ಅಂಕಣ

ಅಂಕಣ

ಡಿಜಿಟಲ್ ಪ್ರಪಂಚದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸರಳ ಕನ್ನಡ ಭಾಷೆಯಲ್ಲಿ “ಸಾಮವೇದ” ದ ವಿಶ್ಲೇಷಣೆ…ಭಾಗ ೧

ಕರ್ನಾಟಕ, ಹಿಂದೂಸ್ತಾನಿ ಹಾಗೂ ವಿಶ್ವ ಸಂಗೀತಕ್ಕೆ ಸಾಮವೇದವೇ ಮೂಲವೇ? ವಿಧ್ವಾನ್ ಕೆ. ಆರ್. ಮಂಜುನಾಥ ಶ್ರೌತಿಗಳು ಹಾಗೂ ವಿಧ್ವಾನ್ ಸುಕನ್ಯಾ ಪ್ರಭಾಕರ್ ಸನಾತನ ಹಿಂದುಗಳಾದ ನಮ್ಮ ಪೂರ್ವಜರು, ಧ್ವನಿಯನ್ನು ಬಳಸಿಕೊಂಡು ಬ್ರಹ್ಮಾಂಡದೊಂದಿಗೆ ಸ್ಪಂದಿಸುವ ತಂತ್ರಜ್ಞಾನವನ್ನು ನಮಗೆ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇರಬೇಕಲ್ಲವೇ? ನಾಲ್ಕು ವೇದ ಪ್ರಕಾರಗಳಲ್ಲಿ, ಗಾನ ರಸದ ವಿಧ್ಯೆಯನ್ನು ನಮ್ಮ ಪೂರ್ವಜರು ಸಾಮವೇದದಲ್ಲಿ ಇರಿಸಿದ್ದಾರೆ. ನಿಮ್ಮ ಹೆಸರನ್ನು, ನಿಮ್ಮ ತಾಯಿ ಅಕ್ಕರೆಯೊಂದಿಗೆ ಕರೆಯುವುದಕ್ಕೂ, ಮತ್ತೊಬ್ಬರು ಕರೆಯುವುದಕ್ಕೂ ಏನು ವ್ಯತ್ಯಾಸವಿದೆ? ನಾವು ಆಡುವ ಪದಗಳಿಗಿಂತ, ಹೇಳುವ ಧಾಟಿ ಮನುಷ್ಯನ ಮನಸ್ಸಿಗೆ ಹೇಗೆ ಪ್ರಭಾವ ಬೀರುತ್ತದೆಯೆಂದು ನಮ್ಮ ಋಷಿಗಳು ಮೊದಲೇ ಮನಗೊಂಡಿದ್ದರು. ಹಾಗೆಯೇ, ಮಂತ್ರಗಳ ಪದಗಳಿಗಿಂತ ಮಂತ್ರಗಳ ಉಚ್ಚರಣೆ  ಬಹಳ ಮುಖ್ಯವಾಗಿರುತ್ತದೆ. ಜಗತ್ತಿನ ಪ್ರತಿಯೊಂದು ಅಣುವಿನ ಕಣವು, ಒಂದು ಧ್ವನಿಗೆ ಕಂಪಿಸುತ್ತದೆ. ಆ ಧ್ವನಿಗಳನ್ನು ನಾವು ಕಂಡುಕೊಂಡಾಗ ನಾವು ಈ ಅಣುಗಳ ಮೇಲೇ ಪ್ರಭಾವ ಬೀರಿ, ನಮಗೆ ಬೇಕಾದನ್ನು...
ಅಂಕಣಪ್ರಮುಖ ಸುದ್ದಿಗಳುಮೈಸೂರು

ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ರೆಲ್ಲೋ ಪ್ಲೇಕ್ಸ್ ಪರಿಚಯಿಸಿದ ಯುವಾ ಬ್ರಿಗೇಡ್

ರೆಲ್ಲೊ ಪ್ಲೇಕ್ಸ್: ಇಂಗ್ಲೆಂಡಿನ ಬ್ಲೂ ಪ್ಲೇಕ್ಸ್ ನಿಂದ ಪ್ರೇರೇಪಿತಗೊಂಡು ಯುವಾಬ್ರಿಗೇಡ್ ಕರ್ನಾಟಕದ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸಲು ಮಾಡಿದ ಪ್ರಯತ್ನ. ಕನ್ನಡ ಎಂದರೆ ಕೆಂಪು ಮತ್ತು ಹಳದಿಗಳ ಮಿಶ್ರಣ. ಹೀಗಾಗಿ ಇಲ್ಲಿ ಇದು ರೆಲ್ಲೊ (Red and Yellow) ಪ್ಲೇಕ್ ಆಗಿದೆ. 2000 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕರ್ನಾಟಕ ಇತಿಹಾಸಕ್ಕೆ, ಸಂಸ್ಕೃತಿಗೆ, ರಾಷ್ಟ್ರದ ವೈಭವಕ್ಕೆ ಕೊಟ್ಟ ಕೊಡುಗೆ ಅಪಾರ. ಇಲ್ಲಿನ ಪ್ರತಿ ಕಲ್ಲೂ ಒಂದು ಕಥೆಯನ್ನು ಹೇಳುವಂಥದ್ದೇ. ರೆಲ್ಲೋ ಪ್ಲೇಕ್ಸ್ ಅವುಗಳನ್ನು ಗುರುತಿಸಿ ಕರ್ನಾಟಕದ ಪರಂಪರೆಯನ್ನು ಜೀವಂತವಾಗುಳಿಸುವ ಪ್ರಯತ್ನವನ್ನು ಮಾಡುತ್ತದೆ. ಕರ್ನಾಟಕವೆಂದರೆ ಬರಿಯ ಬೆಂಗಳೂರಲ್ಲ. ಬೀದರ್ ನಿಂದ ಹಿಡಿದು ಮಡಿಕೇರಿಯವರೆಗೆ ಕಾರವಾರದಿಂದ ಹಿಡಿದು ಕೋಲಾರದವರೆಗೆ ಪ್ರತಿಯೊಂದು ಜಿಲ್ಲೆಯೂ ಸಾಂಸ್ಕೃತಿಕ ಹಿನ್ನೆಲೆಯಿಂದ ಶ್ರೀಮಂತವೇ. ಅದನ್ನು ಜಾಗತಿಕ ಸ್ತರದಲ್ಲಿ ಪರಿಚಯಿಸಿಕೊಟ್ಟರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತದೆ, ಉದ್ಯೋಗಾವಕಾಶವೂ ವೃದ್ಧಿಸುತ್ತದೆ. ಪ್ರತಿ ಜಿಲ್ಲೆಯ ಅತಿ ವಿಶಿಷ್ಟವಾದ ಸ್ಥಳಗಳನ್ನು...
ಅಂಕಣ

“ವಿಶ್ವ ಸಾಗರ ದಿನ”ದ ವೈಶಿಷ್ಟತೆ

ಇಂದು" ವಿಶ್ವ ಸಾಗರ ದಿನ " ಮುಂದೊಂದು ಭರಣಿಗೆ ಉರಿವ ಈ ಧರೆಗೆ ಭೋರ್ಗರೆದು ಮಳೆಯು ಸುರಿಯುವುದು, ಭೋರ್ಗರೆದು ಮಳೆಯು ಸುರಿಯುವುದು ಅ ನಾಳೆಯು ಬಂದೇ ಬರುವುದು ಅ ನಾಳೆಯು ಬಂದೇ ಬರುವುದು .- ಎಂಬ ಪರಿಸರ ಗೀತೆಯನ್ನು ನೆನೆಯುತ್ತ ನಮ್ಮ ಪ್ರಪಂಚದಲ್ಲಿ ಸದಾ ತುಂಬಿ ಹರಿಯುವ ಎಲ್ಲಾ ಸಾಗರ ಗಳಿಗೆ ಇಂದಿನ ದಿನ ಅರ್ಪಣೆ ಮಾಡೋಣ.. "SAVE ENVIRONMENT, SAVE LIFE" ಕಾರ್ಪೊರೇಟೀಕರಣ ಸಾಗರವನ್ನು ಆಮ್ಲೀಯಗೊಳಿಸಿದೆ... ಇದು ಆಮ್ಲಮಳೆಗೆ ಕಾರಣವಾಗಿದೆ.. ಸಮುದ್ರ ಮಾಲಿನ್ಯ ತಡೆಗಟ್ಟುವ ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಸ್ವಚ್ಛ ಸುಂದರ ಭಾರತ ನಿರ್ಮಾಣದ ಗುರಿ ಹೊಂದಿರುವಾಗಲೇ, ನಮ್ಮ ನೆರೆಯ ಸಮುದ್ರವನ್ನು ಕೂಡ ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿ ರೂಪಿಸುವ ಮಹಾನ್‌ ಸಂಕಲ್ಪ ನಮ್ಮದಾಗಬೇಕು..   ೨೦೨೦ ಜೂನ್ ೮ ವಿಶ್ವ ಸಾಗರ ದಿನ ಈ ವರ್ಷದ ಥೀಮ್ ೨೦೨೦ ರ ಘೋಷವಾಕ್ಯ:...
ಅಂಕಣ

ಡಾನ್ ಎಂ ಪಿ ಜಯರಾಜ್ ಹತ್ಯೆಗೆ ಕಾರಣವಾಗಿದ್ದ ರಶೀದ್ ಕೊಲೆಯಾದ್ರೂ ಏನು… ಕೊಲೆಯ ಹಿಂದೆ ಇದ್ದವರಾದ್ರೂ ಯಾರು….??? ರಶೀದ್ ಸಾವಿನ ಸುತ್ತಾ….????

(ರೈ ಸಾವಿನ ನಂತರ ಬರೆದ ವಿಶೇಷ ಲೇಖನ ) 1987ರಲ್ಲಿ ಕೇರಳ ಮೂಲದ ವಕೀಲ ಎಂ ಎ ರಶೀದ್ ಕೊಲೆ ನಡೆದಿದ್ದು, ಅಂದಿನ ಗೃಹ ಸಚಿವ ಆರ್ ಎಲ್ ಜಾಲಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಕೇರಳ ಮೂಲದ ವಕೀಲ ಎಂ ಎ ರಶೀದ್ ಎಂಬುವರ ಶವ ಬೆಂಗಳೂರು-ಸೇಲಂ ರೈಲು ಹಳಿಯ ಪಕ್ಕ ಪತ್ತೆಯಾಗಿತ್ತು. ಆ ವಕೀಲರ ಕಕ್ಷಿದಾರ ಸದಾಶಿವನ್ ಮತ್ತು ಆರ್ ಎಲ್ ಜಾಲಪ್ಪ ನಡುವೆ ವ್ಯಾವಹಾರಿಕ ವೈಷಮ್ಯ ತಲೆದೋರಿತ್ತು. ಜಾಲಪ್ಪ ಆಗ ರಾಮಕಷ್ಣ ಹೆಗಡೆ ಸರಕಾರದಲ್ಲಿ ಗಹ ಸಚಿವರು. ಹಾಗಾಗಿ, ಈ ಪ್ರಕರಣ ರಾಜಕೀಯ ವಲಯ ಮತ್ತು ಪೊಲೀಸ್ ಇಲಾಖೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಸಿಬಿಐ ಅಧಿಕಾರಿಗಳು ಅಂದಿನ ಡಿಸಿಪಿ ನಾರಾಯಣ್, ಎಸ್ಐ ಉತ್ತಪ್ಪ ಮತ್ತು ಇತರ ನಾಲ್ವರು ಪೇದೆಗಳನ್ನು ಜೈಲಿಗೆ ತಳ್ಳಿದ್ದರು. ಗಹ ಸಚಿವರು ರಾಜೀನಾಮೆ ನೀಡಿ, ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ಪ್ರಕರಣದ...
ಅಂಕಣ

ಜೀವನದ ಕೊನೆ ಗಮ್ಯ ತಲುಪಲು ಸಹಾಯ ಮಾಡಿದರು

ಈ ಕಥೆ ಮನುಷ್ಯತ್ವ ಮತ್ತು ಕೃತಜ್ಞತೆಗೆ ಒಂದು ದೊಡ್ಡ ಉದಾಹರಣೆ. ಒಂದು ದಿನ ಬೆಂಗಳೂರಿನ ಆಯುರ್ವೇದ  ವೈದ್ಯರಿಗೆ ಉತ್ತರ ಕರ್ನಾಟಕದ ಒಂದು ಊರಿನಿಂದ ಒಂದು ಕರೆ ಬಂದಿತು. ಆ ಕಡೆಯಿಂದ ಮಾತನಾಡುವವರು ತಮ್ಮ ತಂದೆಯ ಹೆಸರು ಹೇಳಿ ಅವರಿಗೆ ಹುಷಾರವಿಲ್ಲದಾಗಿ ವೈದ್ಯರು ಅವರ ಮನೆಗೆ ತೆರಳಿ ಸ್ವಲ್ಪ ನೋಡಬೇಕೆಂದು ವಿನಂತಿಸಿದರು. ವೈದ್ಯರು ಆ ವ್ಯಕ್ತಿಯ ಹೆಸರು ಕೇಳಿಯೇ ಸಂತೋಷದಿಂದ ಒಪ್ಪಿದರು. ವೈದ್ಯರು ಆ ವ್ಯಕ್ತಿಯನ್ನು ಭೇಟಿಯಾದಾಗ ಆ ವ್ಯಕ್ತಿ ಹೇಳಿದರು "ನನ್ನ ಜೀವನದ ಒಂದು ಕೊನೆಯ ಕೆಲಸ ಬಾಕಿ ಉಳಿದಿದೆ. ಅದು ಆ ಗ್ರಂಥ ರಚನೆ. ಈಗ ನನಗೆನಾದರು ಆದರೆ ಗ್ರಂಥ ರಚನೆ ಪೂರ್ಣವಾಗುವುದಿಲ್ಲ. ಹಾಗಾಗಿ ನೀವು ನನಗೆ ಸಹಾಯ ಮಾಡಬೇಕು." ವೈದ್ಯರು ಏನು ಸಹಾಯ ಬೇಕು ಎಂದು ಕೇಳಿದಾಗ ಆ ವ್ಯಕ್ತಿ ಹೇಳಿದರು "ಈ ಗ್ರಂಥ ಮುಗಿಸಲು ಸರಿಯಾಗಿ ಒಂದು ವರುಷ ಬೇಕು. ಅಲ್ಲಿಯವರೆಗೂ ನಾನು...
ಅಂಕಣ

ಯಾರು ಈ ಸಂಭಾಜಿ ಎಂದರೆ ???

ಜೈ ಮೂಲನಿವಾಸಿ ಗೆಳೆಯರೆ, ಯಾರು ಈ ಸಂಭಾಜಿ ಎಂದರೆ ಯಾಕ ನಾವು ಅವರನ್ನ ನಮ್ಮ ಪ್ರೆರಣೆಯಾಗಿ ಓಪ್ಪಿಕೊಳ್ಳಬೇಕು. ಕುಳವಾಡಿ ಭೂಷಣ ಬಹುಜನ ಪ್ರತಿಪಾಲಕ ಛತ್ರಪತಿ ಶಿವಾಜಿ ಮಹಾರಾಜರ ವಂಶದ ಕುಡಿ ನಮ್ಮ ನಾಯಕ ಬುದ್ದ ಭೂಷಣ ಛತ್ರಪತಿ ಸಂಭಾಜಿ ರಾಜೆ. ಸಂಭಾಜಿ ರಾಜೆ ಅವರು ತಮ್ಮ ಜೀವನದಲ್ಲಿ ಒಟ್ಟು ೧೨೦ ಯುದ್ದಗಳನ್ನ ಮಾಡಿದ್ದರು, ವಿಶೇಷ ಅಂದರೆ ಅವರು ಒಂದು ಯುದ್ದವು ಸೋಲಲಿಲ್ಲ. ಸಂಭಾಜಿ ರಾಜೆ ಅವರಿಗೆ ಒಟ್ಟು ೮ ಭಾಷೆಯ ಮೇಲೆ ಹಿಡಿತವಿತ್ತು, ಅದರಲ್ಲಿ ಸಂಸ್ಕೃತಿಯು ಒಂದು. ಸಂಭಾಜಿ ರಾಜೆ ಅವರು ಬೌದ್ದರ ಧಮ್ಮದ ಮೇಲೆ "ಬುದ್ದಭೂಷಣ" ಎಂಬ ಗ್ರಂಥವನ್ನ ಬರೆದಿದ್ದರು. ಸಂಭಾಜಿ ರಾಜೆ ಅವರು ತಮ್ಮ ತಂದೆಯನ್ನ ಹತ್ಯೆಗೈದ ಯೂರೇಶಿಯನ ಬ್ರಾಹಾಮಣರನ್ನ ಆನೆ ಕಾಲ ಕೆಳಗೆ ಕೊಟ್ಟು ತುಳಿಸಿ ಕೊಂದು ಹಾಕಿದರು. ಸಂಭಾಜಿ ರಾಜೆ ಅವರು ಮಹಾನ ಪರಾಕ್ರಮಿ ಹಾಗೂ ವಿರರಾಗಿದ್ದರು ಆದ್ದ ಕಾರಣ ಅವರಿಗೆ...
ಅಂಕಣ

ಆಸೆಯೇ ದು:ಖಕ್ಕೆ ಮೂಲ. ಸುಖಕ್ಕೆ ಮೂಲ ಕಾರಣ…?

ಸುಖ ಮತ್ತು ದು:ಖ ಒಂದನ್ನೊಂದು ಒಟ್ಟಿಗೆ ಭೇಟಿಯಾದುದ್ದನ್ನು ಯಾರು ನೋಡಿರಲು ಸಾಧ್ಯವಿಲ್ಲ. ಆದರೆ ಸುಖವನ್ನ ಹರಸುತ್ತ ಹೊರಟವರು ಸುಖಕ್ಕೆ ಬದಲಾಗಿ ದು:ಖವನ್ನು ಹಾಗು ದು:ಖದಲ್ಲಿ ಇರುವವರು ದು:ಖದ ನಂತರ ಸುಖವನ್ನು ಭೇಟಿಯಾಗಿರಬಹುದು. ಆದರೆ ಸುಖ ಮತ್ತು ದು:ಖ ಒಟ್ಟಿಗೆ ಭೇಟಿಯಾಗಿರುವುದನ್ನು ನೋಡಿರಲು ಸಾಧ್ಯವೆ? ಯಾರಾದರೂ ಭೇಟಿ ಮಾಡಿರುವವರು ಇರಬಹುದೆ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ಸಿಗುವ ಉತ್ತರ ಪ್ರಶ್ನೆಯಾಗಿಯೇ ಉಳಿಯಬಹುದು. ಬುದ್ಧ ಆಸೆಯೇ ದು:ಖಕ್ಕೆ ಮೂಲ ಕಾರಣ ಎಂದು ಹೇಳಿರುವುದು ಗೊತ್ತೇ ಇದೆ. ಆದರೆ ಸುಖಕ್ಕೆ ಮೂಲ ಕಾರಣ ಯಾವುದು? ಬುದ್ಧ ಬರೀ ಆಸೆ ಮತ್ತು ದು:ಖದ ಬಗ್ಗೆ ಹೇಳಿ, ಸುಖದ ಮೂಲ ಕಾರಣದ ಬಗ್ಗೆ ಹೇಳದೆ ಹೋದಾಗ ಸುಖವನ್ನ ಬಯಸುವ ನಮಗೆ ಬುದ್ಧ ಏಕೆ ಸುಖದ ಮೂಲ ಕಾರಣವನ್ನ ಒಂದು ವಾಕ್ಯದಲ್ಲಿ ಹೇಳಲಿಲ್ಲ? ಎಂಬ ಪ್ರಶ್ನೆ ಬಾರದೆ ಇರದು. ಈಗಲೂ ಕೆಲವರು, ಹೌದು ಸುಖಕ್ಕೆ ಮೂಲಕಾರಣ...
error: Content is protected !!