ಗಳು ಜಿಲ್ಲೆಯಲ್ಲಿವೆ. ಇನ್ನು ಕೋರೊನಾ ತಾಂಡವ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ಸ್ಥಳೀಯರು ಪರಿತಪಿಸುತ್ತಿದ್ದಾರೆ. ವರದಿ:ರಾಮಪ್ರಸಾದ್ ಸಹ ಸಂಪಾದಕರು...
ದಾವಣಗರೆ

ಜುಲೈನಲ್ಲಿ ಪದವಿ ಪರೀಕ್ಷೆ; ದಾವಣಗೆರೆ ವಿವಿ ಕುಲ ಸಚಿವರಿಂದ ಸ್ಪಷ್ಟನೆ

ದಾವಣಗೆರೆ: ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿ ಮತ್ತು ಸಲಹೆಗಳನ್ನು ಆಧರಿಸಿ ಜುಲೈನಲ್ಲಿ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು ದಾವಣಗೆರೆ ವಿಶ್ವವಿದ್ಯಾಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಭರವಸೆ ನೀಡಿದರು. ದಾವಣಗೆರೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅಧ್ಯಕ್ಷರು, ಸಂಯೋಜನಾಧಿಕಾರಿಗಳು, ಸಿಂಡಿಕೇಟ್ ಸದಸ್ಯರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ಎಲ್ಲರ ಸಲಹೆ ಸಂಗ್ರಹಿಸಿದ ನಂತರ ಮಾತನಾಡಿದರು. ‘ಜೂನ್ ತಿಂಗಳಲ್ಲಿ ಮೂರು ವಾರ ರಜಾರಹಿತ ನಿರಂತರ ತರಗತಿ ನಡೆಸಿ ಬಾಕಿ ಇರುವ ಪಠ್ಯಕ್ರಮ ಪೂರ್ಣಗೊಳಿಸಿ, ಪಾಠದ ಪುನರಾವಲೋಕನ ಮಾಡಲಾಗುವುದು. ಇದೇ ಅವಧಿಯಲ್ಲಿ ಪ್ರಾಯೋಗಿಕ ತರಬೇತಿ, ಕಿರು ಸಂಶೋಧನಾ ವರದಿ, ಪ್ರೊಜೆಕ್ಟ್, ಆಂತರಿಕ ಪರೀಕ್ಷೆ, ಪ್ರಾಯೋಗಿಕ ಅಧ್ಯಯನ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಒಂದು ವಾರ ಪರೀಕ್ಷಾ ಸಿದ್ಧತೆಗೆ ಅವಕಾಶ ನೀಡಿ, ಜುಲೈನಲ್ಲಿ ಪರೀಕ್ಷೆ...
ದಾವಣಗರೆ

ಆಹಾರ ಕಿಟ್ ಅನ್ನೂ ಮಾರುತ್ತಿದ್ದಾರಾ…? ದಾವಣಗೆರೆಯಲ್ಲಿ ಹೀಗೊಂದು ಜಾಲ.

ದಾವಣಗೆರೆ ,ಮೇ 11: ಇಲ್ಲಿನ ಕೆ.ಆರ್‌.ರಸ್ತೆಯ ಮುದ್ದೇಗೌಡರ ಶಾಲೆಯ ಎದುರು ಇರುವ ಗೋದಾಮಿನಲ್ಲಿ ಸಂಗ್ರಹಿಸಿದ್ದ 250 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ದಾಳಿ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಕಿಟ್‌ಗಳ ಮಾರಾಟ ಶಂಕೆ: ಲಾಕ್‌ಡೌನ್‌ನಿಂದಾಗಿ ವಿತರಿಸಿರುವ ಕಿಟ್‌ಗಳ ಆಹಾರ ಧಾನ್ಯಗಳನ್ನೂ ಮಾರಾಟ ಮಾಡಿರುವ ಶಂಕೆ ಇದೇ ವೇಳೆ ವ್ಯಕ್ತವಾಗಿದೆ. ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ವೇಳೆ ಈ ಕಿಟ್‌ಗಳು ಪತ್ತೆಯಾಗಿವೆ. ಬಡವರು, ಕೂಲಿ ಕಾರ್ಮಿಕರು ಊಟವಿಲ್ಲದೇ ಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ, ದಾನಿಗಳು ಹಾಗೂ ನಗರಪಾಲಿಕೆ ಸದಸ್ಯರು ಆಹಾರದ ಕಿಟ್‌ಗಳನ್ನು ವಿತರಿಸಿದ್ದು, ಕೆಲವರು ಅವುಗಳನ್ನು ಮಾರಾಟ ಮಾಡಿದ್ದಾರೆ. ಬಡವರಿಂದ ಕಡಿಮೆ ಬೆಲೆಗೆ ಖರೀದಿಸಿ...
1 2
Page 2 of 2
error: Content is protected !!