archiveMay 2020

ಪ್ರಮುಖ ಸುದ್ದಿಗಳುಮನರಂಜನೆ

78 ವರ್ಷಗಳಲ್ಲಿ ಕಲಿಯದೇ ಇರುವುದನ್ನು ಲಾಕ್ ಡೌನ್ ವೇಳೆಯಲ್ಲಿ ಕಲಿತೆ; ಬಚ್ಚನ್ ಅನಿಸಿಕೆ

ಮುಂಬೈ: ಲಾಕ್ ಡೌನ್ ಸಮಯದಲ್ಲಿ ಕಲಿತಷ್ಟು 78 ವರ್ಷಗಳಲ್ಲಿ ಕಲಿಯಲು ಸಾಧ್ಯವಾಗಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಲಾಕ್ ಡೌನ್ ನಂತರ ಅವರು ಇನ್ನೂ ಕಾರ್ಯನಿರತರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡಪತಿಯ ನೋಂದಣಿಗಾಗಿ ಕೆಲವು ಪ್ರೋಮೋ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ. ಅಮಿತಾಬ್‌ಗೆ ಲಾಕ್‌ಡೌನ್ ಹಂತವು ಪಾಠಕ್ಕಿಂತ ಕಡಿಮೆಯಿಲ್ಲ, ಹರೆಯದ ಹಾಗೂ...
ಪ್ರಮುಖ ಸುದ್ದಿಗಳು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿ ನೋಟಿಸ್

ಚಾಮರಾಜನಗರ(ಮೇ.31): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಈಗಾಗಲೇ ನಿರ್ಮಾಣ ಮಾಡಿರುವ ಎಂಟು ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಇನ್ನು 7 ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮುಂದಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿ ಕೇಂದ್ರ ಸರ್ಕಾರ...
ಪ್ರಮುಖ ಸುದ್ದಿಗಳುಬೆಂಗಳೂರು

ಕೊರೋನಾ ಎಫೆಕ್ಟ್: ರಾಜ್ಯದಿಂದ ಕಾಲ್ಕಿತ್ತ 4 ರಿಂದ 5 ಲಕ್ಷ ಕಾರ್ಮಿಕರು: ಸಂಕಷ್ಟದಲ್ಲಿ ಕೈಗಾರಿಕೆಗಳು

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಹೊರ ರಾಜ್ಯಗಳ ಕಾರ್ಮಿಕರು ವಲಸೆ ಹೋಗಿದ್ದಾರೆ. ನುರಿತ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದು, ಪರಿಣಾಮ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲದ ತೀವ್ರ ಸಮಸ್ಯೆ ಎದುರಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಪರ್ಯಾಯವಿಲ್ಲ. ಬೃಹತ್ ಕೈಗಾರಿಕೆಗಳಲ್ಲಿ ರೊಬೋಟಿಕ್, ಆಟೋಮೇಷನ್ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೈಗಾರಿಕೆಗಳನ್ನು ಮುನ್ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ....
ಪ್ರಮುಖ ಸುದ್ದಿಗಳುಬೆಂಗಳೂರು

ಬುಧವಾರ ಮತ್ತೆ ಬಿಜೆಪಿ ಬಂಡಾಯ ಶಾಸಕರ ಸಭೆ; ಸಿಎಂ ಯಡಿಯೂರಪ್ಪಗೆ ಸಂಕಟ

ಬೆಂಗಳೂರು (ಮೇ 31): ಕೊರೋನಾದಿಂದಾಗಿ ಕಳೆದ ಎರಡೂವರೆ ತಿಂಗಳಿಂದ ತಣ್ಣಗಾಗಿದ್ದ ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಗಾರಿಕೆಯ ಜೊತೆಗೆ ಬಿಜೆಪಿ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಬಿಜೆಪಿಯಲ್ಲಿ ಎದ್ದಿರುವ ಬಂಡಾಯವನ್ನು ಶಮನ ಮಾಡಲು ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಬುಧವಾರ ಮತ್ತೊಮ್ಮೆ ಸಭೆ ಸೇರಲು ಬಂಡಾಯ ಶಾಸಕರು ತೀರ್ಮಾನಿಸಿದ್ದಾರೆ. 2 ದಿನಗಳ ಹಿಂದಷ್ಟೇ ಬಿಜೆಪಿ ಬಂಡಾಯ ಶಾಸಕ ಉಮೇಶ್ ಕತ್ತಿ...
ಪ್ರಮುಖ ಸುದ್ದಿಗಳುಬೆಂಗಳೂರು

ಸಿಎಂ ಜೊತೆ ಉತ್ತಮ ಸಂಬಂಧಕ್ಕಾಗಿ ನಿರಾಣಿ ಭಿನ್ನರಿಗೆ ಇಟ್ಟರಾ ಗುರಾಣಿ ? : ಬಂಡಾಯ ಶಾಸಕರಲ್ಲಿ ಉಂಟಾಗಿದೆ ಆಕ್ರೋಶ

ಬೆಂಗಳೂರು(ಮೇ.31): ಆಡಳಿತಾರೂಢ ಬಿಜೆಪಿಯಲ್ಲಿನ ಬಂಡಾಯ ಹೊಸ ಟ್ವೀಸ್ಟ್ ಪಡೆಯುತ್ತಿದೆ. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಅದೇ ಪಕ್ಷದ ಶಾಸಕರಾದ ಉಮೇಶ ಕತ್ತಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುರುಗೇಶ್ ನಿರಾಣಿ ನಾನು ಭಿನ್ನಮತೀಯರ ಸಭೆಯಲ್ಲಿ ಪಾಲ್ಗೊಂಡಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವುದೇ ಶಾಸಕ ಉಮೇಶ್ ಕತ್ತಿ ಹಾಗೂ ಶಾಸಕ ಬಸವನಗೌಡ ಪಾಟೀಲ ಯತ್ನಾಳರ ಕೋಪಕ್ಕೆ ಕಾರಣವಾಗಿದೆ. ಸಚಿವ ಜಗದೀಶ್ ಶೆಟ್ಟರ್...
ಮನರಂಜನೆ

ಅಂತೂ ಇಂತು ಬಾಹುಬಲಿಯ ಬಲ್ಲಾಳನಿಗೆ ಮದುವೆ ಯೋಗ

ಟಾಲಿವುಡ್ ನಟ ರಾಟಾ ದಗ್ಗುಬಾಟಿ ಗೆಳತಿ ಮಿಹಿಕಾ ಬಜಾಜ್ ಅವರನ್ನು ಪ್ರೀತಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅದಾದ ಕೆಲವು ದಿನಗಳ ನಂತರ ಇವರಿಬ್ಬರು ಎಂಗೇಜ್ಮ್ಮೆಂಟ್ ಕೂಡ ಆದರು. ಲಾಕ್ಡೌನ್ ಸಮಯದಲ್ಲಿ ಎರಡು ಕುಟುಂಬಗಳು ಸೇರಿ ಸಿಂಪಲ್ಲಾಗಿ ರಾಣಾ ಮತ್ತು ಮಿಹಿಕಾ ನಿಶ್ಚಿತಾರ್ಥ ನೆರವೇರಿತು. ಆದರೆ ಇವರ ವಿವಾಹ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿರಲಿಲ್ಲ. ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ಮೇ 12ರಂದು ಮಿಹಿಕಾರ ಜೊತೆಗಿನ ಫೋಟೋ ಹಂಚಿಕೊಳ್ಳುವ...
ಪ್ರಮುಖ ಸುದ್ದಿಗಳುಬಳ್ಳಾರಿ

ಪೊಲೀಸ್ ಪೇದೆಗೆ ಕೊರೊನಾ ಅಟ್ಯಾಕ್, ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್ ! ಆತಂಕದಲ್ಲಿ 35 ಪೊಲೀಸ್ ಕುಟುಂಬಗಳು

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲಿ ಪೊಲೀಸ್ ಪೇದೆಗೆ ಕೋವಿಡ್-19 ಪಾಸಿಟಿವ್ ಹಿನ್ನಲೆಯಲ್ಲಿ ಕೊಟ್ಟೂರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಠಾಣೆಯ 35 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ರಜೆಯಲ್ಲಿ ದಾವಣಗೆರೆಗೆ ತೆರಳಿದ್ದ ಕೊಟ್ಟೂರು ಪೊಲೀಸ್ ಠಾಣೆಯ ಪೇದೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಜೆಯ ಬಳಿಕ ಇವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಕಾರಣದಿಂದಾಗಿ ಠಾಣೆಯ ಪಿಎಸ್ ಐ ಸೇರಿದಂತೆ ಎಲ್ಲಾ...
ಪ್ರಮುಖ ಸುದ್ದಿಗಳುಬೆಂಗಳೂರು

ಲಾಕ್ ಡೌನ್ ಹಿನ್ನೆಲೆ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಸ್ಥಗಿತ

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ನೇಮಕಾತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 431 ಸಿವಿಲ್ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದ 125 ಪೊಲೀಸ್ ಸಬ್ ಇನ್ಸ್ ಪೆಕ್ಟ್ ರ್ ಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿತ್ತು.ಕೂಡಲೇ ಅರ್ಹ ಅಭ್ಯರ್ಥಿಳಿಂದ ಅರ್ಜಿ ಆಹ್ವಾನಿಸುವುದಾಗಿ ತಿಳಿಸಲಾಗಿತ್ತು. ಇದಕ್ಕಾಗಿ ಎಲ್ಲಾ ರೀತಿಯ...
ದಾವಣಗರೆಪ್ರಮುಖ ಸುದ್ದಿಗಳು

ಕೊರೊನಾ ವಾರ್ಡ್ನಲ್ಲಿ ಕಾರ್ಯನಿರ್ವಹಿಸಿದ್ದ ಮೂವರಿಗೆ ಕೊರೊನಾ!

ದಾವಣಗೆರೆ- ದಾವಣಗೆರೆಯಲ್ಲಿ ಇಂದು ಆರು ಕೊರೊನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 156ಕ್ಕೇರಿದೆ. ಇವರಲ್ಲಿ 17 ಮಂದಿ ಇಂದು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 121 ಮಂದಿ ಗುಣಮುಖರಾಗಿದ್ದು, ಈಗ ಕೇವಲ 31 ಸಕ್ರಿಯ ಪ್ರಕರಣಗಳಿವೆ. ಪೆ.-1483, ಪೆ.-1488, ಪೆ.-1656, ಪೆ.-1657, ಪೆ.-1658, ಪೆ.-1808, ಪೆ.-1809, ಪೆ.-1852, ಪೆ.-1963, ಪೆ.-1964, ಪೆ.-2274, ಪೆ.-2275, ಪೆ.-2277, ಪೆ.-2278, ಪೆ.-2281, ಪೆ.-1992, ಪೆ.-625 ಇಂದು ಬಿಡುಗಡೆ ಹೊಂದಿದ್ದಾರೆ. ಇಂದು ದಾಖಲಾದ ಆರು ಪ್ರಕರಣಗಳಲ್ಲಿ,...
ಪ್ರಮುಖ ಸುದ್ದಿಗಳುಬೆಂಗಳೂರು

ದೇಶದ ಪ್ರಮುಖ ಸ್ವಾಮೀಜಿಗಳ ಜೊತೆ ಆರ್ಎಸ್ಎಸ್ ಮುಖಂಡರ ವಿಡಿಯೋ ಸಂವಾದ

ಬೆಂಗಳೂರು, - ಆರ್ಎಸ್ಎಸ್ ಸರ ಸಂಚಾಲಕರಾದ ಮೋಹನ್ ಭಾಗವತ್ ಮತ್ತು ಸಹ ಕಾರ್ಯವಾಹ ಸುರೇಶ್ ಭಯ್ಯಾಜಿ ಅವರು ಹಿಂದೂ ಧರ್ಮ ಆಚಾರ್ಯ ಮಹಾಸಭಾ ಜೊತೆಯಲ್ಲಿ ಋಷಿ, ಕೃಷಿ ಹಾಗೂ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಸ್ವಾಮೀಜಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಅವಧೇಶಾನಂದ ಸ್ವಾಮೀಜಿ, ಶ್ರೀ ಪರಮಾನಂದ ಸ್ವಾಮೀಜಿ ಮತ್ತು ಯೋಗ ಗುರು ಶ್ರೀ...
1 2 3 14
Page 1 of 14
error: Content is protected !!