ದಾವಣಗರೆ

ದಾವಣಗರೆ

ಸ್ಮಾರ್ಟ್ ಸಿಟಿಯ ವರ್ಸ್ಟ್ ಆಡಳಿತ (ದೇವರು ನೀರು ಕೊಟ್ಟರು ಪಾಲಿಕೆ ಕೊಡುತ್ತಿಲ್ಲ)

ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಡಳಿತದಲ್ಲಿ ಮಾತ್ರ ವರ್ಸ್ಟ್ ಸಿಟಿ ಎಂಬಂತಾಗಿದೆ, ನಾಗರಿಕರಿಗೆ ಅತಿ ಮುಖ್ಯವಾಗಿ ಬೇಕಾಗಿರುವ ನೀರಿನ ಸೌಕರ್ಯದ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಳ್ಳದ ಪಾಲಿಕೆ ವಿರುದ್ಧ ವಿಪಕ್ಷ ನಾಯಕ ಎ.ನಾಗರಾಜ್ ಹಾಗೂ ಕಾಂಗ್ರೆಸ್ ಪಾಲಿಕೆಯ ಸದಸ್ಯರು ದೊಡ್ಡಬಾತಿ ಪಂಪಹೌಸ್ ಗೆ ಭೇಟಿ ನೀಡಿ ಅಲ್ಲಿರುವ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಹಳೆಯ ದಾವಣಗೆರೆ ಭಾಗಕ್ಕೆ ಹಾಗೂ ಹೊಸ ದಾವಣಗೆರೆಯ ಕೆಲವು ವಾರ್ಡುಗಳಿಗೆ ರಾಜನಹಳ್ಳಿ ಪಂಪಹೌಸ್ ನಿಂದ ನೀರು ಬರುತ್ತಿತ್ತು, ಅಲ್ಲಿರುವ 1000 hp 2, 500 hp 3 ಮೋಟಾರುಗಳ ಪೈಕಿ 500 hp1 ಮೋಟರ್ ಹೊರತುಪಡಿಸಿ ಇನ್ನುಳಿದ 4 ಮೋಟಾರ್ ಗಳು ರಿಪೇರಿಗೆ ಬಂದಿವೆ, ದೊಡ್ಡ ಬಾತಿಯ ಪಂಪಹೌಸ್ ನಲ್ಲಿ 550 hp 5 ಮೋಟಾರುಗಳ ಪೈಕಿ 5 ಕೆಟ್ಟು ನಿಂತಿವೆ, ಅದರಲ್ಲಿ ಎರಡು ಮೋಟಾರುಗಳು ನಾಲ್ಕು ತಿಂಗಳಿನಿಂದ ರಿಪೇರಿಗೆ ಬಂದಿದ್ದು ಅವುಗಳನ್ನು...
ದಾವಣಗರೆಪ್ರಮುಖ ಸುದ್ದಿಗಳು

ವರುಷಗಳೇ ಕಳೆದರೂ ಶಾಸಕರಿಗಾಗಲೀ.. ಸದಸ್ಯರಿಗಾಗಲೀ..ಮಹಾಪೌರರಿಗಾಗಲೀ ಕಣ್ಣಿಗೆ ಬೀಳದಿರುವ 41ನೇ ವಾರ್ಡಿನ ಪಾರ್ಕುಗಳು, ಸಿಗದ ಸೌಭಾಗ್ಯಕ್ಕಾಗಿ ಅಭಿವೃದ್ಧಿ ಹೆಸರಲ್ಲಿ ಲಕ್ಷ-ಲಕ್ಷ ಹಣ ಮಾತ್ರ ಗುಳುಂ ಸ್ವಾಹಃ ; ಶಾಸಕರಾಗಿ ಏನ್ ಪ್ರಯೋಜನ ಸ್ವಾಮಿ..???

ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿಯಾಗುತ್ತಿರುವ ದಾವಣಗೆರೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಪಾಲಿಕೆ ವ್ಯಾಪ್ತಿಯ ಪಾರ್ಕ್ಗಳ ಅಭಿವೃದ್ಧಿಗೆ ಅಮೃತ್ ಸಿಟಿ ಯೋಜನೆಯಡಿ ಕೋಟಿ ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದೆ. ಆದರೆ, ಪಾಲಿಕೆಯ ನಿರ್ಲಕ್ಷ್ಯದಿಂದ ಕೆಲವು ವಾರ್ಡ್ ಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಗರ ಬಡಿದಂತಾಗಿದೆ. ಕೇಂದ್ರ ಸರ್ಕಾರ ದಾವಣಗೆರೆಯ ಪಾರ್ಕ್ಗಳಿಗೆ ಆಧುನಿಕ ಸ್ಪರ್ಷ ನೀಡುವ ಉದ್ದೇಶದಿಂದ ಅಮೃತ್ ಸಿಟಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ವರ್ಷವೇ ಕಳೆದಿವೆ. ಆದರೆ, ಮಹಾನಗರ ಪಾಲಿಕೆ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು , ಆಯುಕ್ತರು ಮಾತ್ರ ಕೆಲವು ಪಾರ್ಕ್ ಗಳ ಅಭಿವೃದ್ಧಿಯನ್ನೇ ಮರೆತೇ ಬಿಟ್ಟಿದ್ದಾರೆ. ಅದರಲ್ಲಿಯೂ 41ನೇ ವಾರ್ಡಿಗೆ ಸಂಬಂಧಿಸಿದ ಲೋಕಿಕೆರೆ ರಸ್ತೆಗೆ ಹೊಂದಿಕೊಂಡಿರುವ ಮಾನ್ಯ ಶಾಸಕರ ಹೆಸರನ್ನೇ ಇಟ್ಟುಕೊಂಡಿರುವ ರವೀಂದ್ರನಾಥ ನಗರದಲ್ಲಿರುವ ಎರಡು ಪಾರ್ಕ್ ಗಳು ಅಭಿವೃದ್ಧಿಯ ಕಾಣದೆ ದುರಸ್ಥಿಯ ಅಂಚಿನಲ್ಲಿ ಸಿಲುಕಿವೆ. ಇಲ್ಲಿಯ...
ದಾವಣಗರೆಪ್ರಮುಖ ಸುದ್ದಿಗಳು

ಬಸ್ ಸಂಚಾರವಿಲ್ಲದ ಪರದಾಡುತ್ತಿರುವ ಶಿಕ್ಷಕರು ; ಸಹಾಯಹಸ್ತ ಚಾಚುವರೇ ಜಿಲ್ಲಾಧಿಕಾರಿಗಳು

ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಶಾಲೆಗಳನ್ನು ಕೂಡ ಪ್ರಾರಂಭಿಸುವ ಚಿಂತನೆ ನಡೆಸಿದೆ. ಶಾಲೆಯ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಲು ಆದೇಶ ನೀಡಿರುವ ಬೆನ್ನಲ್ಲೇ ಗ್ರಾಮೀಣ ಭಾಗದ ಶಿಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಗರ ಪ್ರದೇಶಗಳತ್ತ ಬಸ್ ಸಂಚರಿಸಿದರು ಪ್ರಯಾಣಿಕರಿಲ್ಲದೆ ಬಸ್ಸುಗಳು ನಿಂತಲ್ಲೇ ನಿಂತಿದ್ದರೆ, ಗ್ರಾಮೀಣ ಭಾಗದತ್ತ ಪ್ರಯಾಣಿಸಲು ಸಾರಿಗೆ ಸೌಕರ್ಯವಿಲ್ಲದೇ ಪ್ರತಿದಿನ ಪರದಾಡುವ ಸ್ಥಿತಿ ಎದುರಾಗಿರುವುದು ಇಂದು ನಿನ್ನೆಯದಲ್ಲ. ಆದರೆ ಲಾಕ್‌ಡೌನ್ ಆದ ಬಳಿಕ ಈ ಸಮಸ್ಯೆ ಉಲ್ಭಣಗೊಂಡಿದೆ ಎನ್ನುತ್ತಾರೆ ಗ್ರಾಮೀಣ ಭಾಗದ ಶಿಕ್ಷಕರು. ದಾವಣಗೆರೆಯಿಂದ ನೂರಾರು ಶಿಕ್ಷಕರು ಗ್ರಾಮಾಂತರ ಪ್ರದೇಶಗಳಿಗೆ ಪ್ರತಿನಿತ್ಯ ಸಂಚಾರಿಸುತ್ತಾರೆ. ಜಿಲ್ಲಾ ಕೇಂದ್ರದಿAದ ನಲ್ವತ್ತು ಕಿ.ಮೀ ದೂರದಲ್ಲಿ ಶಾಲೆಗಳು ಇದ್ದು ಅಲ್ಲಿಗೆ ಹೋಗಿ ಬರಲು ಯಾವುದೇ ವಾಹನದ ಸೌಕರ್ಯವಿಲ್ಲ. ಅದರಲ್ಲೂ ಮಹಿಳೆ ಶಿಕ್ಷಕಿಯರಂತೂ ಪ್ರತಿದಿನವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಮರಿಕುಂಟೆ, ಕಮಲಪುರ, ಪಲ್ಲಾಘಟ್ಟೆ, ದಿದ್ದಿಗೆ, ಕೆಂಚಮನಾಪ್ತಿಹಳ್ಳಿ,...
ದಾವಣಗರೆಪ್ರಮುಖ ಸುದ್ದಿಗಳು

ರೈತರನ್ನು ನಿರ್ಲಕ್ಷಿಸಿದ ಸರ್ಕಾರ : ಲಕ್ಷಗಟ್ಟಲೇ ಬೆಳೆ ನಷ್ಟ

ಲಾಕ್‌ಡೌನ್ ಆದ ಪರಿಣಾಮ ಮಾರುಕಟ್ಟೆಯಿಲ್ಲದೆ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರವೇನೋ ಬೆಳೆಹಾನಿ ಪರಿಹರ ನೀಡಿದೆ. ಫಸಲ್ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ರೈತರ ಖಾತೆಗೆ ಜಮಾವಣೆ ಆಗಿದೆ. ಆದರೆ ಅದರಲ್ಲಿ ಒಂದು ಬಿಡಿಗಾಸು ಕೂಡ ರೈತರ ಕೈಗೆ ತಲುಪಿಲ್ಲ. ಮೆಕ್ಕೆಜೋಳ, ಕಬ್ಬು ಮತ್ತಿತ್ತರ ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸದಾಗಿ ಸಿಹಿಕುಂಬಳ ಬೆಳೆಯುವ ಪ್ರಯತ್ನ ಮಾಡಲು ಹೋಗಿ ನಗರದ ಬಿ.ಕಲಪನಹಳ್ಳಿ ಗ್ರಾಮದ ಬಸವನಗೌಡ ಎಂಬ ರೈತ ನಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪಾವಧಿ ಬೆಳೆ, ಕೆಲಸ ಕಡಿಮೆ, ಹೆಚ್ಚು ಗೊಬ್ಬರ, ಕೀಟನಾಶಕ ಅಗತ್ಯ ಇಲ್ಲ, ಲಾಭ ಹೆಚ್ಚು ಎನ್ನುವ ಕೆಲವರ ಮಾತನ್ನು ನಂಬಿ ಹೊಲದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಮನುಷ್ಯನ ದೇಹಕ್ಕೆ ಅಗತ್ಯವಾದ ಪೊಟಾಷಿಯಂ ಅಂಶ ತುಂಬಿರುವ, ಹೆಚ್ಚಾಗಿ ಸಾಂಬಾರ್ ಮಾಡಲು ಬಳಸುವ ಕುಂಬಳಕ್ಕೆ ಸಾಮಾನ್ಯವಾಗಿ ಬೇಡಿಕೆ...
ದಾವಣಗರೆಪ್ರಮುಖ ಸುದ್ದಿಗಳು

ಮೆಕ್ಕೆಜೋಳದ ಖರೀದಿ ಕೇಂದ್ರವಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಅನ್ನದಾತರು

-ರಾಮ ಪ್ರಸಾದ್ ಉಪ ಸಂಪಾದಕರು ಕದಂಬ ಕ್ರಾಂತಿ ಕೋರೊನಾದ ನಡುವೆ ಕಷ್ಟಪಟ್ಟು ರೈತರು ಭತ್ತ ಹಾಗೂ ಮೆಕ್ಕೆಜೋಳವನ್ನು ಬೆಳೆದಿದ್ದಾರೆ. ಕೋರೊನಾ ಲಾಕ್‍ಡೌನ್ ಮುಕ್ತಾಯದ ಹೊಸ್ತಿನಲ್ಲಿ ಬೆಳೆದ ಬೆಳೆಗಳನ್ನು ಮಾರಿ ಕೊಂಚ ನಿಟ್ಟುಸಿರುವ ಬಿಡುವ ಹೊಸ್ತಿನಲ್ಲಿದ್ದಾರೆ. ಆದರೆ ರೈತರಿಗೆ ಖರೀದಿ ಕೇಂದ್ರದ ಸಮಸ್ಯೆಯಾಗಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಜಿಲ್ಲಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶಗಳಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದು ಮಾರಲಾಗದೆ ಕಂಗೆಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ ಕೃಷಿ ಮತ್ತು ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಖರೀದಿ ಕೇಂದ್ರವನ್ನು ತೆರೆದರೆ ರೈತರಿಗೆ ಅನುಕೂಲವಾಗಲಿದೆ. ಕೋರೊನಾ ನಡುವೆ ಬೆಳೆಯನ್ನು ಮಾರಿ ಸ್ವಲ್ಪ ನಿಟ್ಟುಸಿರುವ ಬಿಡಬಹುದು ಎನ್ನುವುದು ರೈತರ ಅಭಿಪ್ರಾಯವಾಗಿದೆ. ಖರೀದಿ ಕೇಂದ್ರ ತೆರೆಯಿರಿ ರೈತರ ಸಮಸ್ಯೆ ಬಗೆಹರಿಸಿ:ಜಿಲ್ಲಾದ್ಯಾಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಭತ್ತ ಮತ್ತು ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಈಗಾಲೇ ಅನೇಕ ಕಡೆ ಕಟಾವು ಸಹಾ ಮಾಡಲಾಗಿದ್ದು ಇನ್ನು ಕೆಲವು...
ದಾವಣಗರೆಪ್ರಮುಖ ಸುದ್ದಿಗಳು

ದಾವಣಗೆರೆನಲ್ಲಿ ಆಂಬ್ಯುಲೆನ್ಸ್ ಚಾಲಕ ಹಸೇನ್ ರವರಿಗೆ ಸನ್ಮಾನ

ದಾವಣಗೆರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ದಕ್ಷಿಣ ವಲಯದಲ್ಲಿ ಉಚಿತವಾಗಿ 70 ದಿನದಲ್ಲಿ 220 ಜನ ಗರ್ಭಿಣಿ ಮಹಿಳೆಯರಿಗೆ ಮತ್ತು ಹಾರ್ಟ್ ರೋಗಿಗಳಿಗೆ ಆಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಹಸೇನ್ ರವರಿಗೆ ದಾವಣಗೆರೆ ಹಾಕಿ ಗ್ರೂಪ್ ವತಿಯಿಂದ ಸನ್ಮಾನಿಸಿದ್ದಾರೆ. ಜಿಲ್ಲೆಯಲ್ಲಿ ಈ ರೀತಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಹಸೇನ್ ಅವರಿಗೆ ನಮ್ಮ ಪತ್ರಿಕೆಯ ಕಡೆಯಿಂದ ಅಭಿನಂದನೆಗಳ ಸಲ್ಲಿಸುತ್ತೇವೆ....
ದಾವಣಗರೆಪ್ರಮುಖ ಸುದ್ದಿಗಳು

ಕೊರೊನಾ ವಾರ್ಡ್ನಲ್ಲಿ ಕಾರ್ಯನಿರ್ವಹಿಸಿದ್ದ ಮೂವರಿಗೆ ಕೊರೊನಾ!

ದಾವಣಗೆರೆ- ದಾವಣಗೆರೆಯಲ್ಲಿ ಇಂದು ಆರು ಕೊರೊನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 156ಕ್ಕೇರಿದೆ. ಇವರಲ್ಲಿ 17 ಮಂದಿ ಇಂದು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 121 ಮಂದಿ ಗುಣಮುಖರಾಗಿದ್ದು, ಈಗ ಕೇವಲ 31 ಸಕ್ರಿಯ ಪ್ರಕರಣಗಳಿವೆ. ಪೆ.-1483, ಪೆ.-1488, ಪೆ.-1656, ಪೆ.-1657, ಪೆ.-1658, ಪೆ.-1808, ಪೆ.-1809, ಪೆ.-1852, ಪೆ.-1963, ಪೆ.-1964, ಪೆ.-2274, ಪೆ.-2275, ಪೆ.-2277, ಪೆ.-2278, ಪೆ.-2281, ಪೆ.-1992, ಪೆ.-625 ಇಂದು ಬಿಡುಗಡೆ ಹೊಂದಿದ್ದಾರೆ. ಇಂದು ದಾಖಲಾದ ಆರು ಪ್ರಕರಣಗಳಲ್ಲಿ, ಕೊವಿಡ್19 ಸೋಂಕಿತರ ಪ್ರತ್ಯೇಕ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ತಗುಲಿದೆ.ಒಬ್ಬರಿಗೆ ರೋಗಿ ಸಂಖ್ಯೆ 1251ರಿಂದ, ಒಬ್ಬರಿಗೆ ಸೋಂಕಿತ ಸಂಖ್ಯೆ-1852 ಸಂಪರ್ಕವಿದೆ ಹಾಗೂ ಮತ್ತೊಬ್ಬರಿಗೆ ಸೋಂ.ಸಂ-1378ರಿಂದ ಕೊರೊನಾ ಬಂದಿರುವುದಾಗಿ ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗೊದೆ. ರಾಜ್ಯದಲ್ಲಿ ಇಂದು ಒಂದೇ ದಿನ 299 ಪ್ರಕರಣ ದಾಖಲಾಗಿವೆ....
ದಾವಣಗರೆಪ್ರಮುಖ ಸುದ್ದಿಗಳು

ಕಿಡಿಗೇಡಿಗಳಿಂದ ಇಂದಿರಾ ಕ್ಯಾಂಟೀನ್ನ ಇಂದಿರಾ ಭಾವಚಿತ್ರಕ್ಕೆ ಮಸಿ ; ಡಿ ಬಸವರಾಜ್ ಖಂಡನೆ

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗ ಸರ್ಕಾರದ ವತಿಯಿಂದ ಬಡ ಬಗ್ಗರಿಗಾಗಿಯೆಂದೇ ಕ್ಯಾಂಟೀನ್ ಸ್ಥಾಪಿಸಲಾಯಿತು. ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟವನ್ನು ನೀಡುವ ಮೂಲಕ ಸಾಮಾನ್ಯ ಜನಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ರಾಜ್ಯಾದ್ಯಂತ ಕ್ಯಾಂಟೀನ್ ಸ್ಥಾಪಿಸಲಾಯಿತು. ಎಲ್ಲಾ ವಿರೋಧಗಳ ನಡುವೆ ಕ್ಯಾಂಟೀನ್ಗೆ ದಿವಗಂತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರು ಇಡುವ ಮೂಲಕ ಎಷ್ಟೋ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಸಹ ಅಕ್ಷರಶಃ ಸತ್ಯ. ಈ ನಡುವೆ ದಾವಣಗೆರೆಯಲ್ಲಿರುವ ಎರಡು ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಇಂದಿರಾಗಾಂಧಿ ಅವರ ಭಾವ ಚಿತ್ರಕ್ಕೆ ನಿನ್ನೆ ರಾತ್ರಿ ಕೆಲವು ಅಪರಿಚಿತರು ಮಸಿ ಬಳೆದ ಘಟನೆ ಜರುಗಿದೆ. ನಗರದ ಚಿಗಟೇರಿ ಆಸ್ಪತ್ರೆ ಆವರಣದ ಬಳಿ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಇರುವ ಇಂದಿರಾ ಕ್ಯಾಂಟೀನ್ನಲ್ಲಿ ಸ್ಥಾಪಿಸಿರುವ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ ಬಳಿಯಲಾಗಿದೆ. ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಮುಖಂಡ ಹಾಗೂ ರೇಷ್ಮೆ...
ದಾವಣಗರೆಪ್ರಮುಖ ಸುದ್ದಿಗಳು

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರೋಲ್ಲ ; ಶಾಸಕ ಎಸ್.ವಿ. ರಾಮಚಂದ್ರಪ್ಪ ಸ್ಪಷ್ಟನೆ

ದಾವಣಗೆರೆ: ಕಾಂಗ್ರೆಸ್ ಒಂದು ನಿರ್ನಾಮ ಆಗುತ್ತಿರುವ ಪಕ್ಷ ಅದಕ್ಕೆ ತಾವು ಸೇರ್ಪಡೆಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ ಅವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹಬ್ಬಿದ್ದ ಊಹಾಪೋಹಕ್ಕೆ ಇಂದು ತೆರೆ ಎಳೆದರು. ಅವರ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರುವಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ. ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗುವ ಮಾತೇ ಇಲ್ಲ. ಇದು ವಾಲ್ಮೀಕಿ ಗುರುಗಳ ಆಣೆಗೂ ಸತ್ಯ ಎಂದು ಪ್ರಮಾಣ ಮಾಡಿದರು. ಬಿಜೆಪಿಯಲ್ಲಿ ಏನೇ ಭಿನ್ನಾಭಿಪ್ರಾಯಗಳು ಬಂದರೂ ಅದನ್ನು ನಮ್ಮ ಹೈಕಮಾಂಡ್ ಸರಿ ಮಾಡುತ್ತದೆ. ನಮಗೆ ಯಡಿಯೂರಪ್ಪ ಅವರೇ ನಾಯಕರು ಅವರು ಹೇಳಿದಂತೆ ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ ಎಂದರು. ಈ ಸಮಯದಲ್ಲಿ ರಾಜಕೀಯ ಮಾಡಿದರೆ ಜನ ಕ್ಯಾಕರಿಸಿ ಉಗಿಯುತ್ತಾರೆ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಮೂರು ವರ್ಷ ರಾಜ್ಯಭಾರ ಮಾಡಿ ಮತ್ತೆ ನಾವೇ ಅಧಿಕಾರಕ್ಕೆ...
ದಾವಣಗರೆಪ್ರಮುಖ ಸುದ್ದಿಗಳು

ಮಹಿಳೆಯರಿಗೆ ಹಿಂದುಳಿದವರಿಗೆ ಗೌರವ ನೀಡುವುದನ್ನು ನಿಮ್ಮಿಂದ ಕಲಿಯುವ ಅವಶ್ಯಕತೆ ಇಲ್ಲ, ಬಾಡದ ಆನಂದರಾಜ್ಗೆ ತಿರುಗೇಟು ನೀಡಿದ ಮಾಜಿ ಮೇಯರ್ ಶ್ರೀಮತಿ ಅನಿತಾಬಾಯಿ ಮಾಲತೇಶ್

ದಾವಣಗೆರೆ: ಶೋಷಿತ ವರ್ಗದ ಅಧ್ಯಕ್ಷರು ಎಂದು ಹೇಳಿಕೊಳ್ಳುವ ಆನಂದರಾಜು ರವರೇ ದಿನೇಶ್ ಕೆ. ಶೆಟ್ಟಿಯವರು ಹೇಳಿರುವುದು ಉಪಮೇಯರ್ ಬಗ್ಗೆ ಹೊರತು, ಮಹಿಳೆ ಅಥವಾ ಶೋಷಿತವರ್ಗದ ಸಮಾಜದಿಂದ ಬಂದವರು ಎಂದು ಅಲ್ಲ ಎಂದು ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಮತ್ತು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ತಿರುಗೇಟು ನೀಡಿದ್ದಾರೆ. ದಿನೇಶ್ ಕೆ.ಶೆಟ್ಟಿರವರ ಹೇಳಿಕೆಗೆ ಮಾನ್ಯ ಉಪಮೇಯರ್ ಉತ್ತರಿಸುತ್ತಾರೆ, ನೀವು ಇದರಲ್ಲಿ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬರಬೇಡಿ.ಕಾಂಗ್ರೆಸ್ ಪಕ್ಷವೇ ಮಹಿಳೆಯರಿಗೆ ಮತ್ತು ಶೋಷಿತ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ಅವರ ಶ್ರೆಯೋಭಿವೃದ್ಧಿಗೆ ನಾಂದಿ ಹಾಡಿದೆ ಎಂದು ಆನಂದರಾಜ್ ತಿಳಿದುಕೊಳ್ಳಲಿ ಎಂದು ತಿಳಿಸಿದ್ದಾರೆ.             ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಂತ್ರಿಗಳ ಹಲವು ಸಭೆಗಳಲ್ಲಿ, ಕೋವಿಡ್ ಮೀಟಿಂಗ್ಗಳಿಗೆ ದಾವಣಗೆರೆ ಉಪಮೇಯರ್ ಅವರನ್ನು ಆಹ್ವಾನಿಸುತ್ತಿಲ್ಲ ಎಂದು ಹೇಳಿದ್ದಾರೆ ವಿನಹ, ಮಹಿಳೆಯೆಂದಾಗಲೀ ಅಥವಾ...
1 2
Page 1 of 2
error: Content is protected !!